ನೈಜ ಬದುಕಿಗೆ ಓದಿನ ಜ್ಞಾನದ ಜೊತೆ ತಿಳುವಳಿಕೆಯೂ ಅಗತ್ಯ : ಸುಧಾಮೂರ್ತಿ
Team Udayavani, Nov 9, 2021, 12:14 PM IST
ವಿಜಯಪುರ: ವ್ಯಕ್ತಿಯ ನೈಜ ಬದುಕಿಗೆ ಶೈಕ್ಷಣಿಕ ಓದಿನ ಜೊತೆಗೆ ಸಮಾಜದಲ್ಲಿ ಜೀವನ ನಿರ್ವಹಣೆಗೆ ತಿಳುವಳಿಕೆಯೂ ಮುಖ್ಯ ಎಂದು ಇನ್ಫೋಸಿಸ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅಭಿಪ್ರಾಯ ಪಟ್ಟರು.
ಮಂಗಳವಾರ ನಗರದ ತೊರವಿ ಬಳಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಅವರು, ಜ್ಞಾನದ ಬೆನ್ನುಬಿದ್ದ ಅಕ್ಕಮಹಾದೇವಿ ಉಡುತಡಿಯಿಂದ ಕಲ್ಯಾಣದ ಮಾರ್ಗವಾಗಿ ಶ್ರೀಶೈಲಕ್ಜೆ ಸಾಗಿದ ಹಾದಿ ಸಣ್ಣದೇನಲ್ಲ ಎಂದರು.
ಸಾಧನೆಗಾಗಿ ತೋರಿದ ತಾಳ್ಮೆ, ಧೈರ್ಯ, ಬದ್ಧತೆ, ಆಳಜ್ಞಾನ, ತತ್ವಜ್ಞಾನದ ಸಾಧನೆಗಾಗಿ ಸಮಯದ ಸದ್ಬಳಕೆ ಮಾಡಿಕೊಂಡ ಅಕ್ಕ ಇಂದಿನ ನಿಮಗೂ, ನಮಗೂ ಆದರ್ಶ ಹಾಗೂ ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ಸಮಯದ ಸದ್ಬಳಕೆ, ಅಂತಃಕರಣ, ಶ್ರದ್ದೆ, ಬದ್ಧತೆ, ನಂಬಿದ ತತ್ವಾದರ್ಶದ ಆಚರಣೆ, ಅನುಷ್ಠಾನಕ್ಕೆ ಆತ್ಮವಿಶ್ವಾಸದ ಅಗತ್ಯವೂ ಇದೆ ಎಂದು ಕಿವಿ ಮಾತು ಹೇಳಿದರು.
ಇನ್ನೊಬ್ಬರ ತಪ್ಪು ಹುಡುಕಿ ಹೇಳುವ ಮೊದಲು ನಾವು ನಮ್ಮಲ್ಲಿನ ಲೋಪ, ದೌರ್ಬಲ್ಯಗಳನ್ನು ತಿದ್ದಿಕೊಳ್ಳಬೇಕು. ನಮ್ನಿಂದ ಲೋಪ, ತಪ್ಪುಗಳಾಗಿದ್ದಲ್ಲಿ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ: ಬಸವರಾಜ ಬೊಮ್ಮಾಯಿ ಘೋಷಣೆ
ಸಂತೃಪ್ತಿಯ ಸಂತೋಷದ ಬದುಕು ನಮ್ಮೊಳಗೆ ಇದ್ದು, ಅದನ್ನು ನಾವೇ ಸೃಷ್ಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಹಿ ಸತ್ಯವನ್ನು ನೇರವಾಗಿ ಹೇಳದೇ ತಿಳಿಯಾಗಿ ಹೇಳಬೇಕು. ನೊಂದ ಮನಸ್ಸುಗಳಿಗೆ ಹಣದ ಸಹಾಯಕ್ಕಿಂತ ಆತ್ಮವಿಶ್ವಾಸ ತುಂಬುವ ಸಾಂತ್ವನದ ಮಾತುಗಳ ಅಗತ್ಯ ಹೆಚ್ಚಿದೆ. ಹೀಗಾಗಿ ಕಷ್ಟದಲ್ಲಿ ಇರುವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಶೈಕ್ಷಣಿಕ ಪದವಿ ಪಡೆದ ಬಳಿಕ ಹೊಸ ಜೀವನಕ್ಕೆ ಕಾಲಿಡುವ ನಿಮ್ಮಿಂದ ಸಮಾಜ ಹೆಚ್ಚಿನ ನಿರೀಕ್ಷೆ ಮಾಡಲಿದೆ. ನೈಜ ಜೀವನಕ್ಕೆ ಪಠ್ಯವಿಲ್ಲ, ಭೌತಿಕ ಗುರು ಇರುವುದಿಲ್ಲ, ಕೋಣೆಗಳಿಲ್ಲ. ಸಮಾಜವೇ ನಿಮಗೆ ಅನುಭವದ ಆಧಾರದಲ್ಲಿ ಜೀವನ ಪಾಠ ಕಲಿಸಲಿದೆ. ಸಮಾಜದ ಆಗುಹೋಗುಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಹೀಗಾಗಿ ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು.
ಉತ್ತರ ಕರ್ನಾಟಕ ಗಂಡುಮೆಟ್ಟಿದ ನೆಲ
ಶ್ರಮ ಸಂಸ್ಕೃತಿಯನ್ನು ನಂಬಿರುವ ಉತ್ತರ ಕರ್ನಾಟಕ ಪ್ರತಿಭಾವಂತರ ನೆಲೆಯೂ ಹೌದು. ಕೃಷ್ಣೆಯ ಅಖಂಡ ವಿಜಯಪುರ ಜಿಲ್ಲೆ ಗಂಡು ಮೆಟ್ಟಿದ ನೆಲ. ಖಗೋಳಶಾಸ್ತ್ರಜ್ಞ ಭಾಸ್ಕರಾಚಾರ್ಯರು, ಬಸವಾದಿ ಶರಣರು, ಜ್ಞಾನದ ಆಗರವಾಗಿದ್ದ ಅಗ್ರಹಾರಗಳಿದ್ದ ಈ ನೆಲದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆ ಆಗಿರವುದು ಅರ್ಥಪೂರ್ಣ. ಇಂತ ನೆಲದ ಜಮಖಂಡಿಯ ಸಾವಳಗಿ ನನ್ನ ತವರು ಎಂಬುದು ನನಗೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವ ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ, ಕುಲಸಚಿವೆ ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಕೆ.ರಮೇಶ, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.