ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ


Team Udayavani, Mar 1, 2021, 8:40 AM IST

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ಹೋರಾಟದ ಮೂಲಕವೇ ಜನಸಾಮಾನ್ಯರಲ್ಲಿ ಗುರುತಿಸಲ್ಪಡುವ ಎಂ.ಪಿ. ರೇಣುಕಾಚಾರ್ಯರ ಹೋರಾಟಗಳಿಂದಲೇ ಕೂಡಿರುವ ರಾಜಕೀಯ ಜೀವನ ಬಲು ರೋಚಕ!.

ಜನಸಾಮಾನ್ಯರ ಸಣ್ಣ ಸಮಸ್ಯೆಗೂ ಸ್ಪಂದಿಸುವ ರೇಣುಕಾಚಾರ್ಯರ ಗುಣ ಕ್ಷೇತ್ರದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಯಾವುದೇ ಸಮಸ್ಯೆ ಎದುರಾದರೂ ರೇಣುಕಾಚಾರ್ಯರು ಇದ್ದಾರೆ, ಸ್ಪಂದಿಸ್ತುತಾರೆ ಅಷ್ಟೇ ಅಲ್ಲ ಬಗೆಹರಿಸುತ್ತಾರೆ ಎಂಬ ದೃಢ ನಂಬಿಕೆ ಜನರಲ್ಲಿದೆ. ಜನರ ಭಾವನೆಗೆ ತಕ್ಕಂತೆ ಯಾವುದೇ ಕ್ಷಣ, ಎಂತದ್ದೇ ಸಂದರ್ಭದಲ್ಲೂ ಸ್ಪಂದಿಸುವ ರೇಣುಕಾಚಾರ್ಯರಿಗೆ ಮತ್ತೂಬ್ಬರು ಸಾಟಿ ಇಲ್ಲ ಎಂಬ ಮಾತು ಕ್ಷೇತ್ರದಲ್ಲಿ ಜನಜನಿತ.

ರೇಣುಕಾಚಾರ್ಯರ ರಾಜಕೀಯ ಜೀವನವೇ ಸೋಜಿಗ ಮೂಡಿಸುವಂತಿದ್ದು, ಈ ವರೆಗೆ ಎಷ್ಟೋ ಅಡೆತಡೆಗಳನ್ನು ದಾಟಿ ಮುಂದೆ ಸಾಗುತ್ತಿದೆ. ಹಗಲಿರುಳುನ್ನದೇ ಅವಳಿ ತಾಲೂಕುಗಳ ಪ್ರತಿ ಹಳ್ಳಿಗಳ ಗಲ್ಲಿಗಲ್ಲಿಗಳನ್ನು ಸುತ್ತಿ ಅವಿರತ ಶ್ರಮ ಹಾಕಿ ನೂರಾರು ಯುವ ಪಡೆಗಳನ್ನು ಸಂಘಟಿಸಿ ಅಂದಿನ ಸರ್ಕಾರದ ಭ್ರಷ್ಟಾಚಾರಗಳನ್ನು ಮನೆ ಮನೆಗೂ ತಲುಪಿಸುವಲ್ಲಿ ರೇಣುಕಾಚಾರ್ಯರು ಯಶಸ್ವಿಯಾದರು. ನಿರಂತರ ಜನಸಂಪರ್ಕ, ಜನಪರ ಹೋರಾಟ ಮತ್ತು ನೂರಾರು ಹಳ್ಳಿಗಳ ಸಂಚಾರದ ಮೂಲಕ ಕ್ಷೇತ್ರದಲ್ಲಿ ಸಾರ್ವಕಾಲಿಕ ಜನ ಸೇವಕರಾಗಿ ಬೆಳೆದಿದ್ದಾರೆ.

