ಡೆಲ್ಲಿಯನ್ನು ಲಾಕ್‌ ಮಾಡಿದ ಬೆಂಗಳೂರು:1 ರನ್‌ನಿಂದ ಗೆದ್ದ RCB ಮತ್ತೆ ಅಂಕಪಟ್ಟಿಯಲ್ಲಿ ನಂ.1


Team Udayavani, Apr 27, 2021, 11:51 PM IST

ಡೆಲ್ಲಿ ವಿರುದ್ಧ 1 ರನ್ ಅಂತರದ ಜಯ : ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ RCB

ಅಹ್ಮದಾಬಾದ್‌ : ಕೊನೆಯ ಎಸೆತದ ತನಕ ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ ಮಂಗಳವಾರದ ಐಪಿಎಲ್‌ ಮೇಲಾಟದಲ್ಲಿ ಆರ್‌ಸಿಬಿ ಒಂದು ರನ್ನಿನಿಂದ ಡೆಲ್ಲಿಯನ್ನು ಮಣಿಸಿ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ 5 ವಿಕೆಟಿಗೆ 171 ರನ್‌ ಪೇರಿಸಿದರೆ, ಡೆಲ್ಲಿ 6 ವಿಕೆಟ್‌ಗಳನ್ನು ಕೈಯಲ್ಲಿರಿಸಿಕೊಂಡೂ 170ರ ತನಕ ಬಂದು ಎಡವಿತು. ಇದು 6 ಪಂದ್ಯದಲ್ಲಿ ಕೊಹ್ಲಿ ಪಡೆಗೆ ಒಲಿದ 5ನೇ ಗೆಲುವು.

ಆರ್‌ಸಿಬಿಯ ದೊಡ್ಡ ಮೊತ್ತಕ್ಕೆ ಎಬಿಡಿ ಅವರ ಹೊಡಿಬಡಿ ಆಟ ಕಾರಣವಾದರೆ, ಡೆಲ್ಲಿ ಹೆಟ್‌ಮೈರ್‌-ಪಂತ್‌ ಪರಾಕ್ರಮದಿಂದ ಮುನ್ನುಗ್ಗಿ ಬಂತು. ಕೊನೆಯಲ್ಲಿ ಈ ಬಿಗ್‌ ಹಿಟ್ಟರ್‌ಗಳೇ ಕ್ರೀಸ್‌ನಲ್ಲಿದ್ದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು.
ಕೊನೆಯ 5 ಓವರ್‌ಗಳಲ್ಲಿ 30 ರನ್‌ ಅಗತ್ಯವಿದ್ದಾಗ ಹೆಟ್‌ಮೈರ್‌ ಸಿಡಿದು ನಿಂತರು. ಜಾಮೀಸನ್‌ ಪಾಲಾದ 18ನೇ ಓವರ್‌ನಲ್ಲಿ 21 ರನ್‌ ಸೋರಿ ಹೋಯಿತು. ಮೊಹಮ್ಮದ್‌ ಸಿರಾಜ್‌ ಪಾಲಾದ ಅಂತಿಮ ಓವರ್‌ನಲ್ಲಿ 14 ರನ್‌, ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಬೇಕಾದ ಒತ್ತಡ ಎದುರಾಯಿತು. ಆದರೆ ಅದೃಷ್ಟ ಆರ್‌ಸಿಬಿ ಪಾಲಿಗಿತ್ತು. ಪಂತ್‌ ಕೊನೆಯ 2 ಎಸೆತಗಳನ್ನು ಸತತವಾಗಿ ಬೌಂಡರಿಗೆ ಬಡಿದಟ್ಟಿದರೂ ಗೆಲುವು ಕೆಲವೇ ಇಂಚುಗಳಿಂದ ದೂರವೇ ಉಳಿಯಿತು. ಪಂತ್‌ 58 ರನ್‌ (48 ಎಸೆತ, 6 ಬೌಂಡರಿ) ಮತ್ತು ಹೆಟ್‌ಮೈರ್‌ 53 ರನ್‌ (25 ಎಸೆತ, 4 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗಿ ಉಳಿದರು.

