ಸಾವಿರಾರು ಮಂದಿಯ ಸಾಮೂಹಿಕ ತಿಥಿ:ಗೋಸಾಯಿಘಾಟ್ ನಲ್ಲಿ ಸಿದ್ದತೆ ಗಳ ಪರಿಶೀಲನೆ
Team Udayavani, Oct 3, 2021, 4:06 PM IST
ಶ್ರೀರಂಗಪಟ್ಟಣ: ಗಂಜಾಂ ಕಾವೇರಿ ನದಿ ತೀರದ ಗೋಸಾಯಿಘಾಟ್ ನಲ್ಲಿ ಸೋಮವಾರ ಅ.4 ರಂದು ಕೊರೊನಾದಿಂದ ಸಾವನ್ನಪ್ಪಿದ ಸಾವಿರಾರು ಮಂದಿಗೆ ಸಾಮೂಹಿಕ ತಿಥಿಕಾರ್ಯ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ,ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜನಾಥ್ ಪ್ರಸಾದ್ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಅಶ್ವಥಿ,ತಹಶೀಲ್ದಾರ್ ಶ್ವೇತಾ,ಡಾ ಭಾನುಪ್ರಕಾಶ್ ಶರ್ಮ ,ಬಿಜೆಪಿ ಮುಖಂಡ ಟಿ. ಶ್ರೀಧರ್ ಮತ್ತಿತರ ಪ್ರಮುಖರು ಗೋಸಾಯಿಘಾಟ್ ಗೆ ತೆರಳಿ ಸಿದ್ಧತೆ ಗಳ ಪರಿಶಿಲನೆ ನಡರಸಿದರು.
ಅಧಿಕಾರಿಗಳು ಕರ್ಮ ಹೋಮ ನಡೆಯುವ ಸ್ಥಳ , ಪೂಜಾ ಸ್ಥಳಗಳು, ಬಾಳೆ, ಮಾವಿನ ಹಸಿರು ತೋರಣ, ಮುಖ್ಯಸ್ಥರು ಕುಳಿತುಕೊಳ್ಳುವ ಸ್ಥಳ ಮತ್ತು ಶಾಮೀಯಾನ ಹಾಕಿರುವ ಬಗ್ಗೆ ಪರಿಶೀಲನೆ ನಡರಸಿದರು.
ಕಳೆದ ತಿಂಗಳು ಮಳವಳ್ಳಿಯ ಬೆಳಕವಾಡಿ ಶಿಂಷಾ ನದಿ ದಡದಲ್ಲಿ ಕೊರೊನಾದಿಂದ ಮೃತರಾದ ಅನಾಥ ವ್ಯಕ್ತಿಗಳ ಅಸ್ಥಿ ವಿಸರ್ಜನೆ ಯನ್ನು ಸರಕಾರವೇ ಕಂದಾಯ ಸಚಿವರ ನೇತೃತ್ವದಲ್ಲಿ ಮಾಡಿತ್ತು .ಆ 1200 ಮಂದಿಗೆ ಸೋಮವಾರ ಗೋಸಾಯಿಘಾಟ್ ನಲ್ಲಿ ಕರ್ಮ ಪುಣ್ಯಾಹಗಳನ್ನು ವೇದ ಬ್ರಹ್ಮ ಡಾ. ಭಾನುಪ್ರಕಾಶ್ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಯಿಂದ ವಿವಧಿವಿಧಾನದ ಪೂಜೆಗಳಾದ ಮೋಕ್ಷ ನಾರಾಯಣ ಬಲಿ ,ಕರ್ಮವನ್ನುಮಾಡಲಾಗುತ್ತದೆ.
ಪ್ರಾರಂಭದಲ್ಲಿ ಗಣಪತಿ ಪೂಜೆ ಪುಣ್ಯಾಹ, ಪಂಚಗವ್ಯ ಮತ್ತು ದ್ವಾರಸ ನಾರಾಯಣರ 12 ಕಳಸ ಪೂಜೆ, ಪ್ರಾಯಶ್ಚಿತ ತಿಲಹೋಮಗಳು ನಡೆಯುತ್ತದೆ ಪಂಚಗವ್ಯ ಪೂಜೆಮಾಡಿ ನಾಲ್ಕುವರೆ ಅಡಿ ಉದ್ದದ ವಿಷ್ಷ್ಣು ಪಾದವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.
ದಶಪಿಂಡ ಪ್ರದಾನ ವಿಧಾನಗಳು ನಂತರ 11 ನೇ ದಿನದ ರುದ್ರಪಾರಾಯಣ,ದಶದಾನ ಕಾರ್ಯಗಳನ್ನು ನಡೆಸಲಾಗುತ್ತದೆ. ಶ್ರೀರಂಗನ ದರ್ಶನ ಬಳಿಕ ಶಾಸ್ವತಿ ಧಾರ್ಮಿಕ ಕೇಂದ್ರದಲ್ಲಿ ಮೃತರಿಗೆ ಎಡೆ ಪೂಜೆ ಮಾಡಿ , ಪ್ರಸಾದ ಕೂಡ ನಡೆಯಲಿದೆ ಎಂದು ಡಾ. ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ.
ಪೊಲೀಸರು ಕಾರ್ಯಕ್ರಮ ನಡೆಯುವ ಸ್ಥಳ ಪ್ರವೇಶದ್ವಾರಗಳ ಬಳಿ ಭಿಗಿ ಭದ್ರತೆ ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.