ಕಠಿಣ ಪರಿಶ್ರಮ, ಸಂಘಟನಾ ಚತುರತೆ ಜೊತೆಗೆ ಸರ್ವಸ್ಪರ್ಶಿ, ಜಾತ್ಯತೀತ ವ್ಯಕ್ತಿತ್ವವೇ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿದೆ. ಹೋರಾಟದ ಬದುಕನ್ನೇ ತಮ್ಮ ಉಸಿರಾಗಿಸಿಕೊಂಡು ಬಂದ ಫಲವಾಗಿ ರಾಜಕಾರಣದಲ್ಲಿ ಬಲವಾದ ಹೆಜ್ಜೆ ಗುರುತು ಮೂಡಿಸಿದ್ದಾರೆ.

ಸಾರ್ವಜನಿಕರ, ಶೋಷಿತರ ದಿನ ನಿತ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದನ್ನೇ ಉಸಿರಾಗಿಸಿಕೊಂಡು ಅಹರ್ನಿಶಿ ಜನರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಅವರ ಕೆಲವು ಹೋರಾಟಗಳು ಈಗಲೂ ಸ್ಮರಣೀಯ ಎಂಬುದಕ್ಕೆ ಅನೇಕ ಜ್ವಲಂತ ಉದಾಹರಣೆಗಳಿವೆ.

ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಂದಿನ ಸರ್ಕಾರದಿಂದ ನೇರವಾಗಿ ರೈತರು ಬೆಳೆದ ಮೆಕ್ಕೆಜೋಳ ಖರೀದಿಸಲು ಖರೀದಿ ಕೇಂದ್ರ ಸ್ಥಾಪಿಸಿದ ಸಮಯವಾಗಿತ್ತು. ಅಲ್ಲಿ ರೈತರಿಗಾಗುತ್ತಿರುವ ಅನ್ಯಾಯ, ತೂಕದಲ್ಲಿ ಮೋಸ, ಅಧಿ ಕಾರಿಗಳ ಭ್ರಷ್ಟಾಚಾರವನ್ನು ಸ್ವತಃ ಕಂಡು ಬಿಜೆಪಿ ವತಿಯಿಂದ ನೂರಾರು ಕಾರ್ಯಕರ್ತರೊಂದಿಗೆ ಖರೀದಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅಹೋರಾತ್ರಿ ಪ್ರತಿಭಟನೆ ನಡೆಸಿ, ರೈತರಿಗೆ ನ್ಯಾಯವಾಗಿ ಬರ ಬೇಕಾದ ಹಣವನ್ನು ಸರ್ಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದನ್ನು ರೈತರು, ಜನರು ಈಗಲೂ ಸ್ಮರಿಸುತ್ತಾರೆ.

ರಾಜ್ಯದಲ್ಲಿಯೇ ಹೆಸರಾದ ಸವಳಂಗದ ಪ್ರಸಿದ್ಧ ರೈತ ಕಾಯಕ ಕೆರೆ… ಅಭಿವೃದ್ಧಿಗಾಗಿ ನಡೆಸಿದ ನಿರಂತರ ಹೋರಾಟ ಚಿರಸ್ಮರಣೀಯ. 200-300 ರೈತರೊಡನೆ ಸವಳಂಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ ಫಲವಾಗಿ ಕೆರೆ ಹೂಳೆತ್ತುವ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಮಗಾರಿಗೆ ಚಾಲನೆ ನೀಡಿದ್ದರು. ಹಾಗಾಗಿ ಅನೇಕ ಸಮಸ್ಯೆ ನೀಗಿದಂತಾದವು.

ಬಡಜನರಿಗೆ ಹಳದಿಕಾರ್ಡ ನೀಡುವಲ್ಲಿ ವಿಳಂಬ, ರೈತರ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೊನ್ನಾಳಿ ತಾಲೂಕು ಕಚೇರಿ ಮುಂಭಾಗ ನೂರಾರು ಜನರೊಡನೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ಸತತ 15 ದಿನಗಳ ಕಾಲ ಬೆಳಗಾವಿಯಲ್ಲಿ ಜೈಲು ವಾಸ ಅನುಭವಿಸಿದರು. ಆದರೂ, ಹೋರಾಟದಿಂದ ಹಿಂದೆ ಸರಿಯಲಿಲ್ಲ.

