Kannada Cinema; ರಾಜ್ಯಾದ್ಯಂತ “ಸಾಂಕೇತ್’ ಸಿನೆಮಾ ತೆರೆಗೆ
Team Udayavani, Jul 27, 2024, 12:09 AM IST
ಮಂಗಳೂರು: ಕರಾವಳಿ ಭಾಗದ ಚಿತ್ರತಂಡವೇ ಸಿದ್ಧಪಡಿಸಿದ ವಿಭಿನ್ನ ಕಥಾನಕದ “ಸಾಂಕೇತ್’ ಕನ್ನಡ ಸಿನೆಮಾ ಶುಕ್ರವಾರದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ತೆರೆಕಂಡಿದೆ.
ರಾಜ್ಯದ 17 ಥಿಯೇಟರ್‌ನಲ್ಲಿ ಮೊದಲ ದಿನ 23 ಶೋ ಕಂಡಿದೆ. ಕರಾವಳಿ ಭಾಗದ ಪೈಕಿ ಮಂಗಳೂರು, ಉಡುಪಿ, ಸುರತ್ಕಲ್, ಮಣಿಪಾಲ, ಪಡುಬಿದ್ರಿಯಲ್ಲಿ ಸಿನೆಮಾ ಪ್ರದರ್ಶನ ಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ವ್ಯಕ್ತಿಗಳು ಎದುರಿಸುವ ಸಾಮಾಜಿಕ ಹಾಗೂ ಮಾನಸಿಕ ಒತ್ತಡಗಳನ್ನು ಆಧಾರವಾಗಿರಿಸಿ, ಒಬ್ಬ ವ್ಯಕ್ತಿಯ ಮದುವೆ-ಮಕ್ಕಳ ವಿಷಯದ ತೊಳಲಾಟವನ್ನು ಬಿಂಬಿಸುವ ವಿಭಿನ್ನ ಶೈಲಿಯಲ್ಲಿ ಸಿನೆಮಾ ಸಿದ್ದವಾಗಿದೆ.
ಚೈತ್ರಾ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೇಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮುಂತಾದವರು ಅಭಿನಯಿಸಿದ್ದಾರೆ.
ಏನಿದು ಸಾಂಕೇತ್?
ತನ್ನ ಜೀವನವು ಮದುವೆ ಆಗಿ ಮಕ್ಕಳನ್ನು ಹೊಂದಿದಾಗ ಮಾತ್ರ ಪೂರ್ಣವಾಗುತ್ತದೆ ಎಂದು ಒಬ್ಬ ಯುವಕ ನಂಬಿರುತ್ತಾನೆ. ಆದರೆ ಮದುವೆಯ ಕೆಲವು ವರ್ಷಗಳ ಬಳಿಕ ಮಕ್ಕಳನ್ನು ಹೊಂದುವ ಯಾವುದೇ ವಿಧಾನ ಫಲ ನೀಡದಾಗ ತಲ್ಲಣಗೊಂಡ ವ್ಯಕ್ತಿ ಅಸಾಂಪ್ರದಾಯಿಕ ವಿಧಾನ ಪರಿಶೀಲಿಸಲು ಹೊರಡುತ್ತಾನೆ. ತನ್ನ ಸುತ್ತಲಿನ ಪ್ರತಿಯೊಬ್ಬರ ಜೀವನವನ್ನೂ ಯಾವ ರೀತಿ ಅಪಾಯಕ್ಕೆ ಸಿಲುಕಿಸುತ್ತಾನೆ ಎಂಬುದನ್ನು ಆಧಾರವಾಗಿಸಿ ಸಿನೆಮಾ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕಿ ಜ್ಯೋತ್ಸ್ನಾ ಕೆ. ರಾಜ್.
“ಜ್ಯೋತ್ಸ್ನಾ ಕೆ.ರಾಜ್ ಅವರು ಸಂಕಲನ ಕಾರ ಹಾಗೂ ಧ್ವನಿ ವಿನ್ಯಾಸಕಿ ಯಾಗಿದ್ದು, ಕೇರಳದ ಕುಂಬಳೆಯವರು. 2018ರಲ್ಲಿ ನಾಟಕ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದ್ದರು. ಸಿನೆಮಾ ಕುರಿತಾದ ವಿಶೇಷ ಅನುಭವ ಪಡೆದಿದ್ದಾರೆ.
ರಾಜ್ ಕಾರ್ತಿಕ್ ಅವರು “ಸಾಂಕೇತ್’ನ ಸಿನೆಮಾಟೊಗ್ರಫಿ ನಡೆಸಿದ್ದಾರೆ. ಪ್ರಕಾಶ್ ವಿ.ರಾವ್ ಸಾಹಿತ್ಯ ಬರೆದಿದ್ದು, ವಿವಿಧ ಯುವ ತಂಡವೇ ಸಿನೆಮಾ ಮಾಡಿದ್ದೇವೆ. ಪ್ರೇಕ್ಷಕರ ಸ್ಪಂದನೆ ಖುಷಿ ನೀಡಿದೆ’ ಎನ್ನುತ್ತಾರೆ ನಟಿ ಚೈತ್ರಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.