ವಲಸೆ ಕಾರ್ಮಿಕರ ನೋವಿಗೆ ಸ್ಪಂದನೆ
ಬಿಜೆಪಿ ವರ್ಚುವಲ್ ರ‌್ಯಾಲಿ ಯಲ್ಲಿ ಸಚಿವ ಅಮಿತ್ ಶಾ
Team Udayavani, Jun 8, 2020, 5:40 AM IST
ಹೊಸದಿಲ್ಲಿ: ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಬೇಕಿರುವ ಬಿಹಾರ ವಿಧಾನಸಭೆ ಚುನಾವಣೆಗಾಗಿ ಸಿದ್ಧತೆ ನಡೆಸಿರುವ ಬಿಜೆಪಿಯು ವರ್ಚುವಲ್ ರ‌್ಯಾಲಿಯ ಮೂಲಕ ಜನರನ್ನು ತಲುಪುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಇದರ ಮೊದಲ ಹೆಜ್ಜೆ ಎಂಬಂತೆ ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಬಿಹಾರ ಜನ ಸಂವಾದ್’ ಹೆಸರಿನ ವರ್ಚುವಲ್ ರ‌್ಯಾಲಿಗೆ ಚಾಲನೆ ನೀಡಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಮತ್ತು ಅವರನ್ನು ಅವರ ಊರುಗಳಿಗೆ ತಲುಪಿಸಲು ಮೋದಿ ಸರಕಾರ ಎಲ್ಲ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದರು. ದೇಶದ ವಿವಿಧೆಡೆ ಕೆಲಸ ಮಾಡುವ ವಲಸಿಗ ಕಾರ್ಮಿಕರಲ್ಲಿ ಬಿಹಾರಿಗಳೇ ಅಧಿಕ ಇರುವ ಹಿನ್ನೆಲೆಯಲ್ಲಿ ಶಾ ಮಾತು ಮಹತ್ವ ಹೊಂದಿದೆ.
ವಲಸೆ ಕಾರ್ಮಿಕರ ಸಮಸ್ಯೆ ಇತ್ಯರ್ಥಗೊಳಿಸಲು ಎಲ್ಲ ರಾಜ್ಯಗಳಿಗೆ 11 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 1.25 ಕೋಟಿ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಿದ್ದೇವೆ. ಪ್ರಯಾಣದ ವೇಳೆ, ಉಚಿತ ಆಹಾರ, ನೀರು ನೀಡಲಾಗಿದೆ ಎಂದು ಶಾ ಹೇಳಿದರು.
ಜನಸಂಪರ್ಕಕ್ಕಾಗಿ 75 ರ‌್ಯಾಲಿ
ಕೋವಿಡ್-19 ಈ ಬಿಕ್ಕಟ್ಟಿನ ಸಂದರ್ಭದಲ್ಲೂ ಬಿಹಾರದ ಎಲ್ಲ ಜನತೆಯನ್ನು ತಲುಪಲು ಬಿಜೆಪಿ ನಿರ್ಧರಿಸಿದೆ. “ಆತ್ಮನಿರ್ಭರ ಭಾರತ ಪರಿಕಲ್ಪನೆ’ಯ ಆಧಾರದಲ್ಲಿ ಜನರೊಂದಿಗೆ ಬೆಸೆದುಕೊಳ್ಳಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸುಮಾರು 75 ಡಿಜಿಟಲ್ ರ‌್ಯಾಲಿಯನ್ನು ನಡೆಸಲಿದೆ ಎಂದರು.
ನಿತೀಶ್ ಸಿಎಂ ಅಭ್ಯರ್ಥಿ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದು, ನಿತೀಶ್ ಆಡಳಿತ ವೈಖರಿ ವಿರುದ್ಧ ಸಿಟ್ಟಿಗೆದ್ದಿರುವ ಎನ್‌ಡಿಎ ಅಂಗಪಕ್ಷ ಲೋಕ ಜನಶಕ್ತಿ ಪಾರ್ಟಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ವಿಶ್ವದ ಅತೀ ದೊಡ್ಡ ವರ್ಚುವಲ್ ರ‌್ಯಾಲಿ
ದೇಶಕ್ಕೇ ಮೊದಲ ಈ ವರ್ಚುವಲ್ ರ‌್ಯಾಲಿಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು, ಇದು ವಿಶ್ವದಲ್ಲೇ ಅತೀ ದೊಡ್ಡದು. ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಮಿತ್ ಶಾ, ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾಗಿಯಾಗಿ
ದ್ದರು. ಶಾ ಭಾಷಣವನ್ನು ಬಿಹಾರದ 243 ವಿಧಾನಸಭೆ ಕ್ಷೇತ್ರಗಳಲ್ಲಿ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ನೇರ ಪ್ರದರ್ಶನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.