ರಾಜ್ಯದಲ್ಲಿ ಬಡವರ ಪ್ರಮಾಣ ಇಳಿಕೆ ನೀತಿ ಆಯೋಗದ ವರದಿಯಲ್ಲಿ ಉಲ್ಲೇಖ
Team Udayavani, Jul 22, 2023, 7:50 AM IST
ರಾಮನಗರ: ಕೊರೊನಾ ಲಾಕ್‌ಡೌನ್, ಬಳಿಕ ಎದುರಾದ ಆರ್ಥಿಕ ಸಂಕಷ್ಟಗಳ ನಡುವೆಯೂ ರಾಜ್ಯದಲ್ಲಿ 34.87 ಲಕ್ಷ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ. ಯಾದಗಿರಿ ಅತೀ ಹೆಚ್ಚು ಬಡವರನ್ನು ಹೊಂದಿರುವ, ರಾಮನಗರ ಅತೀ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆ ಎಂದು ಜು. 17ರಂದು ನೀತಿ ಆಯೋಗ ಬಿಡುಗಡೆ ಮಾಡಿರುವ ಬಡತನ ಸೂಚ್ಯಂಕ ಪರಿಶೀಲನ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಪೌಷ್ಟಿಕ ಆಹಾರದ ಲಭ್ಯತೆ, ಮಾನಸಿಕ ಮತ್ತು ದೈಹಿಕ ಆರೋಗ್ಯ, ಮಗುವಿನ ಶಾಲಾ ದಾಖಲಾತಿ ವರ್ಷ -ಹೀಗೆ 12 ಸೂಚ್ಯಂಕಗಳನ್ನು ಆಧಾರವಾಗಿಸಿ ಬಡತನದ ತೀವ್ರತೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ತಲಾ ಎಣಿಕೆ ಅನುಪಾತವನ್ನು ಆಧರಿಸಿ ಎನ್‌ಎಂಪಿಐ (ನ್ಯಾಶನಲ್ ಮಲ್ಟಿ ಡೈಮೆನ್ಶನ್ ಇಂಡೆಕ್ಸ್) ವರದಿ ಬಿಡುಗಡೆ ಮಾಡಿರುವ ನೀತಿ ಆಯೋಗ ಬಡತನದ ಪ್ರಮಾಣ ಕಡಿಮೆ ಆಗಿರುವುದಾಗಿ ಪ್ರಕಟಿಸಿದೆ.
ಶೇ. 5.20 ಬಡವರು ಕಡಿಮೆ
2015-16ನೇ ಇಸವಿ ಬಳಿಕ 5 ವರ್ಷಗಳ ಬಳಿಕ ಮತ್ತೆ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ಶೇ. 5.20ರಷ್ಟು ಬಡತನದ ಪ್ರಮಾಣ ಕಡಿಮೆಯಾಗಿದೆ. 2015-16ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 12.77ರಷ್ಟು ಮಂದಿ ಬಹು ಆಯಾಮದ ಬಡತನ ಸೂಚ್ಯಂಕ ಪಟ್ಟಿಯಲ್ಲಿದ್ದರು. 2021ರ ವೇಳೆಗೆ ರಾಜ್ಯದಲ್ಲಿ ಶೇ. 7.58 ಮಂದಿ ಬಡವರು ಇದ್ದಾರೆ.
