ಚಂದನವನದಲ್ಲಿ ತಾರೆಯರ ಸಂಕ್ರಾಂತಿ ಸಂಭ್ರಮ
Team Udayavani, Jan 14, 2021, 11:03 AM IST
ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮಕ್ಕೆ ಜನಮನ ಸಿದ್ಧವಾಗಿದೆ. ಕೋವಿಡ್ ಆತಂಕದ ಛಾಯೆ ನಿಧಾನವಾಗಿ ಕರಗುತ್ತ, ಹೊಸಭರವಸೆಯ ಆಶಯದೊಂದಿಗೆ ಸಂಕ್ರಾಂತಿ ಎದುರಾಗುತ್ತಿದೆ. ಇನ್ನು ಸಂಕ್ರಾಂತಿಯ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಮಂದಿ ಕೂಡ ಹೊಸ ಜೋಶ್‌ನಲ್ಲಿ ಸಿದ್ಧವಾಗಿದ್ದಾರೆ. ಹಾಗಾದ್ರೆ ಯಾವ್ಯಾವ ತಾರೆಯರ ಈ ಬಾರಿ ಸಂಕ್ರಾಂತಿಗೆ ಏನೆಲ್ಲ ಪ್ಲಾನ್ ಮಾಡಿಕೊಂಡಿದ್ದಾರೆ, ಹಬ್ಬದ ಸಂಭ್ರಮ ಹೇಗಿರುತ್ತದೆ ಅನ್ನೋದನ್ನ ಓದುಗರ ಮುಂದೆ ಹಂಚಿಕೊಂಡಿದ್ದಾರೆ.
ಸಂಕ್ರಾಂತಿ ಅಂದ್ರೆ ಚಿಕ್ಕವಯಸ್ಸಿನಲ್ಲಿ ಹೊಸಬಟ್ಟೆ ತೊಟ್ಟು, ಕೈ ತುಂಬ ಬಳೆ ಹಾಕಿಕೊಂಡು, ದೊಡ್ಡದಾಗಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಟ್ರೆಡಿಷನಲ್ ಆಗಿ ಹಬ್ಬವನ್ನು ಆಚರಿಸುತ್ತಿದ್ದ ದಿನಗಳು ನೆನಪಿಗೆ ಬರುತ್ತದೆ. ಫ್ರೆಂಡ್ಸ್ ಜೊತೆ
ಸೇರಿಕೊಂಡು ಎಲ್ಲರ ಮನೆಗೂ ಹೋಗಿ ಎಳ್ಳು-ಬೆಲ್ಲ, ಸಿಹಿ ತಿಂಡಿ ತಿಂದು ಬರುತ್ತಿದ್ದೆವು, ಕಳೆದ ಎರಡು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಂದ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿರಲಿಲ್ಲ. ಆದ್ರೆ ಈ ವರ್ಷ ಸಂಕ್ರಾಂತಿಯನ್ನ ಹೊಸ ಜೋಶ್‌ನಲ್ಲಿ ಫ್ಯಾಮಿಲಿ ಜೊತೆಗೇ ಆಚರಣೆ ಮಾಡುವ ಪ್ಲಾನ್ ಮಾಡಿಕೊಂಡಿದ್ದೇನೆ .
