ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ


Team Udayavani, Mar 1, 2021, 8:40 AM IST

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ಎಂ.ಪಿ. ರೇಣುಕಾಚಾರ್ಯ… ಎಂದರೆ ಸರಳತೆ ಎಂಬ ಮಾತು ಹೊನ್ನಾಳಿ ಕ್ಷೇತ್ರದಲ್ಲಿದೆ. ಜನ ಸಾಮಾನ್ಯರಿಂದ ಹಿಡಿದು ಪ್ರತಿಯೊಬ್ಬರನ್ನೂ ಅತ್ಯಂತ ಆತೀ¾ಯತೆಯಿಂದ ಮಾತನಾಡಿಸುವ ಅಪರೂಪದ ರಾಜಕಾರಣಿ.
ಪ್ರತಿ ನಿತ್ಯ ಹತ್ತಾರು ಊರು ಸುತ್ತಾಡುವ ರೇಣುಕಾಚಾರ್ಯ ಹಲವಾರು ಗ್ರಾಮಗಳಲ್ಲಿ ಅನೇಕರನ್ನು ಹೆಸರು ಹೇಳಿ ಮಾತನಾಡುವಷ್ಟು ಚಿರಪರಿಚಿತರು. ಪ್ರತಿಯೊಬ್ಬರನ್ನು ಬಹಳ ಅಪಾಯ್ಯತೆಯಿಂದ ಮಾತನಾಡಿಸುವ ಸರಳ, ಸಜ್ಜನಿಕೆಯ ಸಾಕಾರಮೂರ್ತಿ.

ರಾಜಕೀಯ ಕ್ಷೇತ್ರವೆಂದರೆ ಆಧಿಕಾರ ಚಲಾಯಿಸುವುದು, ಕೇವಲ ಐಷಾರಾಮಿ ಬದುಕನ್ನು ರೂಢಿಸಿಕೊಳ್ಳುವುದಲ್ಲ. ಅಧಿ ಕಾರ ಬಂದಾಗ ಐಷಾರಾಮಿ ವಾಹನಗಳಲ್ಲಿ ಓಡಾಡುತ್ತ ಜೀವನ ಶೈಲಿ ಬದಲಾಯಿಸಿಕೊಂಡು ಹಮ್ಮು-ದರ್ಪ ತೋರುವುದಲ್ಲ. ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿ ಅದನ್ನು ಪರಿಹರಿಸಿದರೆ ಸಿಕ್ಕ ಅಧಿಕಾರಕ್ಕೆ ಒಂದು ಅರ್ಥ ಎಂಬುದನ್ನು ಅರ್ಥೈಸಿಕೊಂಡ ರೇಣುಕಾಚಾರ್ಯ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲರೊಟ್ಟಿಗೆ ಸೇರುವ, ಮಾತನಾಡುವ, ಸಂಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿತ್ವ ಅವರದ್ದು.

ಎಂ.ಪಿ. ರೇಣುಕಾಚಾರ್ಯ ಅವರು ಸರಳವಾದ ವ್ಯಕ್ತಿತ್ವ ಬೆಳೆಸಿಕೊಂಡು, ಆಡಂಬರಯುಕ್ತ ಜೀವನ ನಡೆಸದೆ, ಸರಳ ಉಡುಗೆ-ತೊಡುಗೆ, ಸಾಮಾನ್ಯರಂತೆ ಜನರ ಮಧ್ಯೆ ಕುಳಿತು ಊಟ-ತಿಂಡಿ ಸೇವಿಸುತ್ತಾ, ಹಗಲಿರುಳೆನ್ನದೆ ಜನತೆಯ ಕಷ್ಟ-ಸುಖಗಳಿಗೆ ಸ್ಪಂದಿಸುವ ಸರಳ-ಸಜ್ಜನ ರಾಜಕಾರಣಿ ಎಂದರೆ ಅತಿಶಯೋಕ್ತಿಯಲ್ಲ.

ತಮ್ಮ ಸರಳ ಜೀವನಶೈಲಿಯಿಂದ ಇತರರಿಗೆ ಮಾದರಿಯಾಗಿದ್ದಾರೆ. ಸಾಹೇಬರು… ಎಂದೇ ಪೀÅತಿಯಿಂದ ಕರೆಯಲ್ಪಡುವ ಅವರು ಹಗಲಿರುಳೆನ್ನದೇ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ರೇಣುಕಾಚಾರ್ಯ ಎಲ್ಲರಂತಲ್ಲ. ವಿಭಿನ್ನ ವ್ಯಕ್ತಿತ್ವದ, ಸದ್ಗುಣಗಳ ಗಣಿ ಇದ್ದಂತೆ. ತಮ್ಮದೇ ಆದ ನಿರಂತರ ಪರಿಶ್ರಮ, ಅಚಲ ವಿಶ್ವಾಸ, ವೈಚಾರಿಕ ಮನೋಭಾವದಿಂದ, ಅತ್ಯಂತ ಸರಳಸಜ್ಜನ ರಾಜಕಾರಣಿಯಾಗಿದ್ದಾರೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಮತದಾರ ದೇವರುಗಳ ಸಹಕಾರ ಆಶೀರ್ವಾದವೇ ನನ್ನ ಯಶಸ್ಸಿಗೆ ಕಾರಣ. ನನ್ನೆಲ್ಲಾ ಸೇವೆಯನ್ನು ಅವರಿಗೆ ಸಮರ್ಪಿಸುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಹೆಮ್ಮೆಯಿಂದ ನುಡಿಯುತ್ತಾರೆ.