ಸಿಡಿದು ನಿಂತ ಎಬಿಡಿ
ಪವರ್‌ ಪ್ಲೇ ಹಾಗೂ ಮಿಡ್ಲ್ ಓವರ್‌ಗಳಲ್ಲಿ ಡೆಲ್ಲಿಯ ನಿಖರವಾದ ದಾಳಿಗೆ ಪರದಾಡಿದ ಆರ್‌ಸಿಬಿ ನೂರೈವತ್ತರ ಗಡಿ ದಾಟುವುದೇ ಅನುಮಾನವಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಎಬಿಡಿ ಬಿರುಸಿನ ಬ್ಯಾಟಿಂಗ್‌ ನಡೆಸಿ ಆರ್‌ಸಿಬಿಯನ್ನು ಹೋರಾಟಕ್ಕೆ ಅಣಿಗೊಳಿಸಿದರು. ಈ ಅವಧಿಯಲ್ಲಿ 56 ರನ್‌ ಹರಿದು ಬಂತು. ಇದರಲ್ಲಿ “ಮಿಸ್ಟರ್‌ 360′ ಬ್ಯಾಟಿನಿಂದ ಸಿಡಿದದ್ದು 47 ರನ್‌.
ಎಬಿಡಿ 42 ಎಸೆತಗಳಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಈ ಆಕರ್ಷಣೀಯ ಬ್ಯಾಟಿಂಗ್‌ನಲ್ಲಿ 5 ಪ್ರಚಂಡ ಸಿಕ್ಸರ್‌ ಹಾಗೂ 3 ಬೌಂಡರಿ ಒಳಗೊಂಡಿತ್ತು. ಇದರಲ್ಲಿ 3 ಸಿಕ್ಸರ್‌ ಸ್ಟೋಯಿನಿಸ್‌ ಪಾಲಾದ ಅಂತಿಮ ಓವರ್‌ನಲ್ಲಿ ಬಂದಿತ್ತು.

ಓಪನಿಂಗ್‌ ವೈಫಲ್ಯ
ಆರ್‌ಸಿಬಿ ಆರಂಭಿಕರಾದ ಪಡಿಕ್ಕಲ್‌ ಮತ್ತು ಕೊಹ್ಲಿ ಬಿರುಸಿನಿಂದಲೇ ಬ್ಯಾಟ್‌ ಬೀಸತೊಡಗಿದ್ದರು. ಮೊದಲ 3 ಓವರ್‌ಗಳಲ್ಲಿ 25 ರನ್‌ ಪೇರಿಸಿ ಮುನ್ನುಗ್ಗುವ ಸೂಚನೆ ರವಾನಿಸಿದರು. ಆದರೆ ಇಬ್ಬರೂ ಸತತ ಎಸೆತಗಳಲ್ಲಿ ಔಟಾದುದು ಆರ್‌ಸಿಬಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು.

ಆವೇಶ್‌ ಖಾನ್‌ ತಮ್ಮ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಪ್ಟನ್‌ ಕೊಹ್ಲಿ (12) ವಿಕೆಟ್‌ ಕಿತ್ತು ಡೆಲ್ಲಿಗೆ ಮೊದಲ ಯಶಸ್ಸು ತಂದಿತ್ತರು. ಬಳಿಕ ಇಶಾಂತ್‌ ಶರ್ಮ ನೂತನ ಓವರ್‌ನ ಮೊದಲ ಎಸೆತದಲ್ಲಿ ಪಡಿಕ್ಕಲ್‌ ಅವರನ್ನು ಬೌಲ್ಡ್‌ ಮಾಡಿದರು (17). ಇಶಾಂತ್‌ ಪಾಲಿಗೆ ಇದು “ವಿಕೆಟ್‌-ಮೇಡನ್‌’ ಆಗಿತ್ತು. ಆಗ ಬೆಂಗಳೂರು ಸ್ಕೋರ್‌ಬೋರ್ಡ್‌ ಕೇವಲ 30 ರನ್‌ ತೋರಿಸುತ್ತಿತ್ತು.

