ಐಪಿಎಲ್ 2022: ರೋಚಕ ಹೋರಾಟದಲ್ಲಿ ಬೆಂಗಳೂರು ಜಯಭೇರಿ
ಬೌಲಿಂಗ್‌ನಲ್ಲಿ ನಿರೀಕ್ಷೆಗೂ ಮೀರಿದ ಬೌಲಿಂಗ್ ಪ್ರದರ್ಶನವಿತ್ತ ರಾಯಲ್ ಚಾಲೆಂಜರ್ಸ್
Team Udayavani, Mar 30, 2022, 11:24 PM IST
ಮುಂಬೈ: ಬೆಂಗಳೂರು ಬುಧವಾರದ ಐಪಿಎಲ್ ಮುಖಾಮುಖಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ 18.5 ಓವರ್‌ಗಳಲ್ಲಿ 128ಕ್ಕೆ ಆಲೌಟಾಯಿತು. ಇದನ್ನು ಬೆನ್ನತ್ತಿದ ಬೆಂಗಳೂರು 19.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು ಮಾತ್ರವಲ್ಲ 3 ವಿಕೆಟ್‌ಗಳ ಜಯ ಸಾಧಿಸಿತು.
ಬೆಂಗಳೂರು ಪರ ರುದರ್‌ಫೋರ್ಡ್ (28), ಶಹಬಾಝ್ ಅಹ್ಮದ್ (27) ಹೋರಾಟಕಾರಿ ಬ್ಯಾಟಿಂಗ್ ನಡೆಸಿದರು. ಆದರೆ ಪಂದ್ಯವನ್ನು ಗೆಲ್ಲಿಸಿದ್ದು ಅಂತಿಮ ಕ್ಷಣದಲ್ಲಿ ದಿನೇಶ್ ಕಾರ್ತಿಕ್ ನಡೆಸಿದ ಹೋರಾಟಕಾರಿ ಬ್ಯಾಟಿಂಗ್. ಅವರು ಏಳೇ ಎಸೆತಗಳಲ್ಲಿ 14 ರನ್ ಚಚ್ಚಿದರು.
ಬೌಲಿಂಗ್‌ನಲ್ಲಿ ಮೆರೆದ ಬೆಂಗಳೂರು
ಪಂಜಾಬ್ ವಿರುದ್ಧದ ಬೌಲಿಂಗ್ ವೈಫಲ್ಯವನ್ನೆಲ್ಲ ಬೆಂಗಳೂರು ಈ ಪಂದ್ಯದಲ್ಲಿ ಹೋಗಲಾಡಿಸಿಕೊಂಡಿತು. ಬಹುಕೋಟಿಯ ಒಡೆಯ ವನಿಂದು ಹಸರಂಗ 20 ರನ್ನಿಗೆ 4 ವಿಕೆಟ್ ಉಡಾಯಿಸಿ ಆರ್‌ಸಿಬಿಗೆ ಮೇಲುಗೈ ಒದಗಿಸಿದರು. ಬಲಗೈ ಮಧ್ಯಮ ವೇಗಿ ಆಕಾಶ್ ದೀಪ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಕೆಕೆಆರ್ ಮೇಲೆ ಘಾತಕವಾಗಿ ಎರಗಿದರು. ಅಲ್ಲಿ 21 ವೈಡ್ ಎಸೆದಿದ್ದ ಆರ್‌ಸಿಬಿ ಬೌಲರ್, ಇಲ್ಲಿ ಎಸೆದದ್ದು ಒಂದೇ ಒಂದು ವೈಡ್!
ಇವರಲ್ಲಿ ಆಕಾಶ್ ದೀಪ್, ಹರ್ಷಲ್ ಪಟೇಲ್ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಹಾರಿಸುವಲ್ಲಿ ಯಶಸ್ವಿಯಾದರು. ಹಸರಂಗ ಸತತ ಎಸೆತಗಳಲ್ಲಿ ಸುನೀಲ್ ನಾರಾಯಣ್ ಮತ್ತು ಶೆಲ್ಡನ್ ಜಾಕ್ಸನ್ ವಿಕೆಟ್ ಹಾರಿಸಿದರು. ಪಂದ್ಯದ 12ನೇ ಓವರ್‌ನಲ್ಲಿ ದಾಳಿಗಿಳಿದ ಹರ್ಷಲ್ ಪಟೇಲ್ ತಮ್ಮ ಮೊದಲೆರಡೂ ಓವರ್‌ಗಳನ್ನು ಮೇಡನ್ ಮಾಡಿದ್ದು ವಿಶೇಷವಾಗಿತ್ತು. ಅಪಾಯಕಾರಿ ಸ್ಯಾಮ್ ಬಿಲ್ಲಿಂಗ್ಸ್ ಈ ಓವರ್‌ನಲ್ಲಿ ಔಟಾದರು.
ಕುಸಿತಕ್ಕೆ ಚಾಲನೆ: 4ನೇ ಓವರ್ ಎಸೆಯಲು ಬಂದ ಆಕಾಶ್ ದೀಪ್ ತಮ್ಮ ಮೊದಲ ಎಸೆತದಲ್ಲೇ ವೆಂಕಟೇಶ್ ಐಯ್ಯರ್ ಆವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಐಯ್ಯರ್ 14 ಎಸೆತಗಳಿಂದ ಕೇವಲ 10 ರನ್ ಮಾಡಿದರು (ಒಂದು ಬೌಂಡರಿ). ಮತ್ತೋರ್ವ ಓಪನರ್ ಅಜಿಂಕ್ಯ ರಹಾನೆ ಅವರನ್ನು ಸಿರಾಜ್ ಮುಂದಿನ ಓವರ್‌ನಲ್ಲಿ ಕೆಡವಿದರು. ರಹಾನೆ ಗಳಿಕೆ 10 ಎಸೆತಗಳಿಂದ 9 ರನ್.
