SAFF: ಭಾರತಕ್ಕೆ ಇಂದು ದ್ವಿತೀಯ ಪಂದ್ಯ- ನೇಪಾಲದ ಸವಾಲು ಗೆದ್ದರೆ ಸೆಮಿಫೈನಲ್
Team Udayavani, Jun 24, 2023, 6:28 AM IST
ಬೆಂಗಳೂರು: ಸ್ಯಾಫ್ ಫುಟ್‌ಬಾಲ್ ಕೂಟದ ಆರಂಭಿಕ ಪಂದ್ಯದಲ್ಲಿ ಪಾಕಿಸ್ಥಾನವನ್ನು 4-0 ಗೋಲುಗಳಿಂದ ಬಗ್ಗುಬಡಿದ ಭಾರತ ವೀಗ ನೇಪಾಲ ಸವಾಲಿಗೆ ಸಿದ್ಧವಾ ಗಿದೆ. ಶನಿವಾರ ಈ ಮುಖಾ ಮುಖೀ ಏರ್ಪಡಲಿದ್ದು, ಗೆದ್ದರೆ ಭಾರತ ಸೆಮಿ ಫೈನಲ್ ಅರ್ಹತೆ ಸಂಪಾದಿಸಲಿದೆ.
ಕಾಲ್ಚೆಂಡಿನ ಕಾದಾಟದಲ್ಲಿ ನೇಪಾಲ ಬಲಿಷ್ಠವೇನಲ್ಲ. ಈ ಕೂಟದ ಮೊದಲ ಮುಖಾಮುಖೀಯಲ್ಲಿ ಕುವೈಟ್‌ಗೆ 1-3ರಿಂದ ಶರಣಾಗಿದೆ. 1985ರಿಂದೀಚೆ ಭಾರತ-ನೇಪಾಲ ನಡುವೆ 23 ಪಂದ್ಯಗಳು ನಡೆದಿದ್ದು, ಭಾರತ 16-2 ಅಂತರದ ಗೆಲುವಿನ ದಾಖಲೆ ಹೊಂದಿದೆ. ಇತ್ತಂಡಗಳು ಕೊನೆಯ ಸಲ ಎದುರಾದದ್ದು 2021ರ ಸ್ಯಾಫ್ ಕೂಟದಲ್ಲಿ. ಭಾರತ ಇದನ್ನು 3-0 ಅಂತರದಿಂದ ಜಯಿಸಿತ್ತು.
ಸ್ಯಾಫ್ ಕೂಟದಲ್ಲಿ ಭಾರತ- ನೇಪಾಲ 9 ಸಲ ಮುಖಾಮುಖೀ ಯಾಗಿವೆ. ಭಾರತ 6-2 ಗೆಲುವಿನ ದಾಖಲೆ ಹೊಂದಿದೆ. ಅಂದಹಾಗೆ, ನೇಪಾಲ ವಿರುದ್ಧ ಅನುಭವಿಸಿದ ಎರಡೂ ಸೋಲುಗಳು ಸ್ಯಾಫ್ ಟೂರ್ನಿಯಲ್ಲೇ ಎದುರಾದುದನ್ನು ಮರೆಯವಂತಿಲ್ಲ.
ಚೆಟ್ರಿ ಪ್ರಚಂಡ ಫಾರ್ಮ್
ಇಂಟರ್‌ಕಾಂಟಿನೆಂಟಲ್ ಕಪ್ ಗೆದ್ದು ಸ್ಯಾಫ್ ಪಂದ್ಯಾವಳಿಗೆ ಆಗಮಿ ಸಿದ ಭಾರತ, ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಇದೇ ಲಯದಲ್ಲಿ ಸಾಗಿತು. ಅತ್ಯುತ್ತಮ ಫಾರ್ಮ್ ನಲ್ಲಿರುವ ನಾಯಕ ಸುನೀಲ್ ಚೆಟ್ರಿ ಹ್ಯಾಟ್ರಿಕ್ ಸಾಹಸದ ಮೂಲಕ ಮೆರೆದಿದ್ದರು. ಗಾಯಾಳು ಇಶಾನ್ ಪಂಡಿತ್ ಗೈರಲ್ಲಿ ಸುನೀಲ್ ಚೆಟ್ರಿ ಪ್ರದರ್ಶನ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ.
ಭಾರತ ತಂಡ ಪ್ರಧಾನ ಕೋಚ್ ಐಗರ್ ಸ್ಟಿಮಾಕ್ ನಿಷೇಧ ಕ್ಕೊಳ ಗಾಗಿರುವ ಕಾರಣ ನೇಪಾಲ ವಿರುದ್ಧ ಡಗೌಟ್‌ನಲ್ಲಿ ಕಾಣಿಸಿ ಕೊಳ್ಳು ವುದಿಲ್ಲ. ಇವರ ಬದಲು ಸಹಾಯಕ ಕೋಚ್ ಮಹೇಶ್ ಗಾವಿ ಇರುತ್ತಾರೆ. ಪಾಕಿಸ್ಥಾನ ವಿರುದ್ಧದ ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ಕಾರಣ ಸ್ಟಿಮಾಕ್ ಅವರಿಗೆ ರೆಡ್‌ಕಾರ್ಡ್ ನೀಡಲಾಗಿತ್ತು.
ಅಚ್ಚರಿಯ ಪ್ಯಾಕೇಜ್
ನೇಪಾಲ ಕೆಲವು ಅಚ್ಚರಿಯ ಪ್ಯಾಕೇಜ್ ಹೊಂದಿರುವುದನ್ನು ಮರೆಯುವಂತಿಲ್ಲ. 31 ವರ್ಷದ ಅನುಭವಿ ಮಿಡ್‌ಫಿಲ್ಡರ್ ರೋಹಿತ್ ಚಂದ್, ಫಾರ್ವರ್ಡ್ ಆಟಗಾರ ಅಂಜನ್ ಬಿಷ್ಟಾ ಇವರಲ್ಲಿ ಪ್ರಮುಖರು. ರೋಹಿತ್ ಚಂದ್ ಇಂಡೋನೇಷ್ಯಾ ಲೀಗ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಕೋಚ್ ವಿನ್ಸೆಂಜೊ ಆಲ್ಬರ್ಟೊ ಆ್ಯನ್ಸ್ ಭಾರತೀಯ ಫುಟ್‌ಬಾಲ್‌ನೊಂದಿಗೆ ನಂಟು ಹೊಂದಿರುವುದನ್ನು ಗಮನಿಸಬೇಕು. ಇವರು ಐ-ಲೀಗ್ ವಿಜೇತ ಗೋಕುಲಂ ಕೇರಳ ಎಫ್ಸಿ ತಂಡದ ಮ್ಯಾನೇಜರ್ ಆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.