“ಮ್ಯಾಕ್ಸಿ’ 100 ಸಿಕ್ಸರ್‌
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸ್ಪಿನ್ನರ್‌ಗಳ ವಿರುದ್ಧ ಭರ್ಜರಿಯಾಗಿ ಬ್ಯಾಟ್‌ ಬೀಸತೊಡಗಿದರು. ಮಿಶ್ರಾ ಮತ್ತು ಪಟೇಲ್‌ ಎಸೆತಗಳನ್ನು ಸ್ಟಾಂಡ್ ಗೆ ಬಡಿದಟ್ಟಿ ಐಪಿಎಲ್‌ನಲ್ಲಿ 100ನೇ ಸಿಕ್ಸರ್‌ ಸಂಭ್ರಮ ಆಚರಿಸಿದರು. ಆದರೆ ಮಿಶ್ರಾ ಸೇಡು ತೀರಿಸಿಕೊಳ್ಳಲು ವಿಳಂಬಿಸಲಿಲ್ಲ. ಲಾಂಗ್‌ ಆನ್‌ನಲ್ಲಿದ್ದ ಸ್ಮಿತ್‌ ಕೈಗೆ ಕ್ಯಾಚ್‌ ಕೊಡಿಸುವಲ್ಲಿ ಯಶಸ್ವಿಯಾದರು. “ಮ್ಯಾಕ್ಸಿ’ ಕೊಡುಗೆ 20 ಎಸೆತಗಳಿಂದ 25 ರನ್‌ (ಒಂದು ಫೋರ್‌, 2 ಸಿಕ್ಸರ್‌). ಅರ್ಧ ಆಟ ಮುಕ್ತಾಯವಾದಾಗ ಆರ್‌ಸಿಬಿ 3ಕ್ಕೆ 68 ರನ್‌ ಮಾಡಿತ್ತು.
ಇನ್ನೊಂದು ಬದಿಯಲ್ಲಿ ಬೇರೂರಿ ನಿಂತಿದ್ದ ಪಾಟೀದಾರ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಕೆಲವು ಆಕರ್ಷಕ ಹೊಡೆತಗಳ ಮೂಲಕ ರಂಜಿಸತೊಡಗಿದರು. 2 ಸಿಕ್ಸರ್‌ ಎತ್ತಿದ ಅವರು 22 ಎಸೆತಗಳಿಂದ 31 ರನ್‌ ಮಾಡಿ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಅಲ್ಲಿಗೆ ಡೆತ್‌ ಓವರ್‌ ಮೊದಲ್ಗೊಂಡಿತು.

ಎಬಿಡಿ ಕ್ರೀಸ್‌ನಲ್ಲಿದ್ದುದರಿಂದ ಆರ್‌ಸಿಬಿ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಸೂಕ್ತ ಬೆಂಬಲ ಸಿಗಲಿಲ್ಲ. ರಬಾಡ ರಿಟರ್ನ್ ಕ್ಯಾಚ್‌ ಮೂಲಕ ವಾಷಿಂಗ್ಟನ್‌ ಸುಂದರ್‌ (6) ವಿಕೆಟ್‌ ಉರುಳಿಸಿದರು.

ಅಶ್ವಿ‌ನ್‌ ಬದಲು ಇಶಾಂತ್‌
ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿತು. ಕೊರೊನಾ ಕಾರಣವನ್ನು ಮುಂದೊಡ್ಡಿ ಐಪಿಎಲ್‌ ಬಿಟ್ಟುಹೋದ ಆರ್‌. ಅಶ್ವಿ‌ನ್‌ ಬದಲು ಇಶಾಂತ್‌ ಶರ್ಮ ಆಡಲಿಳಿದರು.