6ನೇ ಓವರ್‌ನಲ್ಲಿ ಅಬ್ಬರಿಸಿದ ನಿತೀಶ್ ರಾಣಾ ವಿರುದ್ಧ ಆಕಾಶ್ ದೀಪ್ ಕೂಡಲೇ ಸೇಡು ತೀರಿಸಿಕೊಂಡರು. ಅವರ ಆಟ ಒಂದು ಬೌಂಡರಿ, ಒಂದು ಸಿಕ್ಸರ್‌ಗೆ ಸೀಮಿತಗೊಂಡಿತು. ವಿಲ್ಲಿ ಅಮೋಘ ಕ್ಯಾಚ್ ಮೂಲಕ ಗಮನ ಸೆಳೆದರು. ಪವರ್ ಪ್ಲೇ ಅವಧಿಯಲ್ಲಿ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತ್ತು.
ಶ್ರೇಯಸ್ ಐಯ್ಯರ್ ವಿಫಲ: ನಾಯಕ ಶ್ರೇಯಸ್ ಐಯ್ಯರ್ ತಂಡದ ರಕ್ಷಣೆಗೆ ನಿಲ್ಲಬಹುದೆಂಬ ನಿರೀಕ್ಷೆ ಇತ್ತು. ಆದರೆ ಇದಕ್ಕೆ ಹಸರಂಗ ಅವಕಾಶ ಕೊಡಲಿಲ್ಲ. ಕೋಲ್ಕತ ನಾಯಕ ಬೆಂಗಳೂರು ನಾಯಕ ಡು ಪ್ಲೆಸಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಐಯ್ಯರ್ ಗಳಿಕೆ ಕೇವಲ 13 ರನ್. ಮುಂದಿನ ಎಸೆತದಲ್ಲೇ ಸ್ಯಾಮ್ ಬಿಲ್ಲಿಂಗ್ಸ್ ಬಲವಾದ ಲೆಗ್ ಬಿಫೋರ್ ಮನವಿಯಿಂದ ಪಾರಾದರು.
ಬಿಲ್ಲಿಂಗ್ಸ್ ಮತ್ತು ಸುನೀಲ್ ನಾರಾಯಣ್ ಸಿಡಿಯಲಾರಂಭಿಸಿದರೂ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಒಂದು ಫೋರ್, ಒಂದು ಸಿಕ್ಸರ್ ಬಾರಿಸಿದ ನಾರಾಯಣ್ 12 ರನ್ ಮಾಡಿ ಹಸರಂಗ ಅವರಿಗೆ ವಿಕೆಟ್ ಒಪ್ಪಿಸಿದರು. ಮುಂದಿನ ಎಸೆತದಲ್ಲೇ ಶೆಲ್ಡನ್ ಜಾಕ್ಸನ್ ಕ್ಲೀನ್ ಬೌಲ್ಡ್. 9 ಓವರ್ ಮುಕ್ತಾಯಕ್ಕೆ ಕೆಕೆಆರ್‌ನ 6 ವಿಕೆಟ್‌ಗಳನ್ನು 67 ರನ್ನಿಗೆ ಉಡಾಯಿಸಿದ ಆರ್‌ಸಿಬಿ ಅಮೋಘ ಹಿಡಿತ ಸಾಧಿಸಿತ್ತು.
ಈ ನಡುವೆ ಆ್ಯಂಡ್ರೆ ರಸೆಲ್ ಡೇಂಜರಸ್ ಆಗಿ ಕಂಡುಬಂದರು. 3 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ ಹರ್ಷಲ್ ಪಟೇಲ್ ಮುಂದೆ ಇವರ ಆಟ ನಡೆಯಲಿಲ್ಲ. 18 ಎಸೆತಗಳಿಂದ 25 ರನ್ ಮಾಡಿದ ರಸೆಲ್ ಅವರದೇ ಕೋಲ್ಕತ ಸರದಿಯ ಅಗ್ರ ಸ್ಕೋರ್ ಆಗಿತ್ತು. 15ನೇ ಓವರ್‌ನಲ್ಲಿ ಕೆಕೆಆರ್‌ನ 100 ರನ್ ಪೂರ್ತಿಗೊಂಡಿತು. ಆದರೆ ಆಗಲೇ 9 ವಿಕೆಟ್ ಹಾರಿ ಹೋಗಿತ್ತು. ಅಂತಿಮ ವಿಕೆಟಿಗೆ ಒಟ್ಟುಗೂಡಿದ ಉಮೇಶ್ ಯಾದವ್-ವರುಣ್ ಚಕ್ರವರ್ತಿ 27 ರನ್ ಪೇರಿಸಿದರು.
ಸಂಕ್ಷಿಪ್ತ ಸ್ಕೋರು: ಕೋಲ್ಕತ 18.5 ಓವರ್, 128 (ಆಂಡ್ರೆ ರಸೆಲ್ 25, ವನಿಂದು ಹಸರಂಗ 20ಕ್ಕೆ 4, ಆಕಾಶ್ ದೀಪ್ 45ಕ್ಕೆ 3, ಹರ್ಷಲ್ ಪಟೇಲ್ 11ಕ್ಕೆ 2). ಬೆಂಗಳೂರು 19.2 ಓವರ್, 132/7 (ರುದರ್‌ಫೋರ್ಡ್ 28, ಅಹ್ಮದ್ 27, ಕಾರ್ತಿಕ್ 14, ಟಿಮ್ ಸೌದಿಗೆ 20ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.