ಸೂಚ್ಯಂಕಗಳು ಹೀಗಿವೆ
ನೀತಿ ಆಯೋಗ ಬಿಡುಗಡೆ ಮಾಡಿರುವ ಎಂಪಿಐ ನಿಗದಿ ಮಾಡಿರುವ ವರದಿ ಅನ್ವಯ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 29.97ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರ ಸಾವಿನ ಪ್ರಮಾಣ ಶೇ. 1.29ರಷ್ಟಿದೆ. ಶೇ. 7.89ರಷ್ಟು ಮಕ್ಕಳು ಸರಿಯಾದ ವಯಸ್ಸಿಗೆ ಶಾಲೆಗೆ ಸೇರುತ್ತಿಲ್ಲ, ಶೇ. 2.50ರಷ್ಟು ಮಕ್ಕಳು ಶಾಲೆಗೆ ಹೆಚ್ಚು ಗೈರಾಗುತ್ತಿದ್ದಾರೆ. ಶೇ. 21.47ರಷ್ಟು ಮಂದಿಗೆ ಅಡುಗೆ ಇಂಧನ ಬಳಕೆ ಕೊರತೆ ಇದ್ದು, ಶೇ. 12.58ರಷ್ಟು ಮಂದಿ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ. 0.89 ಮಂದಿ ವಿದ್ಯುತ್ ಸೌಲಭ್ಯ ವಂಚಿತರಾಗಿದ್ದು, ಶೇ. 4.97 ಮಂದಿ ಬ್ಯಾಂಕ್ ಖಾತೆ ಹೊಂದಿಲ್ಲ. ಶೇ. 7.06ರಷ್ಟು ಮಂದಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ, ಶೇ. 36.20 ಮಂದಿಗೆ ಸ್ವಂತ ಮನೆ, ಶೇ. 7.31ರಷ್ಟು ಮಂದಿಗೆ ಸ್ವಂತ ಆಸ್ತಿ ಇಲ್ಲ.
ಗ್ರಾಮಾಂತರದಲ್ಲೇ ಅತೀ ಹೆಚ್ಚು ಬಡತನ
ವರದಿ ಪ್ರಕಾರ ರಾಜ್ಯದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲೇ ಬಡವರ ಸಂಖ್ಯೆ ಹೆಚ್ಚಿದೆ. ರಾಜ್ಯದ ಗ್ರಾಮಾಂತರ ಭಾಗದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 10.33ರಷ್ಟು ಮಂದಿ ಬಡವರಿದ್ದಾರೆ. 5 ವರ್ಷಗಳ ಹಿಂದಿನ ವರದಿಯಲ್ಲಿ ಈ ಪ್ರಮಾಣ ಶೇ. 18.45ರಷ್ಟಿತ್ತು. ನಗರ ಪ್ರದೇಶದಲ್ಲಿ ಶೇ. 3.22ರಷ್ಟು ಜನತೆ ಬಡವರಾಗಿದ್ದು, ಈ ಪ್ರಮಾಣ ಹಿಂದಿನ ವರದಿಯಲ್ಲಿ ಶೇ. 4.92 ಇತ್ತು.
ರಾಮನಗರದಲ್ಲಿ ಕಡಿಮೆ, ಯಾದಗಿರಿಯಲ್ಲಿ ಹೆಚ್ಚು
31 ಜಿಲ್ಲೆಗಳ ಪೈಕಿ ರಾಮನಗರ ಅತೀ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆ ಎನಿಸಿದೆ. ಇಲ್ಲಿ ಶೇ. 0.88ರಷ್ಟು ಬಡವರಿದ್ದು, 2015- 16ನೇ ಸಾಲಿನಲ್ಲಿ ಶೇ. 8.73ರಷ್ಟು ಬಡವರಿದ್ದರು. 5 ವರ್ಷಗಳಲ್ಲಿ ಅವರ ಪ್ರಮಾಣ ಶೇ. 7.84ರಷ್ಟು ಕಡಿಮೆಯಾಗಿದೆ. ಕಳೆದ ವರದಿಯಲ್ಲಿ ಬೆಂಗಳೂರು ಗ್ರಾಮಾಂ ತರ ಅತೀ ಕಡಿಮೆ (7.03)ಬಡವರನ್ನು ಹೊಂದಿರುವ ಜಿಲ್ಲೆ ಎನಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ಶೇ. 6.04ರಷ್ಟು ಬಡವರು ಕಡಿಮೆಯಾಗಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಬಡವರಿದ್ದಾರೆ. ಜಿಲ್ಲೆಯ ಜನಸಂಖ್ಯೆಯ ಶೇ. 25.38 ಮಂದಿ ಬಡತನ ಹೊಂದಿದ್ದಾರೆ. 2015-16ನೇ ಸಾಲಿನಲ್ಲಿ ಶೇ. 41.67ರಷ್ಟು ಮಂದಿ ಬಡವರಾಗಿದ್ದರು. ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ. 16.30ರಷ್ಟು ಬಡತನದ ಪ್ರಮಾಣ ಕಡಿಮೆಯಾಗಿದೆ ಯಾದರೂ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.