2003 ರಲ್ಲಿ ನ್ಯಾಮತಿ ಗ್ರಾಮದಲ್ಲಿ ವಿಶ್ವಹಿಂದು ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಯಶಸ್ವಿಯಾಗುವುದನ್ನು ಸಹಿಸದೆ ಅಂದಿನ ಸರ್ಕಾರ ರೇಣುಕಾಚಾರ್ಯರನ್ನು ಮುಂಜಾಗ್ರತಾ ಕ್ರಮವಾಗಿ ಬಂ ಧಿಸಿ ಬಳ್ಳಾರಿ ಜೈಲಿನಲ್ಲಿರಿಸಿತು. ಸತತ 7 ದಿನಗಳ ಕಾಲ ಜೈಲುವಾಸ ಅನುಭವಿಸಿ, ಬಿಡುಗಡೆಯಾಗಿ ಹೊನ್ನಾಳಿಗೆ ಆಗಮಿಸಿದ ಸಂದರ್ಭದಲ್ಲಿ ಸಾವಿರಾರು ಯುವಕರು, ಜನರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು ಸ್ಮರಣೀಯ.

ತಾಲೂಕಿನಲ್ಲಿ ಬಿಜೆಪಿ ಸಂಘಟನಾ ಶಕ್ತಿಯನ್ನು ಸಹಿಸಲಾಗದೆ ವಿನಾಕಾರಣ ಅವರ ವಿರುದ್ಧ ನೂರಾರು ಕೇಸ್‌ಗಳನ್ನು ದಾಖಲು ಮಾಡಿದರೂ ಯಾವುದಕ್ಕೂ ಅಂಜದೆ, ಅಳುಕದೆ, ಜಗ್ಗದೆ ಅವಳಿ ತಾಲೂಕುಗಳ ಜನತೆಯ ಸಹಕಾರ, ಯುವ ಪಡೆಯ ಉತ್ಸಾಹ, ತಾಯಂದಿರ ಹಾರೈಕೆ, ಆಶೀರ್ವಾದಗಳಿಂದ 2004 ರ ವಿಧಾನಸಭಾ ಚುನಾವಣೆಗೆ ಸ್ಪ ರ್ಧಿಸಿ ಹಗಲಿರುಳೆನ್ನದೆ ಪ್ರಚಾರ ಕೈಗೊಂಡು ಮತದಾರರ ಮನವೊಲಿಸಿದ ಪರಿಣಾಮ ಪ್ರಥಮ ಪ್ರಯತ್ನದಲ್ಲೇ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿಯ ವಿಜಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾದರು.

2007ರ ಬಿಜೆಪಿ-ಜೆಡಿಎಸ್‌ ಸಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪನವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಕಿಯೋನಿಕ್ಸ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ ಕಾರ್ಮಿಕರ ಹಿತ ರಕ್ಷಿಸಿ ಚಿನ್ನದ ಗಣಿಗೆ ಹೊಸ ಕಾಯಕಲ್ಪ ನೀಡಿದರಲ್ಲದೇ ಕಾರ್ಮಿಕರ ಹಿತರಕ್ಷಣೆ ಕಾಪಾಡಿ, ಕಂಪನಿ ಲಾಭಾಂಶ ಹೆಚ್ಚಿಸಿದರು.

