![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 20, 2020, 6:30 AM IST
ಬೆಂಗಳೂರು: ಆಲೂಗಡ್ಡೆ, ಗೆಣಸು, ಟೊಮೊಟೊ ಹಾಗೂ ಉಪ್ಪು, ಖಾರ ಸಹಿತವಾದ ನಾನಾ ಬಗೆಯ ಚಿಪ್ಸ್‌ಗಳನ್ನು ನೋಡಿರಬಹುದು, ತಿಂದಿರಲೂ ಬಹುದು. ಇದೇ ಮಾದರಿಯಲ್ಲಿ ಮೀನಿನ ಚಿಪ್ಸ್ (ಫಿಶ್ ವೇಪರ್ಸ್) ಇನ್ನೊಂದು ವಾರದೊಳಗೆ ಮಾರುಕಟ್ಟೆಗೆ ಬರಲಿದೆ.
ತಾಜಾ ಮೀನು ಮತ್ತು ಒಣ ಮೀನಿನ ಜತೆಗೆ ಮೀನಿನ ಉಪ್ಪಿನಕಾಯಿ, ಮೀನಿನ ಚಟ್ನಿ, ಮೀನು ಮಸಾಲ ಇತ್ಯಾದಿ ಉತ್ಪನ್ನ ಗಳು ಮಾರು ಕಟ್ಟೆಯಲ್ಲಿ ಮೊದಲಿ ನಿಂದಲೂ ಸಿಗುತ್ತಿವೆ. ಆದರೆ ಚಿಪ್ಸ್ ಅಥವಾ ಕುರ್‌ಕುರೆ ಮಾದರಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿರಲಿಲ್ಲ. ಈಗ ಆ ಕೊರತೆ ನೀಗಿದಂತಾಗಿದೆ. ರುಚಿಯಾದ, ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಮೀನಿನ ವಾಸನೆ ರಹಿತ ಚಿಪ್ಸ್‌ಗಳು ಮಳಿಗೆಗಳಲ್ಲಿ ಲಭಿಸಲಿವೆ.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್ಡಿಸಿ)ವು ಮತ್ಸ éಬಂಧನ ಸಂಸ್ಥೆಯ ಜತೆ ಸೇರಿಕೊಂಡು ಚಿಪ್ಸ್‌ಗಳನ್ನು ಸಿದ್ಧಪಡಿಸಿ, ಮಾರುಕಟ್ಟೆಗೆ ಪೂರೈಸುವ ಮೂಲಕ ಮೀನಿನ ಮೌಲ್ಯ ವರ್ಧನೆಗೆ ಮುಂದಾಗಿದೆ.
ಆಳಸಮುದ್ರ ಮೀನುಗಾರಿಕೆಯಲ್ಲಿ ಹೆಚ್ಚಾಗಿ ಸಿಗುವ ರಾಣಿ ಮೀನು (ಮದಿಮಾಲ್) ಹಾಗೂ ನಾಡದೋಣಿ ಮತ್ತು ನಿತ್ಯದ ಮೀನುಗಾರಿಕೆಯಲ್ಲಿ ಹೆಚ್ಚಾಗಿ ಸಿಗುವ ಬೂತಾಯಿ (ಮತ್ತಿ)ಯನ್ನು ಬಳಸಲಾಗುತ್ತದೆ.
ಬೇರೆ ಚಿಪ್ಸ್‌ಗಳಿಗಿಂತ ಭಿನ್ನ ಹೇಗೆ?
ಇದರಲ್ಲಿ ಅತೀ ಹೆಚ್ಚಿನ ಪೌಷ್ಟಿಕಾಂಶಗಳು ಇವೆ. ಮೀನಿನ ಫ್ಯಾಟ್ ಅಂಶ ಗಳನ್ನು ತೆಗೆದು, ಅದರಲ್ಲಿರುವ ನೈಜ ಪೌಷ್ಟಿಕಾಂಶಗಳನ್ನು ಕಾಯ್ದು ಕೊಂಡು ಚಿಪ್ಸ್ ಸಿದ್ಧ ಪಡಿಸ ಲಾಗುತ್ತದೆ. ಒಮೆಗಾ-3 ಕೊಬ್ಬು, ವಿಟಮಿನ್ ಡಿ ಮತ್ತು ಬಿ2 ಕೂಡ ಇರಲಿದೆ. ಸಾಮಾನ್ಯ ಚಿಪ್ಸ್ ಗಳಂತೆ ಇದು ಜಂಕ್ ಫುಡ್ ಆಗಿರುವುದಿಲ್ಲ. ಇದೊಂದು ಪೌಷ್ಟಿಕಾಂಶಯುಕ್ತ ಆಹಾರವಾಗಿರಲಿದೆ ಎಂದು “ಮತ್ಸ್ಯಬಂಧನ’ ಸಂಸ್ಥೆಯ ನಿರ್ದೇಶಕ ಅರುಣ್ ಧನಪಾಲ್ ಮಾಹಿತಿ ನೀಡಿದರು.
ಚಿಪ್ಸ್‌ನಲ್ಲಿ ಮೀನಿನ ವಾಸನೆ ಸ್ವಲ್ಪವೂ ಇರುವುದಿಲ್ಲ. ಬದಲಾಗಿ ಪಾಲಕ್, ಕ್ಯಾರೆಟ್, ಟೊಮೊಟೊ, ಮೆಣಸಿನ ಕಾಯಿ ಮಸಾಲ ಮೊದಲಾದ ಪ್ಲೇವರ್‌ಗಳಲ್ಲಿ ಲಭ್ಯವಾಗಲಿದೆ. ಕೆಎಫ್ಡಿಸಿಯ ಎಲ್ಲ ಮಳಿಗೆಗಳಲ್ಲೂ, ಮತ್ಸ é ದರ್ಶಿನಿಗಳಲ್ಲಿ ಚಿಪ್ಸ್‌ಗಳು ಲಭ್ಯವಿರುತ್ತವೆ. ಮುಂದಿನ ಒಂದು ವಾರ ದಲ್ಲಿ ಬಗೆ ಬಗೆಯ ಮೀನಿನ ಚಿಪ್ಸ್ ಮಾರು ಕಟ್ಟೆಗೆ ಬರಲಿದೆ. ಪ್ಯಾಕ್ ದರ 30 ರೂ. ನಿಗದಿ ಪಡಿಸಲಾಗಿದೆ ಎಂದು ಕೆಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮಣಿ ಮಾಹಿತಿ ನೀಡಿದರು.
ಇದು ಸಂಪೂರ್ಣ ಸ್ವದೇಶಿ ಉತ್ಪನ್ನ. ಹೊಸ ರುಚಿಯ ಜತೆಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದೆ. ಮೀನಿನ ಚಿಪ್ಸ್ ಕೆಎಫ್ಡಿಸಿ ಮಳಿಗೆ ಗಳಲ್ಲಿ ಸಿಗಲಿದೆ. ಜತೆಗೆ ಇಲ್ಲಿ ಮೀನಿನ ಮಸಾಲಗಳನ್ನೂ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ.
– ಕೋಟ ಶ್ರೀನಿವಾಸ ಪೂಜಾರಿ
ಮೀನುಗಾರಿಕೆ ಸಚಿವ
You seem to have an Ad Blocker on.
To continue reading, please turn it off or whitelist Udayavani.