ದಂಗೆಕೋರರು ಶತ್ರುಗಳ ತಾಳಕ್ಕೆ ಕುಣಿದಿದ್ದಾರೆ: ಪ್ರಿಗೋಷಿನ್ ಹೆಸರೆತ್ತದೇ ಪುಟಿನ್ ವಾಗ್ಧಾಳಿ
Team Udayavani, Jun 28, 2023, 7:04 AM IST
ಮಾಸ್ಕೋ: ಉಕ್ರೇನಿನ ತಾಳಕ್ಕೆ ತಕ್ಕಂತೆ ವಂಚಕರು ಕುಣಿದಿದ್ದಾರೆ, ರಷ್ಯಾವನ್ನು ದುರ್ಬಲಗೊಳಿಸಲು, ವಿಭಜಿಸಲು ಶತ್ರುಗಳು ಯತ್ನಿಸಿದರು….ಹೀಗೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿಕಾರಿದ್ದಾರೆ. ವಿಫಲ ಕ್ಷಿಪ್ರ ಕ್ರಾಂತಿಯ ಬಳಿಕ ಮೊದಲ ಬಾರಿಗೆ 5 ನಿಮಿಷಗಳ ಕಾಲ ಟೀವಿಯಲ್ಲಿ ಕಾಣಿಸಿಕೊಂಡು ಅವರು ಮಾತನಾಡಿದ್ದಾರೆ. ಪುಟಿನ್ ಬಹಳ ಸುಸ್ತಾದವರಂತೆ ಕಾಣುತ್ತಿದ್ದರು.
ಕೇವಲ ಸೇನಾಡಳಿತದ ವಿರುದ್ಧದ ದಂಗೆ ಸಾರಿದ ಯೆವ್ಗೆನಿ ಪ್ರಿಗೋಷಿನ್ ವಿರುದ್ಧ ಹೆಸರೆತ್ತದೆ ಆಕ್ರೋಶ ವ್ಯಕ್ತಪಡಿಸಲು ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಪ್ರಿಗೋಷಿನ್ ನೇತೃತ್ವದ ವ್ಯಾಗ್ನರ್ ಹೆಸರಿನ ಖಾಸಗಿ ಸೇನಾಪಡೆ ರಷ್ಯಾದ ಸೇನೆ ಮೇಲೆ ತಿರುಗಿಬಿದ್ದು ಯುದ್ಧದ ವಾತಾವರಣ ಸೃಷ್ಟಿಸಿತ್ತು. ದಿಢೀರನೆ ಒಪ್ಪಂದವಾಗಿ ರಾತ್ರೋರಾತ್ರಿ ನಿಂತುಹೋಗಿತ್ತು.
ಪ್ರಕರಣ ರದ್ದು:
ಇದೇ ವೇಳೆ, ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ಅಥವಾ ಎಫ್ಎಸ್‌ಬಿ; ಪ್ರಿಗೋಷಿನ್ ಮತ್ತವರ ಸೇನಾಪಡೆಯ ವಿರುದ್ಧದ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ರದ್ದು ಮಾಡಿದೆ. ಸಶಸ್ತ್ರ ದಂಗೆಯನ್ನು ಕೈಬಿಟ್ಟಿದ್ದರಿಂದ ಪ್ರಕರಣಗಳನ್ನು ಕೈಬಿಡಲಾಗಿದೆ. ಇದೇ ವೇಳೆ, ಪ್ರಿಗೋಷಿನ್ ಎಲ್ಲಿದ್ದಾರೆ ಎನ್ನುವುದು ಖಚಿತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ
US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್!
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.