ಸಾರ್ವಜನಿಕರ ಜ್ವಲಂತ ಸಮಸ್ಯೆಗಳ ಬಗ್ಗೆ ಸದಾ ಕಳಕಳಿಯಿಟ್ಟು ನಿರಂತರ ಹೋರಾಟ ನಡೆಸಿದ ಪರಿಣಾಮ 2008 ರ ವಿಧಾನಸಭಾ ಚುನಾವಣೆಯಲ್ಲಿ 2ನೇ ಬಾರಿ ಸ್ಪ ರ್ಧಿಸಿ ತಾಲೂಕಿನ ಜನತೆಯ ಆಶೀರ್ವಾದದಿಂದ ಪುನರ್‌ ಆಯ್ಕೆಯಾದರು. ತಾಲೂಕಿನಲ್ಲಿ ಮಹಾತ್ವಾಕಾಂಕ್ಷಿಯಾದ ಹಲವು ಶಾಶ್ವತ ಜನಪರ ಯೋಜನೆಗಳನ್ನು ಜಾರಿಗೆ ತಂದರು.

ಬಿ.ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಸದಾನಂದಗೌಡ ಈ ಮೂರು ಜನ ಮುಖ್ಯಮಂತ್ರಿಗಳಿದ್ದಾಗ ಅಬಕಾರಿ ಸಚಿವರಾಗಿ ಕೆಲಸ ಮಾಡಿದ ಹೆಗ್ಗಳಿಕೆ ರೇಣುಕಾಚಾರ್ಯರಿಗೆ ಸಲ್ಲುತ್ತದೆ.

2008ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೊಳಿಸಿದ ಜನಸ್ಪಂದನ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊನ್ನಾಳಿ-ನ್ಯಾಮತಿ ತಾಲೂಕಿನಾದ್ಯಂತ ಚಾಚೂ ತಪ್ಪದೇ 50 ಗ್ರಾಮಗಳಲ್ಲಿ ಆಯೋಜಿಸಿ ಆ ಮೂಲಕ ಜನರ ಸಮಸ್ಯೆಗೆ ಧ್ವನಿಯಾಗಿ ಜನರ ಕಷ್ಟಗಳನ್ನು ಬಗೆಹರಿಸುವ ಕೆಲಸ ಮಾಡಿದ್ದರು.

ಪ್ರಥಮಬಾರಿಗೆ 2008 ರ ಅಕ್ಟೋಬರ್‌ 3 ರಂದು ಹೊನ್ನಾಳಿಯ ಎಲ್‌ಐಸಿ ಕಚೇರಿ ಪಕ್ಕದ ಮೈದಾನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಜನಸ್ಪಂದ‌ನ ಕಾರ್ಯಕ್ರಮ ಆಯೋಜನೆ ಮಾಡಿದ್ದು 50 ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಧ್ಯಾ ಸುರಕ್ಷ, ವಿಧವಾ ವೇತನ, ಅಂಗವಿಕಲವೇತನ, ಭಾಗ್ಯಲಕ್ಷ್ಮಿ ಬಾಂಡ್‌ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಸುಮಾರು 25 ಸಾವಿರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿದ್ದು ಇತಿಹಾಸವಾಗಿದೆ. ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 40 ನೇ ಜನಸ್ಪಂದನಾ ಕಾರ್ಯಕ್ರಮವನ್ನು ನ್ಯಾಮತಿಯಲ್ಲಿ ಆಯೋಜನೆ ಮಾಡಿದ್ದು ಈ ಸಂದರ್ಭದಲ್ಲಿ ಅನೇಕ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಯಿತು. 2013 ರ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶ ಅನಿವಾರ್ಯ ಕಾರಣಗಳಿಂದ ಯಡಿಯೂರಪ್ಪ ನವರ ನೇತೃತ್ವದಲ್ಲಿ ಕೆಜೆಪಿಯಿಂದ ಸ್ಪರ್ದಿಸಿ ವಿವಿಧ ಕಾರಣಗಳಿಂದ ರೇಣುಕಾಚಾರ್ಯರು ಸೋಲು ಅನುಭವಿಸಿದರು. ಆದರೂ, 60 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಸೋಲು, ಗೆಲುವು ಸಹಜ. ಎಲ್ಲಿಕಳೆದುಕೊಂಡಿರುತ್ತೇವೆಯೋ ಅಲ್ಲಿಯೇ ಹುಡುಕಬೇಕು ಎನ್ನುವ ನಾಣ್ಣುಡಿಯಂತೆ ರೇಣುಕಾಚಾರ್ಯರು ಸೋತ ಕ್ಷೇತ್ರದಲ್ಲಿ ಮತ್ತೆ ಹೋರಾಡಿ ಗೆದ್ದು ಎದುರಾಳಿಗಳಿಗೆ ತಿರುಗೇಟು ನೀಡಿ ಇಡೀ ರಾಜ್ಯಕ್ಕೆ ಸಂದೇಶ ನೀಡಿ ಬೇರೆಯವರಿಗೆ ಮಾದರಿಯಾಗಿದ್ದಾರೆ.