ರೇಣುಕಾಚಾರ್ಯ ಅವರು ಕ್ಷೇತ್ರದ ಮತದಾರರನ್ನು ದೇವರಂತೆ, ಸದಾ ತನ್ನ ಸಹೋದರ-ಸಹೋದರಿಯರಂತೆ ತಾಯಂದಿರು, ಹಿರಿಯರು, ಯುವಕರೆಲ್ಲರನ್ನೂ ಪ್ರೀತಿಯಿಂದ ಕಾಣುವ, ತಮ್ಮ ಕುಟುಂಬ ಸದಸ್ಯರಂತೆ ಪರಿಗಣಿಸಿ, ಯಾವುದೇ ಜಾತಿ-ಮತ-ಪಂಥ ಭೇದವಿಲ್ಲದೇ ಬೆಳೆಸುತ್ತಿರುವುದು ಅವರ ಸರಳ, ಸಜ್ಜನ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಎಂದೆಂದಿಗೂ ಅಧಿಕಾರದ ದರ್ಪ ತೋರದೆ ಕ್ಷೇತ್ರದ ಜನತೆ ಅಭಿಮಾನದಿಂದ ನೀಡಿದ ಅ ಧಿಕಾರವನ್ನು ಎಂದಿಗೂ ದುರ್ಬಳಕೆ ಮಾಡಿಕೊಳ್ಳದೇ ಜನರ ಪಾಲಿಗೆ ಜನಮೆಚ್ಚಿದ ಜನಸೇವಕರಾಗಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ವಾರದಲ್ಲಿ ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ನಾಲ್ಕು ದಿನ ಸತತ ಕ್ಷೇತ್ರ ಪ್ರವಾಸ ಮಾಡುವ ಮೂಲಕ ಜನರ ದುಖ-ದುಮ್ಮಾನಗಳಿಗೆ ಸ್ಪಂದಿಸ್ತುತಾರೆ. ಬೆಳಗ್ಗೆ 8ರಿಂದ 11ರ ವರೆಗೆ ತಮ್ಮ ನಿವಾಸದಲ್ಲಿ ಅನೇಕ ಸಮಸ್ಯೆ ಹೊತ್ತು ತರುವ ನೂರಾರು ಸಾರ್ವಜನಿಕರ ಜ್ವಲಂತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಯತ್ನಿಸುತ್ತಾರೆ.

ಬೆಳಗ್ಗೆ 10 ರ ನಂತರ ರಾತ್ರಿಯವರೆಗೆ ಊಟ, ತಿಂಡಿ ಲೆಕ್ಕಿಸದೆ ಅವಳಿ ತಾಲೂಕುಗಳಲ್ಲಿ ಹಳ್ಳಿ ಪ್ರವಾಸ ಕೈಗೊಂಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿಗೆ ಅಲ್ಲಿನ ಮುಖಂಡರು, ಕಾರ್ಯಕರ್ತರೊಡನೆ ಚರ್ಚೆ ನಡೆಸಿ ಆಗಬೇಕಾದ ರಸ್ತೆ, ಚರಂಡಿ, ಕುಡಿಯುವ ನೀರು ಇತರೆ ಸೌಲಭ್ಯಗಳ ಪಟ್ಟಿ ಮಾಡಿ ಆಯಾ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಒದಗಿಸುವ ಮೂಲಕ ಅವಳಿ ತಾಲೂಕುಗಳ ಪ್ರತಿಗ್ರಾಮಕ್ಕೆ ಉತ್ತಮ ಸೌಲಭ್ಯ ಕಲ್ಪಿ³ಸುತ್ತಿದ್ದಾರೆ.

