ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

Team Udayavani, Apr 20, 2021, 2:15 AM IST

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಸಾಲಿಗ್ರಾಮ ಪ.ಪಂ. ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಿದರೆ ಇಡೀ ಜಿಲ್ಲೆಗೇ ಮಾದರಿಯಾಗ ಬಹುದು. ಸ್ಥಳೀಯವಾಗಿ ರೈತರು ಬೆಳೆಯುವ ಉತ್ಪನ್ನಗಳಿಗೆ ಒಂದು ಮಾರುಕಟ್ಟೆಯ ಅವಕಾಶ ಕಲ್ಪಿಸ ಬೇಕು. ಈಗಿರುವ ಕಿರುಸಂತೆಯನ್ನೇ ಹೆಚ್ಚು ಸುಸಜ್ಜಿತ ಗೊಳಿಸಿ ಶನಿವಾರ ಸಂತೆಯಾಗಿಸಿದರೆ, ಬೆಳೆಗಾರರನ್ನು ಬೆಂಬಲಿಸಿದಂತಾಗಬಹುದು. ಇದರಿಂದ ಪಟ್ಟಣದ ಆರ್ಥಿಕ ಚಟುವಟಿಕೆ ಮತ್ತಷ್ಟು ಹೆಚ್ಚಬಹುದು.

ಕೋಟ : ಸಾಲಿಗ್ರಾಮದಲ್ಲಿ ಶನಿವಾರ ಸಂತೆ ಏಕೆ ಆರಂಭವಾಗಬಾರದು? ಪಟ್ಟಣ ಪಂಚಾಯತ್‌ ಈ ದಿಸೆಯಲ್ಲಿ ಮುಂಚೂಣಿಯಲ್ಲಿ ನಿಂತು ಯಾಕೆ ಸಾಧ್ಯವಾಗಿಸಬಾರದು? ಅದೂ ಊರ ತರಕಾರಿಗಳ, ಕೃಷಿ ಉತ್ಪನ್ನಗಳ ಸಂತೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಬಹುತೇಕ ಗ್ರಾಮಗಳು ಕೃಷಿ ಆಧರಿಸಿ ಇರುವಂಥವು. ಉದಾಹರಣೆಗೆ ಪ.ಪಂ. ವ್ಯಾಪ್ತಿಯ ಜನಸಂಖ್ಯೆಯ ಶೇ. 50 ರಷ್ಟು ಮಂದಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. 2708 ಎಕ್ರೆ ಪ್ರದೇಶದಲ್ಲಿ ಭತ್ತ, ಶೇಂಗಾ, ದ್ವಿದಳ ಧಾನ್ಯಗಳನ್ನು ಬೆಳೆದರೆ, 310ಎಕ್ರೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ತೋಟಗಾರಿಕೆ ಬೆಳೆಗಾರರ ಸಂಖ್ಯೆ ಸುಮಾರು 2552. ಸುತ್ತಲಿನ 14 ಗ್ರಾಮಗಳಿಗೆ ಇಲ್ಲಿನ ಮುಖ್ಯ ಪೇಟೆ ಪ್ರಮುಖ ವಾಣಿಜ್ಯ ತಾಣ. ಹಾಗಾಗಿ ಕೃಷಿ ಉತ್ಪನ್ನ ಕೇಂದ್ರೀಕೃತ ಮಾರಾಟ, ಖರೀದಿ ಇಲ್ಲಿ ಜೋರಾಗಿ ನಡೆಯುತ್ತದೆ. ಆದರೆ ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಇಲ್ಲದ್ದರಿಂದ ರೈತರು ಮಧ್ಯವರ್ತಿಗಳನ್ನು ಆಶ್ರಯಿಸಬೇಕಿದೆ. ಇದರಿಂದ ನಷ್ಟವಾಗುತ್ತಿರುವುದು ರೈತರಿಗೇ. ಲಾಭವಾಗುತ್ತಿರುವುದು ಮಧ್ಯವರ್ತಿಗಳಿಗೆ ಮಾತ್ರ.