– ಹರ್ಷಿಕಾ ಪೂರ್ಣಚ್ಚ, ನಟಿ
ಚಿಕ್ಕವಯಸ್ಸಿ ನಿಂದಲೂ ಸಂಕ್ರಾಂತಿ ಅಂದ್ರೆ ನನಗೆ ತುಂಬ ಇಷ್ಟವಾದ ಹಬ್ಬ. ಎಲ್ಲ ರಿಲೇಟಿವ್ಸ್, ಫ್ರೆಂಡ್ಸ್ ಮನೆಗೆ ಹೋಗಿ ಎಳ್ಳು-ಬೆಲ್ಲ ಹಂಚಿ ಬರುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಎಳ್ಳು-ಬೆಲ್ಲವನ್ನ ಚಿಕ್ಕ ಬಾಕ್ಸ್‌ನಲ್ಲಿ ಹಾಕಿಕೊಂಡು ಹಬ್ಬ ಮುಗಿದ ಮೇಲೂತಿನ್ನುತ್ತಿದ್ದ ನೆನಪು ಕಣ್ಮುಂದೆ ಬರುತ್ತದೆ. ಹಬ್ಬದ ದಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗುವುದು, ಪೂಜೆ
ಮಾಡಿಸುವುದು, ಹಬ್ಬದ ಊಟ ಮಾಡುವುದು ಪ್ರತಿವರ್ಷ ನಡೆದು ಕೊಂಡು ಬರುತ್ತಿರುವ ನಮ್ಮ ಹಬ್ಬದ ಆಚರಣೆ. ಆದ್ರೆ ಈ ವರ್ಷ ಕೋವಿಡ್ ಭಯ ಇನ್ನೂ ಇರುವುದರಿಂದ, ಪ್ರತಿವರ್ಷದಷ್ಟು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿಲ್ಲ. ಆದಷ್ಟೂ ಮನೆಮಂದಿಯ ಜೊತೆ ಸೇರಿಕೊಂಡು ಸರಳವಾಗಿ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ.
– ಸೋನು ಗೌಡ, ನಟಿ
ಸಾಮಾನ್ಯವಾಗಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಸಾಗರದ ಹತ್ತಿರವಿರುವ ನಮ್ಮ ಊರಿನಲ್ಲೇ ಆಚರಿಸಿಕೊಂಡು ಬರುತ್ತಿದ್ದೇನೆ. ಹಬ್ಬಕ್ಕಾಗಿ ಅಮ್ಮನ ಜೊತೆ ಅಜ್ಜಿ ಮನೆಗೆ ಹೋಗುತ್ತಿದ್ದೆ. ಹಬ್ಬಕ್ಕೂ ಮೊದಲೇ ಊರಿಗೆ ಹೋಗಿ ಅಲ್ಲೊಂದಷ್ಟು ದಿನ ಇದ್ದು,
ಹಬ್ಬದ ತಯಾರಿ ಮಾಡಿಕೊಂಡು, ಹಬ್ಬವನ್ನು ಆಚರಿಸುವ ಖುಷಿಯೇ ಬೇರೆ.
ದೇವಸ್ಥಾನಕ್ಕೆ ಹೋಗುವುದು, ಮನೆಯವರ ಜೊತೆಗೆ ಸೇರಿ ಹಬ್ಬದ ಅಡುಗೆ ಮಾಡಿ ಊಟ ಮಾಡುವುದು, ಒಂದಷ್ಟು ಹರಟೆ-ತರಲೆ, ತುಂಟಾದ ಎಲ್ಲ ಹಬ್ಬದ ಸಂಭ್ರದಲ್ಲಿರುತ್ತಿತ್ತು. ಊರಿಗೆ ಹೋಗಿ ಹಬ್ಬ ಮಾಡಿದ್ರೇನೆ, ಮನಸ್ಸಿಗೆ ಏನೋ ಒಂಥರಾ ತೃಪ್ತಿ. ಆದ್ರೆ ಕಾರಣಾಂತರಗಳಿಂದ ಈ ಬಾರಿ ಊರಿಗೆ ಹೋಗಲಾಗುತ್ತಿಲ್ಲ. ಹಾಗಾಗಿ ಬೆಂಗಳೂರಿನಲ್ಲೇ, ಸಂಕ್ರಾಂತಿ ಆಚರಿಸಲು ಪ್ಲಾನ್ ಮಾಡಿಕೊಂಡಿದ್ದೇನೆ. ಹಬ್ಬಕ್ಕೆ ಎಲ್ಲ ತಯಾರಿ ಮಾಡಿ ಕೊಂಡಿದ್ದರೂ, ಊರಿಗೆ ಹೋಗಿ ಹಬ್ಬ ಮಾಡುತ್ತಿಲ್ಲವಲ್ಲ ಎಂಬ ಸಣ್ಣ
ಬೇಸರ ವಂತೂ ಇದ್ದೇ ಇದೆ.