ಕ್ಷೇತ್ರದ ಪ್ರತಿಗ್ರಾಮಗಳನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಿರುವುದು ಕಳಕಳಿಗೆ ಮಾದರಿಯಾಗಿದೆ.
ಸದಾ ಕ್ಷೇತ್ರದ ಅಭಿವೃದ್ಧಿಯನ್ನೇ ಚಿಂತಿಸುವ ಕಚೇರಿಯಲ್ಲಿ ಸದಾ ಕೂರದೆ ಅಭಿವೃದ್ಧಿಗೆ ಸಂಬಂಧಿ ಸಿದ ಮನವಿಗಳು, ಹೆಚ್ಚಿನ ಅನುದಾನ ಮಂಜೂರು ಮಾಡಿಸಲು ಮುಖ್ಯಮಂತ್ರಿಗಳಿಂದ ಹಿಡಿದು ಪ್ರತಿ ಇಲಾಖಾ ಸಚಿವರನ್ನು ಸಂಪರ್ಕಿಸಿ, ಆಗಬೇಕಾದ ಕೆಲಸಗಳನ್ನು ಪಟ್ಟು ಬಿಡದೆ ನಿರ್ವಹಿಸಿ ಜನರ ಬೇಡಿಕೆಗಳಿಗೆ ತಕ್ಕಂತೆ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಹಲವಾರು ಗುರುತರವಾದ ಶಾಶ್ವತ ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿ ಕ್ಷೇತ್ರದ ಜನರಿಂದ ಅಭಿವೃದ್ಧಿ ಹರಿಕಾರ ಎಂದೇ ಕರೆಸಿಕೊಳ್ಳುತ್ತಿದ್ದಾರೆ.

ಪ್ರತಿಗ್ರಾಮಗಳ ಯಾವುದೇ ಮನೆಯಲ್ಲಿ ಮದುವೆ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳು ಮಾತ್ರವಲ್ಲ ಶವಸಂಸ್ಕಾರ ಪುಣ್ಯಾರಾಧನೆ ಯಾವುದೇ ಕಾರ್ಯವಾಗಿರಲಿ, ಎಷ್ಟೇ ಕೆಲಸದ ಒತ್ತಡವಿದ್ದರೂ ತಪ್ಪದೇ ಹಾಜರಾಗುವುದು ರೇಣುಕಾಚಾರ್ಯ ಅವರಲ್ಲಿನ ವಿಶೇಷ ಗುಣ.

ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬ ಸದಸ್ಯರಲ್ಲಿ ಯಾರಾದರೂ ಒಬ್ಬರು ತಪ್ಪದೇ ಭಾಗವಹಿಸುತ್ತಿರುವುದು ಕ್ಷೇತ್ರದ ಜನತೆಯ ಮೇಲೆ ತೋರುವ ಪ್ರೀತಿ-ಅಭಿಮಾನಗಳಿಗೆ ಪ್ರತ್ಯಕ್ಷ ಸಾಕ್ಷಿ. ಇಂತಹ ಕಾರ್ಯಕ್ರಮಗಳಿಗೆ ನೆಪಮಾತ್ರಕ್ಕೆ ಹಾಜರಾಗದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರು, ಬಡವ-ಬಲ್ಲಿದನೆಂಬ ಭೇದ ತೋರದೇ ತಮ್ಮ ಕೈಲಾದಷ್ಟು ಧನಸಹಾಯ ನೀಡಿ, ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಕಳೆದ ಹಲವಾರು ವರ್ಷಗಳಿಂದ ಅವರ ಬದುಕಿನ ಭಾಗವೇ ಆಗಿದೆ.

ಅನ್ನದಾಸೋಹಿ…
ಶಾ ಸಕ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದ ಜನರ ಪಾಲಿಗೆ ಕೇವಲ ವ್ಯಕ್ತಿಯಲ್ಲ. ಒಂದು ಶಕ್ತಿ. ಜನಸೇವೆ, ದಾನ-ಧರ್ಮ, ಪರೋಪಕಾರಗಳಂತಹ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕ್ಷೇತ್ರದ ಜನರ ಶಕ್ತಿಯಾಗಿ ದ್ದಾರೆ.
12ನೇ ಶತಮಾನದ ವಿಶ್ವಗುರು ಬಸವಣ್ಣನವರ ಕಾಯಕ ಮತ್ತು ದಾಸೋಹದಂತಹ ಮಹತ್ತರವಾದ ಸೇವಾಗುಣಗಳನ್ನು ತಮ್ಮ ಬಾಲ್ಯದಿಂದಲೇ ಜೀವನದಲ್ಲಿ ಅವಳವಡಿಸಿಕೊಂಡಿದ್ದಾರೆ. ತಮ್ಮ ಮಾತಾ-ಪಿತೃಗಳಿಂದ ಪಡೆದ ಉತ್ತಮ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ರೂಢಿಸಿಕೊಂಡು ಮುನ್ನಡೆಯುತ್ತಿದ್ದಾರೆ. ರೇಣುಕಾಚಾರ್ಯರ ತಾಯಿ ದಿವಂಗತ ಕಮಲಮ್ಮ ಪಂಚಾಕ್ಷ‌ರಯ್ಯನವರು ಹಿಂದಿನಿಂದಲೂ ದಾನ-ಧರ್ಮ, ದಾಸೋಹ, ಸೇವೆಗಳಿಗೆ ಹೆಸರಾಗಿದ್ದರು. ಅದೇ ವ್ಯಕ್ತಿತ್ವವೇ ಇವರಿಗೆ ಬಳುವಳಿಯಾಗಿ ಬಂದಿದೆ. ಹೀಗಾಗಿ ದಿನ ನಿತ್ಯ ಇವರ ನಿವಾಸಕ್ಕೆ ಆಗಮಿಸುವ ಸಾರ್ವಜನಿಕರಿಗೆ ತಪ್ಪದೇ ಕಾಫಿ, ಟೀ, ಬಗೆ-ಬಗೆಯ ತಿಂಡಿ-ತಿನಿಸು, ಊಟೋಪಚಾರ ಮಾಡದೆ ಅವರನ್ನು ವಾಪಸ್‌ ಕಳುಹಿಸುವುದೇ ಇಲ್ಲ.

