ಪಕ್ಷ ತ್ಯಾಗದ ನಿರ್ಧಾರ ಪುನರ್ ಪರಿಶೀಲಿಸಿ : ಸಿ.ಎಂ.ಇಬ್ರಾಹಿಂಗೆ ಕಾಂಗ್ರೆಸ್
Team Udayavani, Jan 27, 2022, 7:58 PM IST
ಬೆಂಗಳೂರು : ಕಾಂಗ್ರೆಸ್ ಪಕ್ಷ ತೊರೆಯುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಸಿ.ಎಂ.ಇಬ್ರಾಹಿಂ ಅವರ ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ನ್ ಅಲ್ಪಸಂಖ್ಯಾತ ನಾಯಕರು ಮುಂದಾಗಿದ್ದಾರೆ.
ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಕೆ.ಎಸ್.ಟಿ.ಡಿ.ಸಿ ಮಾಜಿ ಅಧ್ಯಕ್ಷ ರಾದ ಎಚ್ .ಎ.ಹುಸೇನ್ ಪತ್ರಿಕಾ ಪ್ರಕಟಣೆ ನೀಡಿದ್ದು,ಮಾನ್ಯ ಸಿ.ಎಂ.ಇಬ್ರಾಹಿಂ ಅವರೇ, ನಿಮಗೆ ಗೌರವಪೂರ್ವಕ ವಂದನೆಗಳು. ವಿಧಾನ ಪರಿಷತ್ ವಿಪಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ತಾವು, ಆ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಬಾಕಿ ಇರುವಾಗಲೇ ನಿಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಜತೆಗೆ ಪಕ್ಷ ತ್ಯಾಗಕ್ಕೂ ನಿರ್ಧರಿಸುವ ವಿಚಾರ ನಮಗೆಲ್ಲರಿಗೂ ದಿಗ್ಬ್ರಮೆ ಮೂಡಿಸಿದೆ.
ಅಲ್ಪಸಂಖ್ಯಾತ ಸಮುದಾಯದ ಹಿತದೃಷ್ಟಿಯಿಂದ ನಿಮ್ಮ ಈ ನಿರ್ಧಾರ ಅತ್ಯಂತ ಕಳವಳ ಹಾಗೂ ಬೇಸರವನ್ನು ಸೃಷ್ಟಿಸಿದೆ. ರಾಜ್ಯ ಹಾಗೂ ರಾಷ್ಟ್ರದ ಬದಲಾದ ರಾಜಕೀಯ ಸಂದರ್ಭದಲ್ಲಿ ನಿಮ್ಮಂಥ ಹಿರಿಯರು ಮುಂಚೂಣಿಯಲ್ಲಿ ನಿಂತು ಸಮುದಾಯವನ್ನು ಮುನ್ನಡೆಸುವ ಅನಿವಾರ್ಯತೆ ಇದೆ. ಆದರೆ ಸಣ್ಣ ಮುನಿಸಿನ ಕಾರಣಕ್ಕಾಗಿ ಪಕ್ಷ ತ್ಯಾಗದ ದೊಡ್ಡ ನಿರ್ಧಾರ ಬೇಡ ಎಂದು ತಮ್ಮಲ್ಲಿ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
ಅಲ್ಪಸಂಖ್ಯಾತ ಸಮುದಾಯ ಇಂದು ಯಾವ ಸ್ಥಿತಿಯಲ್ಲಿದೆ ಎಂಬುದು ತಮಗೆ ಅರ್ಥವಾಗದ ಸಂಗತಿ ಅಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಸರಕಾರಿ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸುವ ಸ್ಥಿತಿಯಲ್ಲಿ ನಮ್ಮ ವ್ಯವಸ್ಥೆ ತಲುಪಿದೆ. ಇಂಥ ಸಂದರ್ಭದಲ್ಲಿ ಸದನದ ಒಳಗಿದ್ದು ಸಮುದಾಯದ ಪರ ಧ್ವನಿ ಎತ್ತಬೇಕಾಗಿದ್ದ ನೀವು ಶಸ್ತ್ರ ತ್ಯಾಗಕ್ಕೆ ಮುಂದಾಗಿರುವುದು ಆತಂಕದ ಸಂಗತಿ. ಅನ್ಯಾನ್ಯ ಕಾರಣಗಳಿಂದ ಈ ಹಿಂದ ನಮ್ಮ ಸಮುದಾಯಕ್ಕೆ ಲಭಿಸಿದ್ದ ಪರಿಷತ್ ಸ್ಥಾನ ತಪ್ಪು ಲೆಕ್ಕಾಚಾರ ದಿಂದ ಕೈ ತಪ್ಪಿ ಹೋಗಿದೆ. ಈಗ ನೀವು ರಾಜೀನಾಮೆ ನೀಡಿದರೆ ಅದರ ಲಾಭವಾಗುವುದು ಬಿಜೆಪಿಗೆ ಹೊರತು ಅಲ್ಪ ಸಂಖ್ಯಾತ ಸಮುದಾಯಕ್ಕೆ ಅಲ್ಲ. ಹೀಗಾಗಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಹಾಗೂ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಕೇಳಿಕೊಂಡಿದ್ದಾರೆ.
ತಾಳ್ಮೆ ಕಳೆದುಕೊಳ್ಳುವುದು ಬೇಡ : ರಿಜ್ವಾನ್ ಅರ್ಷದ್
ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹಿಂ ಅವರ ಅವರ ಮನವೊಲಿಸಲು ರಿಜ್ವಾನ್ ಅರ್ಷದ್ ಮುಂದಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅರ್ಷದ್, ಈಗ ಅಧಿಕಾರಕ್ಕಾಗಿ ಹೋರಾಟ ಮಾಡುವ ಸಮಯವಲ್ಲ.ಸೈದ್ಧಾಂತಿಕವಾಗಿ ಹೋರಾಟ ಮಾಡಬೇಕಿದೆ. ಇಬ್ರಾಹಿಂ ತಾಳ್ಮೆ ಕಳೆದುಕೊಳ್ಳುವುದು ಬೇಡ. ಪದೇ ಪದೇ ಪಕ್ಷದ ವಿರುದ್ಧ ಮಾತನಾಡುವುದು ತಪ್ಪು. ಪಕ್ಷ ಮತ್ತು ಹೈಕಮಾಂಡ್ ಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ನಾವು ನೀವು ಸೇರಿ ಬಿಜೆಪಿ ವಿರುದ್ಧ ಹೋರಾಟ ಮಾಡೋಣ ಎಂದರು.
ಅಲ್ಪಸಂಖ್ಯಾತ ನಾಯಕರು ಗೇಣಿದಾರರು ಎಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯುವಕರಾದರೂ ನಮಗೆ ಅವಕಾಶಗಳು ಕೊಟ್ಟಿದ್ದಾರೆ. ಕಾಂಗ್ರೆಸ್ ಆ ರೀತಿ ನಡೆಸಿಕೊಂಡಿಲ್ಲ. ಮಾತಿನ ಮಲ್ಲ ಇಬ್ರಾಹಿಂ ನೋವಿನಲ್ಲಿ ಇದ್ದಾರೆ.ಇಂತಹ ಸಂದರ್ಭದಲ್ಲಿ ಅವರ ಮಾತು ಸಿರಿಯಸ್ ಆಗಿ ತೆಗೆದುಕೊಳ್ಳ ಬಾರದು. ನಾನು ಸಹ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.