Ram Mandir: ಅಯೋಧ್ಯೆ ರಾಮಮಂದಿರ ಗರ್ಭ ಗುಡಿಯೊಳಗೆ ಬಾಲರಾಮನ ಪ್ರತಿಷ್ಠಾಪನೆ
ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ
Team Udayavani, Jan 18, 2024, 3:13 PM IST
ಲಕ್ನೋ(ಅಯೋಧ್ಯೆ): ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಬಾಲರಾಮನ ಮೂರ್ತಿಯನ್ನು ಮಂದಿರದ ಗರ್ಭ ಗುಡಿಯೊಳಗೆ ಪ್ರತಿಷ್ಠಾಪನೆ ನೆರವೇರಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Super Over; ಔಟಾದರೂ ರೋಹಿತ್ ಗೆ ಮತ್ತೆ ಬ್ಯಾಟಿಂಗ್ ಅವಕಾಶ ಸಿಕ್ಕಿದ್ಯಾಕೆ? ನಿಯಮವೇನು?
ಮೂಲಗಳ ಪ್ರಕಾರ, ಜನವರಿ 21ರಂದು ಪ್ರಧಾನಿ ಮೋದಿ ಅವರು ಲಕ್ನೋಗೆ ಆಗಮಿಸಲಿದ್ದು, ಜನವರಿ 22ರಂದು 12:15ರಿಂದ 12:45ರೊಳಗೆ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ ಎಂದು ತಿಳಿಸಿದೆ. ಭವ್ಯ ರಾಮಮಂದಿರವು 161 ಅಡಿಗಳಷ್ಟು ಎತ್ತರವಿದ್ದು, ಸುಮಾರು 380 ಅಡಿ ಉದ್ದ ಹಾಗೂ 250 ಅಡಿ ಅಗಲವಿರುವುದಾಗಿ ವರದಿ ವಿವರಿಸಿದೆ.
ಪ್ರಾಣಪ್ರತಿಷ್ಠೆಯ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಬುಧವಾರ ಕಲಶ ಪೂಜೆ ನೆರವೇರಿತ್ತು. ರಾತ್ರಿ ಕ್ರೇನ್ ಮೂಲಕ ಬಾಲರಾಮನ ಮೂರ್ತಿಯನ್ನು ರಾಮಮಂದಿರದ ಒಳಗೆ ತರಲಾಗಿತ್ತು. ಜನವರಿ 21ರವರೆಗೆ ವಿವಿಧ ಪೂಜೆ, ಹೋಮ-ಹವನ ನಡೆಯಲಿದ್ದು, ಜನವರಿ 22ರಂದು ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ.
ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ:
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಜೊತೆಗೆ ಜಗತ್ತಿನಾದ್ಯಂತ ಶ್ರೀರಾಮನ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳ ಪುಸ್ತಕಗಳನ್ನೂ ಅನಾವರಣಗೊಳಿಸಿದರು.
Ayodhya Ram Temple ‘Pran Pratishtha’ to be held on 22nd January; Lord Ram’s idol has been placed in the ‘Garbha Griha; of the temple
(Picture source: VHP) pic.twitter.com/syGqc0zzIB
— ANI (@ANI) January 18, 2024
ಬಿಡುಗಡೆಗೊಳಿಸಿರುವ ಆರು ಅಂಚೆ ಚೀಟಿಗಳಲ್ಲಿ ರಾಮಮಂದಿರ, ಗಣಪತಿ, ಹನುಮಂತ, ಜಟಾಯು, ಕೇವತ್ ರಾಜ್ ಮತ್ತು ಮಾ ಶಬರಿಯನ್ನು ಒಳಗೊಂಡಿದೆ. ಅದೇ ರೀತಿ ಅಮೆರಿಕ, ನ್ಯೂಜಿಲ್ಯಾಂಡ್, ಸಿಂಗಾಪುರ್, ಕೆನಡಾ, ಕಾಂಬೋಡಿಯಾ, ಬ್ರಿಟನ್ ಸೇರಿದಂತೆ 20 ದೇಶಗಳ ಭಗವಾನ್ ಶ್ರೀರಾಮನ ಅಂಚೆ ಚೀಟಿಯನ್ನೊಳಗೊಂಡ 48 ಪುಟಗಳ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು.
ಜ.22ರಂದು ಉತ್ತರಪ್ರದೇಶದಲ್ಲಿ ಶಾಲಾ ಕಾಲೇಜಿಗೆ ರಜೆ:
ಜನವರಿ 22ರಂದು ಬಾಲರಾಮನ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ, ಹರ್ಯಾಣದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉಜ್ಜೈನ್ ನಿಂದ 4 ಲಕ್ಷ ಲಡ್ಡು ಅಯೋಧ್ಯೆಗೆ:
ಜನವರಿ 22ರಂದು ನಡೆಯಲಿರುವ ಪ್ರಾಣಪ್ರತಿಷ್ಠೆ ಸಮಾರಂಭದ ಹಿನ್ನೆಲೆಯಲ್ಲಿ ಉಜ್ಜೈನ್ ಮಹಾಕಾಲೇಶ್ವರ್ ದೇವಾಲಯದಿಂದ ಅಯೋಧ್ಯೆಗೆ 4 ಲಕ್ಷ ಲಡ್ಡುಗಳನ್ನು ಶುಕ್ರವಾರ ಕಳುಹಿಸಲಾಗುವುದು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.