ಯಾವುದೇ ಧಾರ್ಮಿಕ, ಸಾಮಾಜಿಕ, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಮಠ-ಮಂದಿರಗಳಲ್ಲಿ ಅನ್ನದಾಸೋಹ ಸೇರಿದಂತೆ ಯಾವುದೇ ಸೇವೆಗಳಿರಲಿ ಸಂಬಂಧಿ ಸಿದ ಆಯೋಜಕರು ಅವರ ಬಳಿ ಸಹಾಯ ಹಸ್ತ ಬೇಡಿ ಬಂದಾಗ ತಮ್ಮ ಕೈಲಾಗುವುದಿಲ್ಲ ಎಂಬ ಮಾತನ್ನು ಒಮ್ಮೆಯೂ ಹೇಳದೆ ಎಷ್ಟೇ ಖರ್ಚು ಬಂದರೂ ಹಿಂದು-ಮುಂದು ನೋಡದೇ ವಾಗ್ಧಾನ ನೀಡಿ ಕಾರ್ಯಕ್ರಮಕ್ಕೆ ಚ್ಯುತಿ ಬಾರದಂತೆ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಒದಗಿಸುವುದು ರೇಣುಕಾಚಾರ್ಯರ ಕಾಯಕ-ದಾಸೋಹ ಸೇವೆಗೆ ಸಾಕ್ಷಿಯಾಗಿದೆ. ಅನೇಕ ಬಾರೀ ಲಕ್ಷಾಂತರ ಜನರಿಗೆ ಅನ್ನ ಸಂತರ್ಪಣೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಸಹ ಅವರ ಉಪಚಾರವನ್ನು ಇಂದಿಗೂ ಸ್ಮರಿಸುತ್ತಾರೆ.

ನಿಜ ಸಾಧಕ…
ಇಚ್ಚಾಶಕ್ತಿಯಿದ್ದಲ್ಲಿ ಒಬ್ಬ ಜನಪ್ರತಿನಿಧಿ  ಏನೆಲ್ಲಾ ಸಾಧಿ ಸಿ ತೋರಿಸಬಹುದು ಎಂಬುದಕ್ಕೆ ಜನ ಸೇವಕ ರೇಣುಕಾಚಾರ್ಯರವರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಸಾ ಧಿಸಿದ ಅಪ್ರತಿಮ ಸಾಧನೆಗಳು ಆ ವ್ಯಕ್ತಿಯ ಬೆನ್ನಹಿಂದೆ ಇದ್ದಾಗ ಇವರಿಗೆ ನಿಜ ಸಾಧಕರೆನ್ನುತ್ತಾರೆ. ಆ ಸಾಲಿನಲ್ಲಿ ರೇಣುಕಾಚಾರ್ಯ ನಿಲ್ಲುತ್ತಾರೆ. ಕ್ಷೇತ್ರದಲ್ಲಿ ತಮ್ಮ ಬಳಿಗೆ ಬರುವ ಬಡವರು ಜನಸಾಮಾನ್ಯರ ಜನತೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಅವರಿಗೆ ಸೂಕ್ತ ಸೌಲಭ್ಯವನ್ನು ಒದಗಿಸುವ ಕೆಲಸವನ್ನು ಕಳೆದ 30 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ರಾಜ್ಯದ ಭೂಪಟದಲ್ಲಿ ಹೊನ್ನಾಳಿ ಕ್ಷೇತ್ರ ಏನು ಎಂಬುದನ್ನು ಜನತೆಗೆ ತೋರಿಸಿಕೊಟ್ಟವರೆಂದರೆ ಎಂ.ಪಿ. ರೇಣುಕಾಚಾರ್ಯ. ಹೊನ್ನಾಳಿ ಕ್ಷೇತ್ರದ ಮಹತ್ವ ಏನೆಂಬುದನ್ನು ರಾಜ್ಯದ ಜನತೆಗೆ ತೋರಿಸಿಕೊಟ್ಟ ಕೀರ್ತಿ ಇವರದು ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ರೇಣುಕಾಚಾರ್ಯ ಅವರ ವ್ಯಕ್ತಿತ್ವವೇ ವಿಶಿಷ್ಟ. ಅ ಧಿಕಾರ ಇರಲಿ, ಇಲ್ಲದಿರಲಿ ಸದಾ ಜನರ ಕಷ್ಟಸುಖದಲ್ಲಿ ಭಾಗಿಯಾಗುವ ಮನೋಭಾವವನ್ನು ಹೋರಾಟದ ದಿನಗಳಿಂದ ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿಯೇ ಇಂದು ರಾಜ್ಯದ ಮತ್ತು ಕ್ಷೇತ್ರದ ಜನಮಾನಸದಲ್ಲಿ ರೇಣುಕಾಚಾರ್ಯ ಅವರು ಗೌರವಯುತ ಸ್ಥಾನ ಪಡೆದಿದ್ದಾರೆ.

