ಶಾಂತಿಯ ಆಟ ಶುರು: ಪಶ್ಚಿಮ ಬಂಗಾಲದಲ್ಲಿ ದೀದಿಗೆ ರಕ್ಷಣ ಸಚಿವರ ತಿರುಗೇಟು
Team Udayavani, Mar 17, 2021, 9:30 AM IST
ದಾಸ್‌ಪುರ: ಪಶ್ಚಿಮ ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದರೆ ಕೇವಲ ಶಾಂತಿ ಹಾಗೂ ಅಭಿವೃದ್ಧಿಯ “ಆಟ’ ಶುರುವಾಗುತ್ತದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
ಅತ್ತ ಮಮತಾ ಅವರು ಬಿಜೆಪಿ ವಿರುದ್ಧ ಆರೋಪ ಹೊರಿಸುತ್ತಲೇ ಇತ್ತ ದಾಸ್‌ಪುರದಲ್ಲಿ ಚುನಾವಣ ಪ್ರಚಾರ ನಡೆಸಿದ ರಾಜನಾಥ್, 294ರ ಪೈಕಿ 200ಕ್ಕೂ ಹೆಚ್ಚು ಸೀಟುಗಳಲ್ಲಿ ಬಿಜೆಪಿ ಜಯಗಳಿಸುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊರಗಿನವರು-ಒಳಗಿನವರು ಎಂಬ ಟಿಎಂಸಿಯ ಪ್ರಚಾರ ತಂತ್ರಕ್ಕೆ ತಿರುಗೇಟು ನೀಡಿದ ರಾಜನಾಥ್, ಕೇಸರಿ ಪಕ್ಷವು ಜನ ಸಂಘದ ಇಂದಿನ ಅವತಾರವಾಗಿದೆ. ಜನ ಸಂಘವನ್ನು ಸ್ಥಾಪಿಸಿದವರೇ ಇಲ್ಲಿನ ಮಣ್ಣಿನ ಮಗ ಶ್ಯಾಮ್ ಪ್ರಸಾದ್ ಮುಖರ್ಜಿ ಎಂದಿದ್ದಾರೆ. ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉತ್ತರಪ್ರದೇಶ ಅಥವಾ ಬಿಜೆಪಿ ಆಡಳಿತದಲ್ಲಿರುವ ಇತರ ರಾಜ್ಯಗಳಿಗೆ ಹೋಗಿ ನೋಡಿ, ಅಲ್ಲಿ ಹೇಗೆ ಶಾಂತಿ ನೆಲೆಸಿದೆ ಎಂಬುದು ತಿಳಿಯುತ್ತದೆ ಎಂದೂ ಅವರು ಹೇಳಿದ್ದಾರೆ.
ದೀದಿಯಲ್ಲಿ ಬದಲಾವಣೆಗೆ ಬಿಜೆಪಿ ಕಾರಣ: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ಜನರ ಮನಸ್ಥಿತಿಯೂ ಬದಲಾಗಿದೆ. ಇದೇ ಬದಲಾವಣೆಯಿಂದಾಗಿ ಮಮತಾ ಬ್ಯಾನರ್ಜಿ ಅವರು ಈಗ ದೇವಸ್ಥಾನಗಳಿಗೆ ಭೇಟಿ ನೀಡಲು, ಚಂಡೀ ಪಾಠ್ ಪಠಿಸಲು ಕಾರಣವಾಗಿದೆ ಎಂದು ಬಲರಾಂಪುರದಲ್ಲಿ ಪ್ರಚಾರ ನಡೆಸಿದ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಪ.ಬಂಗಾಲದ ಬಿಜೆಪಿಯಲ್ಲಿ ವಲಸಿಗರು-ಮೂಲ ನಿವಾಸಿಗಳ ಜಗಳ ಆರಂಭವಾಗಿದೆ. ಹೊರಗಿನಿಂದ ಬಂದವರಿಗೇ ಟಿಕೆಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸತತ 2ನೇ ದಿನವಾದ ಮಂಗಳವಾರವೂ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ವಾಕಿಂಗ್, ಜಿಮ್, ಮೀನು ಮಾರ್ಕೆಟ್: ತಮಿಳುನಾಡಿನ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಎಂಎನ್‌ಎಂ ಮುಖ್ಯಸ್ಥ ಕಮಲ್ ಹಾಸನ್ ಅವರು ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಮಂಗಳವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಅವರು, ರೇಸ್ ಕೋರ್ಸ್ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದವರೊಂದಿಗೆ ಕೆಲವು ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ರಾಮನಾಥಪುರಂನ ಜಿಮ್ನಾಶಿಯಂ, ರಸ್ತೆ ಬದಿಯ ಟೀ ಅಂಗಡಿ, ಉಕ್ಕಡಂನ ಮೀನು ಮಾರುಕಟ್ಟೆಗೂ ತೆರಳಿ ಮತದಾರರ ಮನದಾಳ ಅರಿಯುವ ಪ್ರಯತ್ನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.