ಪಡಿತರ ಆಧಾರ, ಎಪಿಎಲ್ ಚೀಟಿದಾರರ ಹಾಹಾಕಾರ
ಆಧಾರ್ ಲಿಂಕ್ ಮಾಡದ, ಸಾಮಗ್ರಿ ಪಡೆಯದವರ ಕಾರ್ಡ್ ನಿಷ್ಕ್ರಿಯ
Team Udayavani, Jun 30, 2020, 6:20 AM IST
ಉಡುಪಿ: ಆಧಾರ್ ಲಿಂಕ್ ಮಾಡದ್ದರಿಂದ ರಾಜ್ಯದ ಹಲವು ಮಂದಿ ಎಪಿಎಲ್ ಪಡಿತರದಾರರ ರೇಶನ್ ಕಾರ್ಡ್‌ಗಳು ನಿಷ್ಕ್ರಿಯ ಗೊಂಡಿವೆ. ಮಾಹಿತಿ ಕೊರತೆಯಿಂದ ಈ ವಿಚಾರ ಗಮನಕ್ಕೆ ಬಾರದೆ, ಈಗ ಕಾರ್ಡ್‌ಗಾಗಿ ಅಲೆದಾಡುವಂತಾಗಿದೆ.
ಆಧಾರ್ ಲಿಂಕ್ ಮಾಡಿಸಿಕೊಂಡವರಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರೇ ಹೆಚ್ಚು. ಎಪಿಎಲ್ ಕಾರ್ಡ್‌ದಾರರಲ್ಲಿ ಅನೇಕರು ಪಡಿತರ ಪಡೆಯುತ್ತಿಲ್ಲ, ಹೀಗಾಗಿ ಆಧಾರ್ ಲಿಂಕ್ ಗೊಡವೆಗೆ ಹೋಗಿರಲಿಲ್ಲ. ಸ್ಮಾರ್ಟ್‌ಫೋನ್ ಮೂಲಕ ಲಿಂಕಿಂಗ್‌ಗೆ ಅವಕಾಶ ಇದ್ದರೂ ಅನೇಕರಿಗೆ ಗೊತ್ತಿಲ್ಲದೆ ಮಾಡಿಸಿ ಕೊಂಡಿಲ್ಲ. ಲಿಂಕ್ ಮಾಡಿಸಿ ಕೊಳ್ಳದವರ ಕಾರ್ಡ್‌ಗಳು ಈಗ ನಿಷ್ಕ್ರಿಯಗೊಂಡಿವೆ, ಮುಂದೆ ಇನ್ನಷ್ಟು ಮಂದಿಯ ಚೀಟಿಗಳು ನಿಷ್ಕ್ರಿಯವಾಗುವ ಸಾಧ್ಯತೆ ಇದೆ.
ಲಾಕ್‌ಡೌನ್ ಸಮಯದಲ್ಲಿ ಪಡಿತರಗೆ ಹೋದಾಗ ಚೀಟಿಗಳು ನಿಷ್ಕ್ರಿಯ ಗೊಂಡಿರುವುದು ಗಮನಕ್ಕೆ ಬಂದಿದೆ. ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದರೂ ದೀರ್ಘ ಕಾಲದಿಂದ ಪಡಿತರ ಪಡೆಯದೆ ಇದ್ದುದರಿಂದ ಕಾರ್ಡ್‌ದಾರರ ವಾಸ್ತವ್ಯದ ಕುರಿತು ಆಹಾರ ಇಲಾಖೆಗೆ ಮಾಹಿತಿ ಸಿಗದೆ, ಪಡಿತರ ಚೀಟಿಗೆ ಕೊಟ್ಟಿರುವ ದಾಖಲೆ ತಾಳೆಯಾಗದೆ ನಿಷ್ಕ್ರಿಯಗೊಂಡಿರುವ ಸಾಧ್ಯತೆ ಇದೆ.
ಹೊಸ ಪಡಿತರ ಚೀಟಿ ಪಡೆಯಿರಿ
ನಿಷ್ಕ್ರಿಯ ರೇಶನ್ ಕಾರ್ಡ್ ಮತ್ತು ಮನೆಯ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಜತೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಆಧಾರ್‌ನಲ್ಲಿ ಮೊಬೈಲ್ ನಂಬರ್ ದಾಖ ಲಾಗಿರುವ ಸದಸ್ಯರು ಪಂಚಾಯತ್‌ಗೆ ಹೋಗಬೇಕ ಗಿಲ್ಲ. ಮೊಬೈಲ್‌ಗೆ ಬರುವ ಒಟಿಪಿ ತಿಳಿಸಿದರೆ ಸಾಕು. ಕುಟುಂಬದ ಓರ್ವ ಸದಸ್ಯ ಬೆರಳಚ್ಚು ನೀಡಿದರೆ ಹೊಸ ಪಡಿತರ ಚೀಟಿ ಸಿಗುತ್ತದೆ. ಆಧಾರ್‌ನಲ್ಲಿ ಮೊಬೈಲ್ ನಮೂದಾಗಿಲ್ಲದವರು ಬೆರಳಚ್ಚು ನೀಡಬೇಕಾಗುತ್ತದೆ.
ನೀವೇ ಪರೀಕ್ಷಿಸಿ
ನಿಮ್ಮ ಎಪಿಎಲ್ ಪಡಿತರ ಚೀಟಿ ಚಾಲ್ತಿ ಯಲ್ಲಿದೆಯೇ ಇಲ್ಲವೇ ಎಂಬು ದನ್ನು ಕಾರ್ಡುದಾರರೇ ಸ್ವತಃ ತಿಳಿದು ಕೊಳ್ಳ ಬಹುದು. https://ahara.kar.nic.in/e_services.aspxಯಲ್ಲಿ ನಿಮ್ಮಲ್ಲಿರುವ ಚೀಟಿಯ ಆರ್‌ಸಿ ನಂಬರ್ ನಮೂದಿಸಿ ತಿಳಿಯಲು ಅವಕಾಶವಿದೆ.
ಪಡಿತರ ಚೀಟಿದಾರರು ಆಧಾರ್ ಲಿಂಕ್ ಮಾಡಿಕೊಳ್ಳುವುದು ಅಗತ್ಯ. ಮಾಡಿಸಿಕೊಳ್ಳದಿರುವ ಮತ್ತು ನಿಷ್ಕ್ರಿಯ ಕಾರ್ಡ್‌ಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ನಿಷ್ಕ್ರಿಯಗೊಂಡಿದ್ದರೆ, ಹೊಸ ಚೀಟಿ ಪಡೆಯಲು ಅವಕಾಶವಿದೆ.
– ವಿಜಯಕುಮಾರ್, ಜಂಟಿ ನಿದೇಶಕರು,
ಆಹಾರ ನಾಗರಿಕ ಸರಬರಾಜು ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.