ಅಭಿವೃದ್ಧಿ ಪಥದತ್ತ ಹೊನ್ನಾಳಿ ಕ್ಷೇತ್ರ
ಅಭಿವೃದ್ಧಿ ಎಂದರೆ ರೇಣುಕಾಚಾರ್ಯ. ರೇಣುಕಾಚಾರ್ಯ ಎಂದರೆ ಅಭಿವೃದ್ಧಿ ಎನ್ನುವಷ್ಟರ ಮಟ್ಟಿಗೆ ಹೊನ್ನಾಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಈಗಲೂ ತಮ್ಮ ಅಭಿವೃದ್ಧಿ ಪರ್ವ ಮುಂದುವರೆಸಿದ್ದಾರೆ.

ರೇಣುಚಾಕಾಚಾರ್ಯರು ಹಿಂದಿನಿಂದಲೂ ಹುಟ್ಟು ಹೋರಾಟಗಾರರು. ತಮ್ಮ ರಾಜಕೀಯ ಗುರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಗರಡಿಯಲ್ಲಿ ಬೆಳೆದು ಬಂದವರು. ಕ್ಷೇತ್ರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ಬಡವರು, ದೀನ-ದಲಿತರು, ರೈತರೊಂದಿಗೆ ಹಿಂದಿನಿಂದಲೂ ಬಾಂಧವ್ಯ ಬೆಳೆಸಿಕೊಂಡವರು. ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ರೈತರಿಗೆ ಜೀವನದಲ್ಲಿ ಆಶಾಕಿರಣ ಮೂಡಿಸಬೇಕು ಕ್ಷೇತ್ರದ ಜನತೆಯ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕೆಂಬ ತುಡಿತ, ಯಾವುದಾದರೂ ಕೆಲಸ ಮಾಡಬೇಕು ಎಂಬ ಪ್ರಾಮಾಣಿಕ ಕಾಳಜಿಯನ್ನು ಹೊಂದಿದ ಜನಸೇವಕರಾಗಿ, ಕ್ಷೇತ್ರದ‌ ಜನಾನುರಾಗಿಯಾಗಿದ್ದಾರೆ. ಹಿಂದಿನಿಂದಲೂ ಇಂದಿನವರೆಗೂ ಅನೇಕ ರೈತಪರ ಹೋರಾಟಗಳನ್ನು ಕೈಗೊಂಡು ಅವುಗಳಿಗೆ ಪರಿಹಾರ ಒದಗಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಕ್ಷೇತ್ರದ ಯಾವುದೇ ಹಳ್ಳಿಯನ್ನು ಬಿಡದೇ, ಹಗಲಿರುಳೆನ್ನದೇ ಪ್ರವಾಸ ನಡೆಸಿ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ನಾನು ಬರುತ್ತೇನೆ ಎಂದು ತಪ್ಪದೇ ಹೊರಟು ನಿಲ್ಲುತ್ತಾರೆ.

