ಸೋಲಿಸುತ್ತೇವೆ ಎಂದು ಮನೆಯಲ್ಲಿ ಕುಳಿತರೆ ಆಗಲ್ಲ: ಸತೀಶ ಜಾರಕಿಹೊಳಿ
Team Udayavani, Jun 19, 2020, 7:46 PM IST
ಬೆಳಗಾವಿ: ಚುನಾವಣೆಗೆ ಸ್ಪರ್ಧಿಸುವವರು ಗೆಲ್ಲುತ್ತೇವೆ ಎಂದು ನಿಲ್ಲುತ್ತಾರೆ. ರಾಜಕೀಯದಲ್ಲಿ ಯಾರೇ ಸವಾಲು ಹಾಕಿದರೂ ಅದನ್ನು ಸ್ವೀಕರಿಸಬೇಕಾಗುತ್ತದೆ. ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ ಅವರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸೋಲಿಸುತ್ತೇವೆಂದು ಒಪ್ಪಿಕೊಂಡು ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಚಿವ ರಮೇಶ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ರಾಜಕೀಯ ಬದಲಾವಣೆ ಆಗಲಿದೆ. ರಮೇಶ ಜಾರಕಿಹೊಳಿ ಅವರ ಪಕ್ಷದಲ್ಲಿ ಒಬ್ಬರೇ ನಾಯಕರಿಲ್ಲ. ಹಲವು ಮುಖಂಡರು ಆ ಪಕ್ಷದಲ್ಲಿ ಇದ್ದಾರೆ. ಅವರು ಈ ಬಗ್ಗೆ ತೀರ್ಮಾನಿಸುತ್ತಾರೆ. ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಕಾರಣ ಎನ್ನುವ ಎಚ್. ವಿಶ್ವನಾಥ ಹೇಳಿಕೆ ಸರಿಯಲ್ಲ. ನಮಗೂ ಬಿಜೆಪಿಗೂ ಸಂಬಂಧವಿಲ್ಲ. ನಮ್ಮ ಮಾತು ಕೇಳಿ ಅವರು ಟಿಕೆಟ್ ಕೊಡಲ್ಲ. ಪರಿಷತ್ ಟಿಕೆಟ್ ನೀಡುವುದು, ಬಿಡುವುದು ಬಿಜೆಪಿ ಆಂತರಿಕ ವಿಚಾರ. ಸಚಿವ ರಮೇಶ ಜಾರಕಿಹೊಳಿ ಬೆಂಗಳೂರಿನಲ್ಲಿ ಮನೆ ನಿರ್ಮಿಸಿದ್ದಾರೆ. ಅದರ ಪೂಜಾ ಕಾರ್ಯಕ್ರಮಕ್ಕೆ ಲಖನ್ ಅವರನ್ನು ಆಹ್ವಾನಿಸಿದ್ದಾರೆ. ಇದರಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ನನಗೂ ಆಹ್ವಾನ ನೀಡಿದ್ದರು. ಇದರಲ್ಲಿ ರಾಜಕೀಯವಿಲ್ಲ. ಗೋಕಾಕದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.