ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ : 8ನೇ ಸ್ಥಾನಕ್ಕೆ ಏರಿದ ರೋಹಿತ್ ಶರ್ಮ
Team Udayavani, Mar 1, 2021, 12:10 AM IST
ದುಬಾೖ: ಭಾರತದ ಆರಂಭಕಾರ ರೋಹಿತ್ ಶರ್ಮ ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 6 ಸ್ಥಾನಗಳ ಪ್ರಗತಿ ಸಾಧಿಸಿ 8ನೇ ಸ್ಥಾನಕ್ಕೆ ಲಗ್ಗೆ ಇರಿಸಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್ಯಾಂಕಿಂಗ್ ಆಗಿದೆ. ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ತೋರ್ಪಡಿಸಿದ್ದು ರೋಹಿತ್ ಶರ್ಮ ಅವರ ಪ್ರಗತಿಗೆ ಕಾರಣ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೆನ್ನೈನ ಚಾಲೆಂಜಿಗ್ ಟ್ರ್ಯಾಕ್ ಮೇಲೆ 161 ರನ್ ಬಾರಿಸುವ ಮೂಲಕ ರೋಹಿತ್ ಅಬ್ಬರಿಸಿದ್ದರು. ಇವರ ಸಾಹಸದಿಂದ ಭಾರತಕ್ಕೆ 1-1 ಸರಣಿ ಸಮಬಲ ಸಾಧ್ಯವಾಗಿತ್ತು.
ಎರಡೇ ದಿನದಲ್ಲಿ ಮುಗಿದ ಅಹ್ಮದಾಬಾದ್ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಎಲ್ಲರೂ ರನ್ನಿಗಾಗಿ ಚಡಪಡಿಸುತ್ತಿದ್ದಾಗ ರೋಹಿತ್ ಶರ್ಮ 66 ಮತ್ತು ಅಜೇಯ 25 ರನ್ ಬಾರಿಸಿದ್ದರು. 3 ಪಂದ್ಯಗಳಿಂದ ಅವರು 298 ರನ್ ಪೇರಿಸಿದ್ದಾರೆ. ಇದೇ ವೇಳೆ ಚೇತೇಶ್ವರ್ ಪೂಜಾರ 2 ಸ್ಥಾನ ಕುಸಿತ ಅನುಭವಿಸಿದ್ದು, 10ನೇ ಸ್ಥಾನ ತಲುಪಿದ್ದಾರೆ.
ಕೇನ್ ವಿಲಿಯಮ್ಸನ್ ಅಗ್ರಸ್ಥಾನ ದಲ್ಲಿ ಮುಂದುವರಿದಿದ್ದಾರೆ. ಸ್ಟೀವನ್ ಸ್ಮಿತ್, ಲಬು ಶೇನ್, ರೂಟ್ ಅನಂತರದ ಸ್ಥಾನದಲ್ಲಿದ್ದಾರೆ.
ಅಶ್ವಿನ್ ನಂ.3 ಬೌಲರ್
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಆರ್. ಅಶ್ವಿನ್ 4 ಸ್ಥಾನ ಮೇಲೇರಿದ್ದು, ನಂಬರ್ 3 ಆಗಿದ್ದಾರೆ. ಅಶ್ವಿನ್ ಟಾಪ್-10 ಬೌಲಿಂಗ್ ಯಾದಿಯಲ್ಲಿರುವ ಭಾರತದ ಏಕೈಕ ಬೌಲರ್.
ಇದೇ ಸರಣಿ ವೇಳೆ ಟೆಸ್ಟ್ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ 30 ಸ್ಥಾನ ಜಿಗಿದು 38ನೇ ರ್ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್-10 ಬ್ಯಾಟ್ಸ್ಮನ್:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.