ಚಂದ್ರನಿಗೆ ಸನಿಹವಾದ ರಶೀದ್ – ಇತಿಹಾಸ ನಿರ್ಮಾಣಕ್ಕೆ ಸಜ್ಜಾದ UAE
Team Udayavani, Apr 26, 2023, 8:20 AM IST
ನವದೆಹಲಿ: ಬಾಹ್ಯಾಕಾಶದಲ್ಲಿ ಏನಿದೆ ಎಂದು ಬಗೆದುನೋಡಲು ವಿಜ್ಞಾನಿಗಳು ಮಾಡುತ್ತಿರುವ ಸಾಹಸಗಳು ಒಂದೆರಡಲ್ಲ. ಈಗ ಅಂತಹದ್ದೊಂದು ಸಾಹಸಕ್ಕೆ ಯುಎಇ ಕೈಹಾಕಿದೆ. ಅದು ರಶೀದ್ ಹೆಸರಿನ ರೋವರ್ ಅನ್ನು ಜಪಾನಿನ ಹಕುಟೊ-ಆರ್ ಎಂಬ ಲ್ಯಾಂಡರ್ ಮೂಲಕ ಚಂದ್ರನಲ್ಲಿಳಿಸುವ ಸನಿಹದಲ್ಲಿದೆ. ಒಂದು ವೇಳೆ ಯಶಸ್ವಿಯಾಗಿ ಈ ಕಾರ್ಯ ಮುಗಿದಿದ್ದೇ ಆದರೆ ಎರಡು ಇತಿಹಾಸ ನಿರ್ಮಾಣವಾಗಲಿದೆ. ವಿಶ್ವದಲ್ಲೇ ಮೊದಲನೇ ಬಾರಿಗೆ ಅನ್ವೇಷಣಾ ಸಾಧನವನ್ನು ಚಂದ್ರನ ಮೇಲಿಳಿಸಿದ ಖ್ಯಾತಿ ಜಪಾನಿನ ಖಾಸಗಿ ಸಂಸ್ಥೆ ಹಕುಟೊ-ಆರ್‌ಗೆ ಬರಲಿದೆ. ಅಮೆರಿಕ, ಚೀನಾ, ರಷ್ಯಾ ನಂತರ ಈ ವಿಕ್ರಮ ಸಾಧಿಸಿದ ಗೌರವ ಯುಎಇಗೆ ಬರಲಿದೆ.
ಏನಿದು ರಶೀದ್? ಹಕುಟೊ-ಆರ್?
ಜಪಾನಿನ ಹಕುಟೊ-ಆರ್ ಖಾಸಗಿ ಲ್ಯಾಂಡರ್ ಸಾಧನದ ಮೂಲಕ ಯುಎಇಯ ರಶೀದ್ ರೋವರ್ ಚಂದ್ರನಲ್ಲಿಗೆ ಪ್ರಯಾಣ ಬೆಳೆಸಿದೆ. ಸ್ಪೇಸ್‌ಎಕ್ಸ್ ರಾಕೆಟ್ ಮೂಲಕ 2022, ಡಿಸೆಂಬರ್‌ನಲ್ಲಿ ರಶೀದ್ ರೋವರ್ ಉಡಾವಣೆಗೊಂಡಿತು. ಈಗಾಗಲೇ 5 ತಿಂಗಳು ಮುಗಿದಿದೆ. ಇನ್ನು ಚಂದ್ರನ ಮೇಲಿಳಿಯಲು ರಶೀದ್‌ಗೆ ಅತ್ಯಂತ ಕನಿಷ್ಠ ಸಮಯ ಸಾಕು. ಗ್ರಹವೊಂದರ ಮೇಲ್ಮೆ„ಯನ್ನು ಅಧ್ಯಯನ ಮಾಡುವ, ಚಿತ್ರ ತೆಗೆಯುವ ಸಾಮರ್ಥ್ಯ ರೋವರ್‌ಗಳಿಗಿರುತ್ತದೆ. ಯುಎಇ ರೋವರ್‌ಗೆ ಆಧುನಿಕ ಯುಎಇ ನಿರ್ಮಾತೃ ಎಂಬ ಗೌರವ ಹೊಂದಿರುವ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಖೂ¤ಮ್ ಹೆಸರನ್ನಿಡಲಾಗಿದೆ.
ರಶೀದ್ ಕಾರ್ಯವೇನು?
10 ಕೆಜಿ ತೂಕದ ರಶೀದ್ ರೋವರ್, ಎರಡು ಕ್ಯಾಮೆರಾಗಳನ್ನು ಹೊಂದಿದೆ. ಇವು ಚಂದ್ರನ ಮಣ್ಣಿನ ಚಿತ್ರಗಳನ್ನು ತೆಗೆಯುತ್ತವೆ. ಚಂದ್ರನಲ್ಲಿರುವ ಜೀವದ್ರವ್ಯದ ಪ್ರಮಾಣವೇನು, ಅದು ಹೇಗಿದೆ, ಸೌರವ್ಯೂಹ ವಿಕಿರಣಗಳೊಂದಿಗೆ ರೋವರ್ ಹೇಗೆ ಸ್ಪಂದಿಸುತ್ತದೆ ಎಂಬುದನ್ನೆಲ್ಲ ವಿಜ್ಞಾನಿಗಳು ಹುಡುಕಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.