ಜೊತೆಗೆ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್‌, ಶಿಕ್ಷಣ, ನೀರಾವರಿ ಮುಂತಾದ ಯೋಜನೆಗಳಿಗೆ ಆದ್ಯತೆ ನೀಡಿ ಜನರ ಮನಸ್ಸಿನಲ್ಲಿ ಉಳಿಯುವ ಅನೇಕ ಜನಪರವಾದ ಶಾಶ್ವತ ಯೋಜನೆಗಳನ್ನು ಜಾರಿ ಮಾಡಿಸಿ ಸಾಕಾರಗೊಳಿಸಿರುವುದು ಅವರಲ್ಲಿನ ಅಭಿವೃದ್ಧಿಪರ ಚಿಂತನೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ರೇಣುಕಾಚಾರ್ಯ ಅ ಧಿಕಾರಕ್ಕೆ ಎಂದಿಗೂ ಜೋತು ಬಿದ್ದವರಲ್ಲ. ಸಮರ್ಥ ನಾಯಕತ್ವ, ಸಂಘಟನಾ ಶಕ್ತಿಯ ಕಾರಣದಿಂದಲೇ ಅಧಿಕಾರವೆಂಬುದು ತಾನಾಗಿ ಹುಡುಕಿಕೊಂಡು ಬಂದಿದೆ. ಅಭಿವೃದ್ಧಿಯೇ ಆಡಳಿತ ಮಂತ್ರ…ಎಂಬ ಆಧಾರದಲ್ಲಿ ಕ್ಷೇತ್ರದ ಉದ್ದಗಲಕ್ಕೂ ಅಭಿವೃದ್ಧಿ ಕಾರ್ಯಗಳ ಹೊಳೆ ಹರಿಸಿದ್ದಾರೆ. ತಮ್ಮ ಕಾರ್ಯಗಳ ಮೂಲಕ ಸಾಧಿಸಿ ತೋರಿಸಿ ಜನತೆಯ ಅಭಿಮಾನದ ಜನಸೇವಕರಾಗಿದ್ದಾರೆ. ಹಿಂದಿನ ಅವಧಿ ಯಲ್ಲಿ 3,500 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಇವರು ಮಾಡಿ ಅಭಿವೃದ್ಧಿ ಕಾರ್ಯಗಳು ಇವರ ಸಾಧನೆಯನ್ನು ಸಾಕೀÒಕರಿಸುತ್ತಿದ್ದರೂ ಎಂದಿಗೂ ನಾನು ಸಾಧಿಸಿದೆ ಎಂದು ರೇಣುಕಾಚಾರ್ಯರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡವರಲ್ಲ. ಇವರು ಮಾಡಿದ ಕಾರ್ಯಗಳು ಜನರ ಬಾಯಲ್ಲಿ ಹಾಗೂ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆನಿಂತಿವೆ. ಯಾವುದೇ ಪಕ್ಷ ಭೇದ, ಬಡವ-ಬಲ್ಲಿದ ಎನ್ನದೇ ದಣಿವರಿಯದೇ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನರೇ ಸ್ವಯಂ ಪ್ರೇರಣೆಯಿಂದ ಇವರ ಜನ್ಮದಿನ, ಅಭಿನಂದನಾ ಸಮಾರಂಭ ಆಚರಿಸುವುದು ಅವರು ಕ್ಷೇತ್ರದ ಜನರೊಂದಿಗೆ ಹೊಂದಿರುವ ಅಭಿಮಾನದ ಪ್ರತೀಕವಾಗಿದೆ.

