Germany ಯಲ್ಲಿ ಆರ್ಥಿಕ ಹಿಂಜರಿತ
Team Udayavani, May 26, 2023, 7:18 AM IST
ಬರ್ಲಿನ್: ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ಡಾಲರ್‌ನ ಎದುರು ಜರ್ಮನಿಯ ಕರೆನ್ಸಿ ಯೂರೊ ಮೌಲ್ಯ ತೀವ್ರವಾಗಿ ಕುಸಿದಿದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ತಿಳಿಸಿದೆ. ಯುರೋಪ್‌ನಾದ್ಯಂತ ಇತ್ತೀಚಿನ ತಿಂಗಳುಗಳಲ್ಲಿ ಸಂಭವಿಸಿದ ಆರ್ಥಿಕ ಅನಿಶ್ಚತೆಯ ಪರಿಣಾಮವಾಗಿ ಯೂರೊದ ಮೌಲ್ಯ ಗಣನೀಯವಾಗಿ ಕುಸಿಯುತ್ತಿದ್ದು, ಇದರಿಂದ ಡಾಲರ್‌ಗೆ ಲಾಭವಾಗುತ್ತಿದೆ.
ಯೂರೊ ಮೌಲ್ಯ ಕುಸಿತದಿಂದಾಗಿ ಕಳೆದ 2 ತಿಂಗಳಲ್ಲೇ ಡಾಲರ್ ಮೌಲ್ಯ ಗರಿಷ್ಠಕ್ಕೇರಿದೆ ಎಂದು ಸಂಸ್ಥೆ ತಿಳಿಸಿದೆ. ಡಾಲರ್ ಸೂಚ್ಯಂಕ ವರದಿಗಳ ಪ್ರಕಾರ ಅಮೆರಿಕದ 6 ಮಿತ್ರರಾಷ್ಟ್ರಗಳ ಕರೆನ್ಸಿ ಜತೆಗಿನ ಅದರ ಮೌಲ್ಯವನ್ನು ಹೋಲಿಸಿದಾಗ ಯೂರೊದ ಎದುರು ಡಾಲರ್ ಅತಿಹೆಚ್ಚು ಮೌಲ್ಯವನ್ನು ಹೊಂದಿದೆ. ಶೇ.0.3ರ ಏರಿಕೆಯೊಂದಿಗೆ ಡಾಲರ್ ಮೌಲ್ಯ 104.16ಕ್ಕೆ ಏರಿಕೆಯಾಗಿದ್ದು, ಇದು ಮಾ.17ರ ಬಳಿಕ ದಾಖಲಾದ ಅತಿಹೆಚ್ಚಿನ ಏರಿಕೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಯೂರೊ ಮೌಲ್ಯದ ಕುಸಿತದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಷ್ಟ್ರದ ಬೊಕ್ಕಸ ಬರಿದಾಗುವ, ಪಾವತಿಗಳಿಗೂ ಪರದಾಡಬೇಕಾದ ಪರಿಸ್ಥಿತಿ ದೂರವಿಲ್ಲವೆಂದು ಜರ್ಮನಿಯ ಖ್ಯಾತ ಡ್ಯಾನ್ಸೆ$R ಬ್ಯಾಂಕ್‌ನ ಹಿರಿಯ ವಿಶ್ಲೇಷಕ ಸ್ಟೀಫನ್ ಮಲ್ಲಿನ್ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.