ವಿಕೆಟ್ ಕೀಪಿಂಗ್ ನಲ್ಲಿ ರಿಷಭ್ ಪಂತ್ ಶತಕ : ಧೋನಿ ದಾಖಲೆ ಪತನ
Team Udayavani, Dec 29, 2021, 12:54 PM IST
ಸೆಂಚುರಿಯನ್: ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ಭಾರತದ ಭರವಸೆಯ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿರುವ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದು, ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬವುಮ ಅವರ ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ವಿಕೆಟ್ ಹಿಂದುಗಡೆ 100 ವಿಕೆಟ್ ಪತನಕ್ಕೆ ಕಾರಣರಾದರು. ಪಂತ್ ಅವರು ಅತೀ ಕಡಿಮೆ 26 ಟೆಸ್ಟ್‌ಗಳಲ್ಲಿಯೇ ಈ ಮೈಲಿಗಲ್ಲು ದಾಖಲಿಸಿದರು. ಧೋನಿ ಅವರು 36 ಟೆಸ್ಟ್ ಗಳಲ್ಲಿ ಬರೆದ ದಾಖಲೆ ಪತನಗೊಂಡಿತು. ರಿಷಬ್ ಪಂತ್ 93 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳ ಮೂಲಕ 101 ವಿಕೆಟ್ ಪತನಕ್ಕೆ ಕಾರಣವಾಗಿದ್ದಾರೆ.
ಕೀಪಿಂಗ್ ವಿಭಾಗದಲ್ಲಿ ದೊಡ್ಡ ಹೆಸರಾಗಿರುವ ಧೋನಿ ಸ್ಟಂಪ್‌ನ ಹಿಂದಿನಿಂದ 294 ವಿಕೆಟ್ ಪತನಕ್ಕೆ ಕಾರಣರಾಗಿದ್ದರು. ಅವರು 256 ಕ್ಯಾಚ್‌ಗಳು ಮತ್ತು 38 ಬಾರಿ ಸ್ಟಂಪ್ ಮಾಡಿದ್ದರು.ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪತನಕ್ಕೆ ಕಾರಣವಾದ ಆರನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು.
ಸೈಯದ್ ಕಿರ್ಮಾನಿ
ಈ ಪಟ್ಟಿಯಲ್ಲಿ ಭಾರತದ ಕೆಲವು ದಿಗ್ಗಜ ಆಟಗಾರರಿದ್ದು, ಆ ಪೈಕಿ 1983 ರ ವಿಶ್ವಕಪ್ ವಿಜೇತ ತಂಡ ದ ಸೈಯದ್ ಕಿರ್ಮಾನಿ ಭಾರತಕ್ಕಾಗಿ ದೀರ್ಘಕಾಲ ವಿಕೆಟ್ ಕೀಪರ್ ಆಗಿ ಒಟ್ಟು 198 ವಿಕೆಟ್ ಪತನಕ್ಕೆ ಕಾರಣರಾಗಿದ್ದರು., 160 ಕ್ಯಾಚ್‌ಗಳನ್ನು ಪಡೆದಿದ್ದು, 38 ಬಾರಿ ಬ್ಯಾಟ್ಸ್ ಮನ್ ಗಳನ್ನು ಸ್ಟಂಪ್ ಮಾಡಿದ್ದರು. ಅವರು 42 ಟೆಸ್ಟ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಕಿರಣ್ ಮೊರೆ
ಮತ್ತೊಬ್ಬ ಅಸಾಧಾರಣ ವಿಕೆಟ್‌ಕೀಪರ್ ಕಿರಣ್ ಮೊರೆ ಅವರು ನಿವೃತ್ತರಾಗುವ ಮೊದಲು 110 ಕ್ಯಾಚ್‌ಗಳು ಮತ್ತು 20 ಸ್ಟಂಪಿಂಗ್‌ಗಳು ಸೇರಿದಂತೆ 130 ಔಟ್‌ಗಳನ್ನು ಪೂರ್ಣಗೊಳಿಸಿದ್ದರು. ಅವರು 39 ಟೆಸ್ಟ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ನಯನ್ ಮೊಂಗಿಯಾ
ಮೊಂಗಿಯಾ ಅವರು 99 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳು ಸೇರಿದಂತೆ 107 ಬಾರಿ ಔಟ್ ಮಾಡಿದ್ದರು. ಅವರು 41 ಟೆಸ್ಟ್‌ಗಳಲ್ಲಿ 100 ಔಟ್‌ಗಳ ಮೈಲಿಗಲ್ಲನ್ನು ದಾಟಿದ್ದರು.
ವೃದ್ಧಿಮಾನ್ ಸಹಾ
ಅತ್ಯುತ್ತಮ ವಿಕೆಟ್ ಕೀಪರ್ ಆಗಿರುವ ಸಹಾ ಕ್ಲೀನ್ ವಿಕೆಟ್‌ಕೀಪರ್ ಎನಿಸಿಕೊಂಡವರು. ಕಡಿಮೆ ತಪ್ಪುಗಳನ್ನು ಮಾಡುವ ಅವರು 92 ಕ್ಯಾಚ್‌ಗಳು ಮತ್ತು 12 ಸ್ಟಂಪಿಗ್‌ಗಳನ್ನು ಒಳಗೊಂಡಂತೆ ಒಟ್ಟು 104 ಬಲಿ ವಿಕೆಟ್‌ನ ಹಿಂದಿನಿಂದ ಪಡೆದಿದ್ದಾರೆ. ಸಹಾ ಕೂಡ 36 ಟೆಸ್ಟ್‌ಗಳಲ್ಲಿ ಮೈಲಿಗಲ್ಲನ್ನು ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.