2013ರ ಚುನಾವಣೆಯಲ್ಲಿ ಸೋತಾಗ ಎದೆಗುಂದದೇ ಮನೆಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದ ಜನತೆಯ ಸಂಕಷ್ಟ ಪರಿಹಾರಕ್ಕೆ ಬದ್ಧರಾಗಿ ಹಗಲಿರುಳೆನ್ನದೆ ಅನೇಕ ಹೋರಾಟಗಳನ್ನು ನಡೆಸಿದರು.

ರೈತರಿಗೆ ಬೆಂಬಲ ಬೆಲೆಗಾಗಿ ಒತ್ತಾಯಿಸಿ ಹೊನ್ನಾಳಿಯಿಂದ ದಾವಣಗೆರೆಗೆ ಪಾದಯಾತ್ರೆ ನಡೆಸಿ ಸಾವಿರಾರು ಕಾರ್ಯಕರ್ತರು, ಮುಖಂಡರು, ರೈತರೊಂದಿಗೆ ಜಿಲ್ಲಾಧಿ ಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ನಂತರ ಹೊನ್ನಾಳಿಯಲ್ಲಿ ಸಾರ್ವಜನಿಕರು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ತಾಲೂಕು ಕಚೇರಿ ಮುಂದೆ ಸಾವಿರಾರು ಕಾರ್ಯಕರ್ತರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದು ಅವರಲ್ಲಿನ ಹೋರಾಟದ ಕಿಚ್ಚಿಗೆ ಸಾಕ್ಷಿ.

ಅಡಕೆಗೆ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿ ನೂರಾರು ರೈತರೊಂದಿಗೆ ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಿದರು. ಬಗರ್‌ ಹುಕುಂ ರೈತರಿಗೆ ಪಟ್ಟಾ ಮತ್ತು ಬಸ್‌ ದರ ಏರಿಕೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಿರಂತರವಾಗಿ ಜನ ಸಾಮಾನ್ಯರ ಪರವಾಗಿ ನಡೆಸಿದ ಹೋರಾಟದ ಫಲವಾಗಿ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ಶಾಸಕರಾಗಿ ಆಯ್ಕೆಯಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ವಿವಿಧ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳು

– 2018-19 ನೇ ಸಾಲಿನಲ್ಲಿ ಎಸ್‌.ಸಿ.ಪಿ ಯೋಜನೆಯಡಿ 307.39 ಲಕ್ಷ ಅನುದಾನದಲ್ಲಿ 16 ಕಾಲೋನಿಗಳಲ್ಲಿ 5.30 ಕಿ.ಲೋ ಮೀಟರ್‌ ಕಾಂಕ್ರಿಟ್‌ ರಸ್ತೆ ನಿರ್ಮಾಣ.

– ಓ.ಎಸ್‌.ಪಿ ಯೋಜನೆಯಡಿ 5 ಕಾಲೋನಿಗಳಲ್ಲಿ 99.01 ಲಕ್ಷ ವೆಚ್ಚದ 1.60 ಕಿಲೋ ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ.