ಆರ್‌ಸಿಬಿ ಆಡುವ ಬಳಗದಲ್ಲಿ ಎರಡು ಪರಿವರ್ತನೆ ಮಾಡಲಾಯಿತು. ನವದೀಪ್‌ ಸೈನಿ ಮತ್ತು ಡೇನಿಯಲ್‌ ಕ್ರಿಸ್ಟಿಯನ್‌ ಸ್ಥಾನಕ್ಕೆ ರಜತ್‌ ಪಾಟೀದಾರ್‌ ಹಾಗೂ ಡೇನಿಯಲ್‌ ಸ್ಯಾಮ್ಸ್‌ ಬಂದರು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಬಿ ಆವೇಶ್‌ 12
ದೇವದತ್ತ ಪಡಿಕ್ಕಲ್‌ ಬಿ ಇಶಾಂತ್‌ 17
ರಜತ್‌ ಪಾಟೀದಾರ್‌ ಸಿ ಸ್ಮಿತ್‌ ಬಿ ಅಕ್ಷರ್‌ 31
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಸ್ಮಿತ್‌ ಬಿ ಮಿಶ್ರಾ 25
ಎಬಿ ಡಿ ವಿಲಿಯರ್ ಔಟಾಗದೆ 75
ವಾಷಿಂಗ್ಟನ್‌ ಸುಂದರ್‌ ಸಿ ಮತ್ತು ಬಿ ರಬಾಡ 6
ಡೇನಿಯಲ್‌ ಸ್ಯಾಮ್ಸ್‌ ಔಟಾಗದೆ 3
ಇತರ 2
ಒಟ್ಟು(5 ವಿಕೆಟಿಗೆ) 171
ವಿಕೆಟ್‌ ಪತನ:1-30, 2-30, 3-60, 4-114, 5-139.
ಬೌಲಿಂಗ್‌; ಇಶಾಂತ್‌ ಶರ್ಮ 4-1-26-1
ಕಾಗಿಸೊ ರಬಾಡ 4-0-38-1
ಆವೇಶ್‌ ಖಾನ್‌ 4-0-24-1
ಅಮಿತ್‌ ಮಿಶ್ರಾ 3-0-27-1
ಅಕ್ಷರ್‌ ಪಟೇಲ್‌ 4-0-33-1
ಮಾರ್ಕಸ್‌ ಸ್ಟೋಯಿನಿಸ್‌ 1-0-23-0

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಎಬಿಡಿ ಬಿ ಹರ್ಷಲ್‌ 21
ಶಿಖರ್‌ ಧವನ್‌ ಸಿ ಚಹಲ್‌ ಬಿ ಜಾಮೀಸನ್‌ 6
ಸ್ಟಿವನ್‌ ಸ್ಮಿತ್‌ ಸಿ ಎಬಿಡಿ ಬಿ ಸಿರಾಜ್‌ 4
ರಿಷಭ್‌ ಪಂತ್‌ ಔಟಾಗದೆ 58
ಸ್ಟೋಯಿನಿಸ್‌ ಸಿ ಎಬಿಡಿ ಬಿ ಹರ್ಷಲ್‌ 22
ಹೆಟ್‌ಮೈರ್‌ ಔಟಾಗದೆ 53
ಇತರ 6
ಒಟ್ಟು(4 ವಿಕೆಟಿಗೆ) 170
ವಿಕೆಟ್‌ ಪತನ: 1-23, 2-28, 3-47, 4-92.
ಬೌಲಿಂಗ್‌; ಡ್ಯಾನಿಯಲ್‌ ಸ್ಯಾಮ್ಸ್‌ 2-0-15-0
ಮೊಹಮ್ಮದ್‌ ಸಿರಾಜ್‌ 4-0-44-1
ಕೈಲ್‌ ಜಾಮೀಸನ್‌ 4-0-32-1
ವಾಷಿಂಗ್ಟನ್‌ ಸುಂದರ್‌ 4-0-28-0
ಹರ್ಷಲ್‌ ಪಟೇಲ್‌ 4-0-37-2
ಯಜುವೇಂದ್ರ ಚಹಲ್‌ 2-0-10-0

ಟಾಪ್ ನ್ಯೂಸ್

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

PCB

PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.