ಕಿರು ಸಂತೆಗೆ ದಶಕಗಳ ಇತಿಹಾಸ
ಹಲವು ದಶಕಗಳಿಂದ ಇಲ್ಲಿನ ಆಂಜನೇಯ ದೇವಸ್ಥಾನದ ಎದುರು ಪ್ರತಿ ಶನಿವಾರ ಸ್ಥಳೀಯ ಕಿರುಸಂತೆ ನಡೆಯುತ್ತಿದೆ. ಪ.ಪಂ. ವ್ಯಾಪ್ತಿ ಹಾಗೂ ಸುತ್ತಲಿನ ಕೋಡಿ, ಮಣೂರು, ಕೋಟ ಸೇರಿದಂತೆ ದೂರದ ಕೊಕ್ಕರ್ಣೆ, ಮಂದಾರ್ತಿ, ಶಿರೂರು ಮುದ್ದುಮನೆ ಮುಂತಾದ ಕಡೆಗಳ ಬೆಳೆಗಾರರು ತಮ್ಮಲ್ಲಿ ಬೆಳೆದ ಬಸಲೆ, ಹರಿವೆ, ಹೀರೆ, ನುಗ್ಗೆ, ಬೆಂಡೆಕಾಯಿ, ಗೆಣಸು, ಸೌತೆಕಾಯಿ, ತೊಂಡೆಕಾಯಿ ಮುಂತಾದ ತರಕಾರಿ, ಹಣ್ಣು ಹಂಪಲುಗಳನ್ನು ನೇರವಾಗಿ ಇಲ್ಲಿಗೆ ತಂದು ಮಧ್ಯವರ್ತಿಗಳ ಹಂಗಿಲ್ಲದೆ, ತಮ್ಮ ಬೆಳೆಗೆ ತಾವೇ ದರ ನಿಗದಿಪಡಿಸಿ ಮಾರುತ್ತಾರೆ.

ಶನಿವಾರ ಸಂತೆಯಾಗಲಿ
ಈಗಾಗಲೇ ಪ್ರತಿ ಶನಿವಾರ ನಡೆಯುತ್ತಿರುವ ಕಿರುಸಂತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪೇಟೆಯ ಆಸುಪಾಸಿನಲ್ಲೇ ಸೂಕ್ತ ಸ್ಥಳ ಗುರುತಿಸಿ ಮಾರುಕಟ್ಟೆ ನಿರ್ಮಿಸಬೇಕು. ಈಗಿನಂತೆ ಸ್ಥಳೀಯ ರೈತರಿಗೆ ನೇರ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿದಲ್ಲಿ ಜಿಲ್ಲೆಯಲ್ಲೇ ಮಾದರಿ ವ್ಯವಸ್ಥೆಯೊಂದು ಸಾಲಿಗ್ರಾಮದಲ್ಲಿ ರೂಪುಗೊಂಡಂತಾಗಲಿದೆ. ಜತೆಗೆ ಸಾಲಿಗ್ರಾಮದ ಅರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತರಿಸಲಿದ್ದು, ಸ್ಥಳೀಯ ರೈತರು, ಬೆಳೆಗಾರರನ್ನು ಬೆಂಬಲಿಸಿದಂತಾಗುತ್ತದೆ. ಆದರೆ ಇದನ್ನೆಲ್ಲ ಅನುಷ್ಠಾನಗೊಳಿಸಲು ಸ್ಥಳೀಯಾಡಳಿತದ ಜನಪ್ರತಿ ನಿಧಿ ಗಳು, ಅಧಿಕಾರಿಗಳಿಗೆ ಇಚ್ಛಾಶಕ್ತಿ, ಕನಸು ಕಾಣುವ ಗುಣ ಅಗತ್ಯವಿದೆ.