ಲಾಕ್‌ಡೌನ್‌… ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ…
ಕಳೆದ ವರ್ಷ ಇಡೀ ಜಗತ್ತನ್ನು ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ರೇಣುಕಾಚಾರ್ಯ ಆವರು ತೋರಿದ ಕಾಳಜಿ ನಿಜಕ್ಕೂ ಸ್ಮರಣೀಯ. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾದ ದಿನದಿಂದಲೇ ರೇಣುಕಾಚಾರ್ಯ ಅವರು ಕ್ಷೇತ್ರದ 254 ಬೂತ್‌ಗಳ ಪ್ರತಿಹಳ್ಳಿ, ಕೇರಿಗೂ ಹೋಗಿ ಕೊರೊನಾ ವಿರುದ್ಧª ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ಒಂದು ಲಕ್ಷ ಕರಪತ್ರ, ಮೂರು ಲಕ್ಷ ಮಾಸ್ಕ್ ಗಳನ್ನು ವಿತರಿಸಿದರು. ಸಾಮಾಜಿಕ ಅಂತರ ಕಾಯ್ದಕೊಂಡು ಮನೆಯಿಂದ ಹೊರಬಾರದಂತೆ ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವಂತೆ ಪ್ರತಿ ಮನೆಗೆ ತೆರಳಿ ಮನವಿ ಮಾಡಿದರು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿ ಗ್ರಾಮ, ಕೇರಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಕಳೆದ ವರ್ಷದ ಯುಗಾದಿ ಹಬ್ಬದ ಮಾರನೇ ದಿನದಿಂದ ಈ ವರೆಗೂ ಕ್ಷೇತ್ರದ ಜನರಲ್ಲಿ ಕೊರೊನಾ ವೈರಸ್‌ ವಿರುದ್ಧ ಜಾಗೃತಿ ಮೂಡಿಸಿ ಕ್ಷೇತ್ರದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಅಂದಿನ ಕಾಲದಲ್ಲಿ ಅನೇಕ ರೋಗಗಳು ಜನರು ಮತ್ತು ಊರುಗಳ ಮೇಲೆ ಅಪ್ಪಳಿಸಿದಾಗ ಇಡೀ ಊರಿನ ಜನರು ಊರು, ಮನೆ-ಮಠ ತೊರೆಯುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಈಗಿನ ಸುಧಾರಿತ ವೈದ್ಯಕೀಯ ಸೌಲಭ್ಯಗಳಿರುವ ಕಾಲಘಟ್ಟದಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯ ಸೇವೆ ಬಳಸಿಕೊಂಡು ಆರೋಗ್ಯ ಕಾಳಜಿವಹಿಸಬೇಕು. ಸರ್ಕಾರದ ಮುಂದಿನ ಆದೇಶದವರೆಗೆ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುವವರೆಗೆ ಪ್ರತಿಯೊಬ್ಬರೂ ಮನೆಯಲ್ಲೇ ಸುರಕ್ಷಿತರಾಗಿರಬೇಕು ಎಂದು ರೇಣುಕಾಚಾರ್ಯ ಗ್ರಾಮಗಳಲ್ಲಿ ಸುತ್ತಾಡಿ ಮನವಿ ಮಾಡಿದ್ದನ್ನು ಜನ ಮರೆಯಲಾರರು. ತಮ್ಮ ಜೀವದ ಹಂಗು ತೊರೆದು ವೈರಸ್‌ ವಿರುದ್ಧ ಜಾಗೃತಿ ಮೂಡಿಸಿದ ಮಹತ್ತರ ಕಾರ್ಯ ಸದಾ ಸ್ಮರಣೀಯ.

ವೈಯಕ್ತಿಕ ಆರೋಗ್ಯಕ್ಕಿಂತ ಕ್ಷೇತ್ರದ ಜನರ ಆರೋಗ್ಯ ನನಗೆ ಅತೀ ಮುಖ್ಯ. ಮೂರು ಸಲ ಶಾಸಕರಾಗಿ ಆಯ್ಕೆ ಮಾಡಿದ ಜನರ ಯೋಗಕ್ಷೇಮ ಕಾಪಾಡುವುದು ಜನರ ಸೇವಕನಾಗಿ ಅವರ ಋಣ ತೀರಿಸುವುದು ನನ್ನ ಆದ್ಯ ಕರ್ತವ್ಯ ಎನ್ನುತ್ತ ಇಂದಿಗೂ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ಮಹಾಮಾರಿ ಕೊರೊನಾ ವೈರಸ್‌ ಹರಡದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳಲ್ಲಿ ಸ್ವಯಂ ಸೇವಕರಂತೆ ತಾವೇ ಮುಂಚೂಣಿಯಲ್ಲಿ ನಿಂತು ಇತರರಿಗೂ ಪ್ರೇರಣೆಯಾಗಿದ್ದಾರೆ. ಗುಣಮಟ್ಟದ ಮಾಸ್ಕ್ಗಳನ್ನು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ನಿರ್ಗತಿಕರು, ಗ್ರಾ.ಪಂ ಅ ಧಿಕಾರಿಗಳು ಸಿಬ್ಬಂ ದಿ, ಜನಸಾಮಾನ್ಯರಿಗೆ ನೀಡುತ್ತಿದ್ದಾರೆ. ಸಚಿವರಾದ ಕೆ.ಎಸ್‌.ಈಶ್ವರಪ್ಪ, ಬಿ.ಎ. ಬಸವರಾಜ್‌ ಸಂಸದ ಜಿ.ಎಂ ಸಿದ್ದೇಶ್ವರ ಅವರು ಕೊರೊನಾ ಸಂದರ್ಭದಲ್ಲಿ ರೇಣುಕಾಚಾರ್ಯ ಅವರ ಬದ್ದತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರಲ್ಲಿನ ಕ್ರಿಯಾ ಶೀಲತೆ, ಜನಪರ ಕಾಳಜಿಗೆ ಸಾಕ್ಷಿ.