– ಸಿ.ಎಂ.ಜಿ.ಆರ್‌ ಯೋಜನೆಯಡಿ 282.5 ಲಕ್ಷ ಆನುದಾನದಲ್ಲಿ ವಿವಿಧ 5 ಜಿಲ್ಲಾ ಮುಖ್ಯರಸ್ತೆಗಳ 12.40 ಕಿಲೋಮೀಟರ್‌ ಡಾಂಬರ್‌ ರಸ್ತೆ ನಿರ್ಮಾಣ.

– ಎಸ್‌.ಸಿ.ಪಿ ಯೋಜನೆಯಡಿ 2 ಕಾಲೋನಿಗಳಲ್ಲಿ 65.79 ಲಕ್ಚ ವೆಚ್ಚದಲ್ಲಿ ಲ್ಲಿ 1.10 ಕಿಲೋಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ.

– ಟಿ.ಎಸ್‌.ಪಿ ಯೋಜನೆಯಡಿ 2 ಕಾಲೋನಿಗಳಲ್ಲಿ 34.66 ಲಕ್ಷ ಅನುದಾನದಲ್ಲಿ 0.60 ಕಿಲೋ ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ.

– ಎಸ್‌.ಡಿ.ಪಿ ಯೋಜನೆಯಡಿ 1 ಕಾಲೋನಿಯಲ್ಲಿ 96.91 ಲಕ್ಷ ಆನುದಾನದಲ್ಲಿ 1.52 ಕಿಲೋಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ.

– ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡ ಯೋಜನೆಯಡಿ 326 ಲಕ್ಷ ಅನುದಾನದಲ್ಲಿ 14 ಶಾಲೆಗಳ ನಿರ್ಮಾಣ. ಎಸ್‌.ಎಚ್‌.ಡಿ.ಪಿ ಹಂತ 4 ಯೋಜನೆಯಡಿ ಮಾಸಡಿ ಕುಂದೂರು ಮತ್ತು ಚೀಲೂರು ನ್ಯಾಮತಿ ರಸ್ತೆಗಳನ್ನು ಒಟ್ಟು 29.00 ಕಿಲೋ ಮೀಟರ್‌ಗಳನ್ನು 2500 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ. ಒಟ್ಟು 2018-19 ನೇ ಸಾಲಿನಲ್ಲಿ 3714.96 ಲಕ್ಷ ಅನುದಾನ ಬಳಕೆ.

– 2019-20 ನೇ ಸಾಲಿನಲ್ಲಿ ಎಸ್‌.ಸಿ.ಪಿ ಯೋಜನೆಯಡಿ 19 ಕಾಲೋನಿಗಳಲ್ಲಿ 659.67 ಲಕ್ಷದಲ್ಲಿ 11 ಕಿಲೋಮೀಟರ್‌ ಕಾಂಕ್ರಿಟ್‌ ರಸ್ತೆ ನಿರ್ಮಾಣ.

– ಟಿ.ಎಸ್‌.ಪಿ ಯೋಜನೆಯಡಿ 11 ಕಾಲೋನಿಯಲ್ಲಿ 315 ಲಕ್ಷ ವೆಚ್ಚದಲ್ಲಿ 0.55 ಕಿಲೋ ಮೀಟರ್‌ ಕಾಂಕ್ರೀಟ್‌ ರಸೆ ನಿರ್ಮಾಣ.

– ಅಪೆಂಡಿಕ್ಸ್‌ ಇ ಯೋಜನೆಯಡಿ 8 ವಿವಿಧ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಯಲ್ಲಿ 19.40 ಕಿಲೋ ಮೀಟರ್‌ಡಾಂಬರ್‌ ರಸ್ತೆ ನಿರ್ಮಾಣ. ಅನುದಾನ 1900 ಲಕ್ಷ

– ಸಿ.ಎಂ.ಜಿ.ಆರ್‌.ವೈ ಯೋಜನೆಯಡಿ 14 ಕಿಲೋ ಮೀಟರ್‌ ವಿವಿಧ ಜಿಲ್ಲಾ ಮುಖ್ಯರಸ್ತೆಗಳ ಡಾಂಬರ್‌ ರಸ್ತೆ ಕಾಮಗಾರಿ ಆನುದಾನ 333.80 ಲಕ್ಷ.

