![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Oct 25, 2021, 11:30 AM IST
ಹೊಸದಿಲ್ಲಿ : ತಮಿಳುಸೂಪರ್ ಸ್ಟಾರ್ ರಜನಿಕಾಂತ್‌ಗೆ ಅ.25 ಬಹಳ ವಿಶೇಷ ದಿನವಾಗಿದ್ದು, ಒಂದೆಡೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದು, ಇನ್ನೊಂದೆಡೆ ಮಗಳು ಸೌಂದರ್ಯ ತಯಾರಿಸಿರುವ “ಹೂಟೆ’ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ.
”ಈ ದಿನ ಎರಡು ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. “ಅ.25ರಂದು ನಾನು ದೆಹಲಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಹಾಗೆಯೇ ನನ್ನ ಮಗಳು ಸೌಂದರ್ಯ ತಯಾರಿಸಿರುವ “ಹೂಟೆ’ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ. ಆ ಆ್ಯಪ್ ಜನರಿಗೆ ಅವರ ವಿಚಾರಗಳನ್ನು ಮಾತಿನ ಮೂಲಕ ಹೇಳಿ ಕೊಳ್ಳಲು ವೇದಿಕೆ ಕಲ್ಪಿಸಲಿದ್ದು, ಅದರಲ್ಲಿ ಮೊದಲ ಧ್ವನಿ ನನ್ನದೇ ಆಗಿರಲಿದೆ” ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಪ್ರೀತಿಯ ತಲೈವಾ,ಭಾರತದ ಅತ್ಯುನ್ನತ ಚಲನಚಿತ್ರ ಗೌರವ 51 ನೇ ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಪಡೆಯುತ್ತಿದ್ದಾರೆ, ಪ್ರಶಸ್ತಿಯನ್ನು 2019ರ ಎಪ್ರಿಲ್ ತಿಂಗಳಿನಲ್ಲೇ ಪ್ರಕಟಿಸಲಾಗಿತ್ತಾದರೂ ಕೋವಿಡ್ ಕಾರಣದಿಂದ ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ.
ಕನ್ನಡಿಗರಾಗಿದ್ದ ರಜನಿಕಾಂತ್ ಕೆ.ಬಾಲಚಂದರ್ ನಿರ್ದೇಶಿದ್ದ’ಅಪೂರ್ವ ರಾಗಂಗಳ್’ ಎನ್ನುವ ತಮಿಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದರು. 2 ನೇ ಚಿತ್ರದಲ್ಲಿ ಪುಟ್ಟಣ್ಣ ನಿರ್ದೇಶನದ ಕನ್ನಡದ ‘ಕಥಾ ಸಂಗಮ’ದಲ್ಲಿ ನಟಿಸಿದ್ದರು.
ರಜನಿಕಾಂತ್ ಪ್ರಸ್ತುತ ತಮ್ಮ 162 ನೇ ”ದರ್ಬಾರ್” ಎನ್ನುವ ತ್ರಿಭಾಷಾ ಚಿತ್ರದಲ್ಲಿ ನಟಿಸುತ್ತಿದ್ದು, ನಯನತಾರ , ಸುನಿಲ್ ಶೆಟ್ಟಿ ಮೊದಲಾದವರ ತಾರಾಗಣ ಚಿತ್ರದಲ್ಲಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.