– ಕೃತ್ತಿಕಾ ರವೀಂದ್ರ, ನಟಿ
ಸಂಕ್ರಾಂತಿ ಅಂದ್ರೇನೆ ಅದು ಹೆಣ್ಣು ಮಕ್ಕಳ ಹಬ್ಬ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಸಂಕ್ರಾಂತಿ ಹಬ್ಬವನ್ನು ಸಾಂಪ್ರದಾಯಿಕವಾಗಿಯೇ ಆಚರಿಸಿಕೊಂಡು ಬರುತ್ತಿದ್ದೇವೆ. ಮನೆಯವರ ಜೊತೆ ಹಬ್ಬ ಮಾಡೋದು, ಎಳ್ಳು-ಬೆಲ್ಲ ಬೀರೋದು,
ಇಡೀ ದಿನ ಫ್ಯಾಮಿಲಿ ಜೊತೆ ಸಮಯ ಕಳೆಯೋದು ನನಗೆ ಇಷ್ಟ. ಈ ಬಾರಿಯೂ ಮನೆಮಂದಿಯ ಜೊತೆಗೆ ಸಂಕ್ರಾಂತಿ ಆಚರಣೆ
ಮಾಡುತ್ತಿದ್ದೇನೆ. ಕಳೆದ ಸಂಕ್ರಾಂತಿಗಿಂತ ಈ ಬಾರಿ ಸಂಕ್ರಾಂತಿ ವೈಯಕ್ತಿಕವಾಗಿ ನನಗಂತೂ ತುಂಬಾ ಸ್ಪೆಷಲ್ ಆಗಿದೆ. ಕೋವಿಡ್ ಭಯ ದೂರ ವಾಗಿ, ಈ ಬಾರಿ ಸಂಕ್ರಾಂತಿ ಎಲ್ಲರಿಗೂ ಒಳ್ಳೆಯದು ಮಾಡಲಿ
– ಖುಷಿ, ನಟಿ
ಮೊದಲಿನಿಂದಲೂ ಬಹುತೇಕ ಎಲ್ಲ ಹಬ್ಬಗಳನ್ನು ನಮ್ಮ ಮನೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಪದ್ದತಿ ಇದೆ. ಹಾಗೇ, ಸಂಕ್ರಾಂತಿಯನ್ನು ಕೂಡ ಸಾಂಪ್ರದಾ ಯಿಕವಾಗಿಯೇ ಆಚರಿಸುತ್ತೇವೆ. ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಆದಷ್ಟು ಸಮಯ ಫ್ಯಾಮಿಲಿ ಜೊತೆಗೆ ಕಳೆಯುತ್ತೇನೆ. ಇನ್ನು ದೇವಸ್ಥಾನಕ್ಕೆ ಹೋಗೋದು, ಫ್ರೆಂಡ್ಸ್ – ರಿಲೇಟಿವ್ಸ್ ಮನೆಗೆ ಹೋಗೋದು, ಎಳ್ಳು-ಬೆಲ್ಲ, ಸಿಹಿ ಹಂಚಿ ಸಂಭ್ರಮಿಸುವುದು ಇದ್ದೇ ಇರುತ್ತದೆ. ಆದ್ರೆ ಈ ಬಾರಿ ಕೋವಿಡ್ ಹೆದರಿಕೆ ಇನ್ನೂ ಕಡಿಮೆಯಾಗದಿರುವುದರಿಂದ, ಸರಳವಾಗಿ ಮನೆಯಲ್ಲೇ ಫ್ಯಾಮಿಲಿ ಜೊತೆ ಹಬ್ಬವನ್ನು ಆಚರಿಸಲು ಯೋಚನೆ ಮಾಡಿದ್ದೇನೆ.
ಎಲ್ಲರೂ ಮನೆಯಲ್ಲಿ ಇದ್ದು ಸಂಕ್ರಾಂತಿ ಆಚರಿಸಿ.
– ಶ್ರೀಲೀಲಾ, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.