ಅತೀ ಹೆಚ್ಚು ಕೃಷಿ-ತೋಟಗಾರಿಕೆ ಬೆಳೆ
ಕೃಷಿ ಹಾಗೂ ತೋಟಗಾರಿಕೆ ಕೃಷಿಯಲ್ಲಿ ಕೋಟ ಹೋಬಳಿ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ. ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿನ ತೋಟಗಾರಿಕೆ ಬೆಳೆಗಳ ಬಗ್ಗೆ ಅವಲೋಕಿಸಿದಾಗ ಚಿತ್ರಪಾಡಿ ಗ್ರಾಮದಲ್ಲಿ 48.5 ಎಕ್ರೆ ತೋಟಗಾರಿಕೆ ಪ್ರದೇಶ ಹಾಗೂ 868 ಮಂದಿ ತೋಟಗಾರಿಕೆ ಬೆಳೆಗಾರರಿದ್ದಾರೆ. ಪಾರಂಪಳ್ಳಿಯಲ್ಲಿ 101ಎಕ್ರೆ ಜಾಗ, 699ಮಂದಿ ಕೃಷಿಕರು, ಕಾರ್ಕಡದಲ್ಲಿ 66.26 ಎಕ್ರೆ ಪ್ರದೇಶ 548 ಮಂದಿ ಕೃಷಿಕರು, ಗುಂಡ್ಮಿಯಲ್ಲಿ 94.14ಎಕ್ರೆ ಪ್ರದೇಶ ಹಾಗೂ 442ಮಂದಿ ಕೃಷಿಕರಿದ್ದಾರೆ. ಇಲ್ಲಿ ತೆಂಗು, ಅಡಿಕೆ, ಕಲ್ಲಂಗಡಿ, ಅಲಸಂದೆ, ಗುಂಬಳಕಾಯಿ, ಬದನೆಕಾಯಿ, ಹಸಿಮೆಣಸು, ಸೌತೆಕಾಯಿ, ಗೆಣಸು, ಆವರೆ, ತೊಂಡೆಕಾಯಿ ಮುಂತಾದವುಗಳನ್ನು ಬೆಳೆಯಲಾಗುತ್ತದೆ. ಭತ್ತ, ಶೇಂಗಾ ಹಾಗೂ ದ್ವಿದಳ ಧಾನ್ಯಗಳ ಬೆಳೆಯ ಕುರಿತು ಅವಲೋಕಿಸುವುದಾದರೆ ಚಿತ್ರಪಾಡಿ ಗ್ರಾಮದಲ್ಲಿ 567.44ಎಕ್ರೆ, ಪಾರಂಪಳ್ಳಿಯಲ್ಲಿ 656.54 ಎಕ್ರೆ, ಕಾರ್ಕಡದಲ್ಲಿ 750.44ಎಕ್ರೆ, ಗುಂಡ್ಮಿ ಗ್ರಾಮದಲ್ಲಿ 733.50 ಎಕ್ರೆ ಪ್ರದೇಶದಲ್ಲಿ ಕೃಷಿ ಭೂಮಿ ಇದೆ.

ಬೆಳೆದವನಿಗೆ ಸಿಗುವುದು ಅತ್ಯಲ್ಪ
ಊರ ಸೌತೆಕಾಯಿ ಕೆಜಿ ಹತ್ತು ರೂ. ಗಳಿಗೂ ವ್ಯಾಪಾರಿಗಳಿಗೆ ಮಾರಲು ಬೆಳೆಗಾರರು ಹೆಣಗಬೇಕು. ಆದರೆ ತರಕಾರಿ ಅಂಗಡಿಯಲ್ಲಿ ಅದೇ ಸೌತೆಕಾಯಿ ಕೆಜಿಗೆ 20 ರಿಂದ 30 ರೂ. ದರದಲ್ಲಿ ಮಾರಲಾಗುತ್ತದೆ. ಹೆಚ್ಚಾಗಿ ಬೆಳೆಯಲಾಗುವ ಅಲಸಂದೆ, ತೊಂಡೆಕಾಯಿ ಮಾರುಕಟ್ಟೆಯಲ್ಲಿ ಕೆಜಿ ಗೆ 60 ರೂ. ಗಳಂತೆ ಮಾರಾಟವಾಗುತ್ತಿದ್ದರೂ ಬೆಳೆಗಾರರಿಗೆ 25 ರೂ. ಸಿಕ್ಕರೆ ಅದೃಷ್ಟ ಖುಲಾಯಿಸಿದಂತೆ. ಇದು ಒಂದು ತರಕಾರಿಯ ಕಥೆಯಲ್ಲ, ತೆಂಗಿನಿಂದ ಹಿಡಿದು ಧಾನ್ಯಗಳವರೆಗೂ ಇದೇ ಕಥೆ.

ಟಾಪ್ ನ್ಯೂಸ್

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.