– ಎಸ್‌.ಸಿ.ಪಿ ಯೋಜನೆಯಡಿ 6 ವಿವಿಧ ಕಾಲೋನಿಗಳಲ್ಲಿ 8 ಕಿಲೋ ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ. ಆನುದಾನ 500 ಲಕ್ಷ.

– 2019-20 ನೇ ಸಾಲಿನಲ್ಲಿ ಒಟ್ಟು 3708.47 ಲಕ್ಷ ಮೊತ್ತದ ಕಾಮಗಾರಿಯಾಗಿವೆ.

– 2020-21 ನೇ ಸಾಲಿನಲ್ಲಿ ಎಸ್‌.ಸಿ.ಪಿ ಯೋಜನೆಯಡಿ 6 ಕಾಲೋನಿಗಳಲ್ಲಿ 7.80 ಕಿಲೋ ಮೀಟರ್‌ ಕಾಂಕ್ರಿಟ್‌ ರಸ್ತೆ ನಿರ್ಮಾಣ ಅನುದಾನ 418.94 ಲಕ್ಷ.

– ಟಿ.ಎಸ್‌.ಪಿ ಯೋಜನೆಯಡಿ 1 ಕಾಲೋನಿಯಲ್ಲಿ 0.90 ಕಿಲೋ ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ. ಆನುದಾನ 87.12 ಲಕ್ಷ.
– ಎಸ್‌.ಡಿ.ಪಿ ಯೋಜನೆಯಡಿ 3 ಜಿಲ್ಲಾ ಮುಖ್ಯರಸ್ತೆಯಲ್ಲಿ ಡಾಂಬರ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಒಟ್ಟು 3.70 ಕಿಲೋ ಮೀಟರ್‌ ರಸ್ತೆಯನ್ನು 209.36 ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತಿದೆ.

– ಅಪೆಂಡಿಕ್ಸ್‌ ಇ ಯೋಜನೆಯಡಿ 1 ಕಾಮಗಾರಿ 700 ಲಕ್ಷ ವೆಚ್ಚದಲ್ಲಿ 2 ಕಿಲೋ ಮೀಟರ್‌, ರಾಜ್ಯ ಹೆದ್ದಾರಿ 25 ರಲ್ಲಿ ಹೊನ್ನಾಳಿ ಟಿ.ಬಿ ವೃತ್ತ¤ದಿಂದ ಕೃಷ್ಣಪ್ಪ ನಗರದ ವರೆಗೆ ಚತುಸ್ಪಥ ಡಾಂಬರ್‌ ರಸ್ತೆ ನಿರ್ಮಾಣ ಕಾಮಗಾರಿ ಪ್ರಸ್ತಾಪಿಸಲಾಗಿದೆ.

– ಅಪೆಂಡಿಕ್ಸ್‌ ಇ ಯೋಜನೆಯಡಿ 2 ಕಾಮಗಾರಿಗಳನ್ನು ಒಟ್ಟು ರೂಪಾಯಿ 800 ಲಕ್ಷಗಳಿಗೆ ಹೊನ್ನಾಳಿ-ನ್ಯಾಮತಿಯಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

– ನಬಾರ್ಡ 25 ಯೋಜನೆಯಡಿ 7 ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡಗಳನ್ನು ಒಟ್ಟು ರೂಪಾಯಿ 122 ಲಕ್ಷಗಳಿಗೆ ನಿರ್ಮಿಸಲಾಗಿದೆ. 2020-21 ನೇ ಸಾಲಿನಲ್ಲಿ ಒಟ್ಟು 2337.42 ಲಕ್ಷದ ಕಾಮಗಾರಿ ನಡೆದಿವೆ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.