ಯೋಗದೊಂದಿಗೆ ದಿನಚರಿ ಆರಂಭ
ರೇಣುಕಾಚಾರ್ಯ ಉತ್ತಮ ಯೋಗಪಟು. ಅನೇಕ ಆಸನಗಳನ್ನು ಸುಲಲಿತವಾಗಿ ಮಾಡಬಲ್ಲರು. ಯೋಗ, ಧ್ಯಾನ, ಪ್ರಾಣಾಯಾಮದಿಂದ ಈಗಲೂ ಚಿರಯುವಕನಂತೆ ಕಾಣಿಸುತ್ತಾರೆ. ನಿತ್ಯವೂ ಬೆಳಗ್ಗೆ 5.30 ಕ್ಕೆ ಎದ್ದು ವಾಯುವಿಹಾರ ಮಾಡಿ ಆನಂತರ ಯೋಗ,ಧ್ಯಾನ,ಪ್ರಾಣಯಾಮ ಮಾಡುವುದನ್ನು ರೇಣುಕಾಚಾರ್ಯ ಎಂದಿಗೂ ತಪ್ಪಿಸುವುದಿಲ್ಲಾ. ಬೆಳ್ಳಗ್ಗೆ ಹಾಗೂ ರಾತ್ರಿ ವಾಯು ವಿಹಾರ ಮಾಡುತ್ತಾ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಾರೆ.

ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವ
ಬಡವರ ಸಂಕಷ್ಟಕ್ಕೆ ಸ್ಪಂದಿ ಸುವ ಮನೋಭಾವವನ್ನು ರೇಣುಕಾಚಾರ್ಯರು ಮೈಗೂಡಿಸಿಕೊಂಡಿದ್ದಾರೆ. ಕೊರೊನಾ ಸಂಧರ್ಭದಲ್ಲಿ ಆರೋಗ್ಯ ಸಂಜೀವಿನಿ ಎಂಬ ವಿನೂತನ ಯೋಜನೆಯಡಿ ಅನಾರೋಗ್ಯಕ್ಕೆ ತುತ್ತಾದವರಿಗೆ ಉಚಿತವಾಗಿ ಮೂರು ತಿಂಗಳಿಗೆ ಆಗುವಷ್ಟು ಔಷ ಗಧಿಳನ್ನು ನೀಡಿದ್ದರು. ಅಷ್ಟೇಅಲ್ಲದೇ ಅಂಗನವಾಡಿ,ಆಶಾಕಾರ್ಯಕರ್ತರು, ಪೌರಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳಿಗೆ ಕೊರೊನಾ ಸಂದರ್ಭದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆ ಕೂಡ ಮಾಡಿಸಿದ್ದರು. ಇನ್ನು ಕಷ್ಟ ಎಂದು ಬಂದವರಿಗೆ ಎಂದೂ ವಾಪಸ್‌ ಕಳುಹಿಸಿದ ಉದಾಹರಣೆಗಳಿಲ್ಲಾ. ತಮ್ಮ ಕೈಲಾದ ಧನ ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡಿದ್ದಾರೆ. ನೆರೆ ಹಾವಳಿ ಸಂದರ್ಭದಲ್ಲೂ ರೇಣುಕಾಚಾರ್ಯ ಪ್ರತಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸದ್ದಾರೆ. ಭಾರೀ ಮಳೆ, ಗಾಳಿ, ನೆರೆಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರತಿಯೊಬ್ಬರ ನೋವು, ಸಮಸ್ಯೆ ಆಲಿಸಿ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ, ಬೆಳೆ, ಮನೆ, ಜಾನುವಾರು ಹಾನಿ ಅಂದಾಜು ನಷ್ಟದ ಮಾಹಿತಿ ಪಡೆದು, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪರಿಹಾರ ಮೊತ್ತ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.

ಬಡವರ ಹಸಿವು ನೀಗಿಸಿ ಆಸರೆ
ಕೊರೊನಾ ಅಬ್ಬರದ ಸಂದರ್ಭದಲ್ಲಿ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ರೇಣುಕಾಚಾರ್ಯರು ಆಹಾರದ ಕಿಟ್‌ ನೀಡುವ ಜೊತೆಗೆ ಬಡವರಿಗೆ ಊಟ ಬಡಿಸಿ ತಮ್ಮ ದಾಸೋಹ ಕಾರ್ಯ ಮಾಡಿದರು. ಉದ್ಯೋಗ ಖಾತ್ರಿಯಡಿ ಕೂಲಿ ಕಾರ್ಮಿಕರಿಗೆ 275 ರೂ. ನಂತೆ 2 ತಿಂಗಳು ಕೂಲಿ ಕೊಟ್ಟು ಅವಳಿ ತಾಲೂಕಿನ ಆಯ್ದ ಕೆರೆಗಳ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿ ಬಡವರ ಬದುಕಿಗೆ ಆಸರೆಯಾದರು. ಸ್ವತಃ ತಾವೇ ಒಂದಿಷ್ಟು ಕೆಲಸ ಮಾಡಿ ಕಾರ್ಮಿಕರಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳಿಸಿದರು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.