“ಗಬ್ಬರ್ ಸಿಂಗ್” ಖ್ಯಾತಿಯ ನಿವೃತ್ತ ಐಪಿಎಸ್ ಅಧಿಕಾರಿ ಕೆಎಸ್ ಎನ್ ಕೋವಿಡ್ ನಿಂದ ಸಾವು
ಶೋಲೆಯ ಗಬ್ಬರ್ ಸಿಂಗ್ ಹೆಸರಿನಲ್ಲಿ ಮೂರ್ತಿ ಕೂಡಾ ಜನಪ್ರಿಯರಾಗಿದ್ದರು ಎಂದು ವರದಿ ವಿವರಿಸಿದೆ.
Team Udayavani, May 17, 2021, 4:29 PM IST
ಹೈದರಾಬಾದ್:ಗಬ್ಬರ್ ಸಿಂಗ್ ಎಂದೇ ಜನಪ್ರಿಯರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೆಎಸ್ ಎನ್ ಮೂರ್ತಿ(78ವರ್ಷ) ಸೋಮವಾರ ಕೋವಿಡ್ 19 ಸೋಂಕಿನಿಂದ ವಿಧಿವಶರಾಗಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ ನ ಬಂಜಾರ್ ಹಿಲ್ಸ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ(ಮೇ 16) ನಿವೃತ್ತ ಐಪಿಎಸ್ ಅಧಿಕಾರಿ ಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 2000ನೇ ಇಸವಿಯಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಬಂಜಾರಾ ಹಿಲ್ಸ್ ನಲ್ಲಿ ವಾಸವಾಗಿದ್ದರು.
ಆಂಧ್ರಪ್ರದೇಶದಾದ್ಯಂತ ಮೂರ್ತಿಯವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಹಳೇ ಹೈದರಾಬಾದ್ ನಗರದಲ್ಲಿ ಮೊದಲು ಅಧಿಕಾರಿಯಾಗಿ ನೇಮಕಗೊಂಡಿದ್ದರು. ಚಾರ್ ಮಿನಾರ್ ಪೊಲೀಸ್ ಠಾಣೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕವಾಗಿದ್ದರು. ಈ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಿದ್ದರು ಎಂದು ವರದಿ ತಿಳಿಸಿದೆ.
ಪೊಲೀಸ್ ವಲಯದಲ್ಲಿ ಶಿಸ್ತಿನ ಅಧಿಕಾರಿ ಎಂದೇ ಹೆಸರಾಗಿದ್ದರು. ಅಲ್ಲದೇ ಬಾಲಿವುಡ್ ನ ಅಮ್ಜದ್ ಖಾನ್ ನಟನೆಯ ಶೋಲೆಯ ಗಬ್ಬರ್ ಸಿಂಗ್ ಹೆಸರಿನಲ್ಲಿ ಮೂರ್ತಿ ಕೂಡಾ ಜನಪ್ರಿಯರಾಗಿದ್ದರು ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ
India ತಿರುಗೇಟು; ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್
Tirumala Temple: ಕಾಲ್ತುಳಿತ ದುರಂತದ ಬೆನ್ನಲ್ಲೇ ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ
Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
MUST WATCH
ಹೊಸ ಸೇರ್ಪಡೆ
Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ
ಕೆಎ-11-1977: ಇದು ವಾಹನ ಸಂಖ್ಯೆಯಲ್ಲ, ಸಿನಿಮಾ ಟೈಟಲ್
ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ
Brahmin welfare panel; 4 ಮಕ್ಕಳು ಪಡೆದು 1 ಲಕ್ಷ ರೂ. ಬಹುಮಾನ ಗೆಲ್ಲಿ!
Champions Trophy: ದ.ಆಫ್ರಿಕಾ ತಂಡ ಪ್ರಕಟ; ಇಬ್ಬರು ಸ್ಟಾರ್ ವೇಗಿಗಳಿಗಿಲ್ಲ ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.