ತೈಲ ಡಿಪೋ ಮೇಲೆ ಹೌತಿಗಳ ದಾಳಿ : ಭಾರಿ ವಾಯು ದಾಳಿ ನಡೆಸಿದ ಸೌದಿ ಒಕ್ಕೂಟ

ಪ್ರಾದೇಶಿಕ ಯುದ್ಧವಾಗಿ ಮಾರ್ಪಟ್ಟ ಸಂಘರ್ಷ

Team Udayavani, Mar 26, 2022, 6:31 PM IST

1-sadsad

ಸನಾ: ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟವು ಯೆಮೆನ್‌ನ ರಾಜಧಾನಿ ಮತ್ತು ಆಯಕಟ್ಟಿನ ನಗರದ ಮೇಲೆ ಭಾರಿ ವಾಯುದಾಳಿ ಗೈದಿದ್ದು,ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಹೌತಿ ಬಂಡುಕೋರರು ಸೌದಿ ನಗರದ ಜೆಡ್ಡಾದಲ್ಲಿನ ತೈಲ ಡಿಪೋ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಸನಾ ಮತ್ತು ಹೊಡೆಯ್ಡಾ ಮೇಲೆ ರಾತ್ರಿ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ.

ಶನಿವಾರ ಸ್ಫೋಟಕಗಳನ್ನು ತುಂಬಿದ ಎರಡು ಡ್ರೋನ್‌ಗಳನ್ನು ಒಕ್ಕೂಟದ ಸೇನಾಪಡೆಗಳು ತಡೆಹಿಡಿದು ನಾಶಪಡಿಸಿತು ಎಂದು ಸೌದಿ ನೇತೃತ್ವದ ಬ್ರಿಗೇಡ್ ವಕ್ತಾರ ಜನರಲ್ ತುರ್ಕಿ ಅಲ್-ಮಲ್ಕಿ, ಹೇಳಿದ್ದಾರೆ. ಹೊಡೆಯ್ಡಾದಲ್ಲಿ ಹೌತಿ ಹಿಡಿತದಲ್ಲಿರುವ ನಾಗರಿಕ ತೈಲ ಘಟಕಗಳಿಂದ ಡ್ರೋನ್‌ಗಳನ್ನು ಹಾರಿಸಲಾಗಿದ್ದು, ನಗರದಲ್ಲಿನ ತೈಲ ಘಟಕಗಳಿಂದ ನಾಗರಿಕರು ದೂರವಿರಲು ಒತ್ತಾಯಿಸಿದ್ದಾರೆ.

ಭಾನುವಾರದಂದು ನಡೆಯುವ ಫಾರ್ಮುಲಾ ಒನ್ ರೇಸ್‌ಗಿಂತ ಮುಂಚಿತವಾಗಿ ಹೌತಿಗಳು ಶುಕ್ರವಾರ ದಾಳಿ ನಡೆಸಿದ್ದು,ಇರಾನ್ ಬೆಂಬಲಿತ ಬಂಡುಕೋರರ ವಿರುದ್ಧ ಸೌದಿ ಅರೇಬಿಯಾದ ಸಾಮರ್ಥ್ಯ ತೋರಿದ್ದು, ಪ್ರತಿ ದಾಳಿ ನಡೆಸಿ ಫಾರ್ಮುಲಾ ಒನ್ ರೇಸ್‌ ನಿಗದಿಯಂತೆ ನಡೆಯಲಿದೆ ಎಂದು ಹೇಳಿದೆ.

ತೈಲ ದೈತ್ಯ ಸೌದಿಯ ಜೆಡ್ಡಾದಲ್ಲಿರುವ ಅರಾಮ್ಕೊದ ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಕೇಂದ್ರಕ್ಕೆ ಹೌತಿಗಳು ದಾಳಿ ನಡೆಸಿದ ನಂತರ ಎರಡು ಶೇಖರಣಾ ಟ್ಯಾಂಕ್‌ಗಳಲ್ಲಿ ಭಾರಿ ಬೆಂಕಿ ಮತ್ತು ಕಪ್ಪು ಹೊಗೆ ಕಂಡು ಬಂದಿದೆ.

ಆನ್‌ಲೈನ್‌ನಲ್ಲಿ ಪ್ರಸಾರವಾದ ದೃಶ್ಯಾವಳಿಗಳಲ್ಲಿ ಸನಾ ಮತ್ತು ಹೊಡೆಡಾದಲ್ಲಿ ಭಾರಿ ಬೆಂಕಿ ಮತ್ತು ಹೊಗೆ ಕಂಡು ಬಂದಿದ್ದು, ಯೆಮೆನ್ ರಾಜಧಾನಿಯಲ್ಲಿ ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ದೊಡ್ಡ ಸ್ಫೋಟಗಳನ್ನು ಕೇಳಿಸಿದ್ದು, ಅಲ್ಲಿನ ವಸತಿ ಕಟ್ಟಡಗಳು ಜರ್ಜರಿತಗೊಂಡಿವೆ ಎಂದು ವರದಿ ಮಾಡಿದ್ದಾರೆ.

ಒಕ್ಕೂಟದ ವೈಮಾನಿಕ ದಾಳಿಯು ವಿದ್ಯುತ್ ಸ್ಥಾವರ, ಇಂಧನ ಪೂರೈಕೆ ಕೇಂದ್ರ ಮತ್ತು ರಾಜಧಾನಿಯಲ್ಲಿನ ಸರ್ಕಾರಿ ಸಾಮಾಜಿಕ ವಿಮಾ ಕಚೇರಿಯನ್ನು ಹಾನಿ ಮಾಡಿದೆ. ಮಕ್ಕಳು ಮತ್ತು ಮಹಿಳೆಯರು ಸೇರಿ ಎಂಟು ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ಹೇಳಿದ್ದಾರೆ.

2014 ರಲ್ಲಿ ಹೌತಿಗಳು ಸನಾವನ್ನು ವಶಪಡಿಸಿಕೊಂಡ ನಂತರ ಯೆಮೆನ್‌ನಲ್ಲಿ ಯುದ್ಧವು ಸ್ಫೋಟಗೊಂಡಿತ್ತು. ತಿಂಗಳುಗಳ ನಂತರ, ಸೌದಿ ಅರೇಬಿಯಾ ಮತ್ತು ಅದರ ಮಿತ್ರರಾಷ್ಟ್ರಗಳು ಹೌತಿಗಳನ್ನು ಹೊರಹಾಕಲು ಮತ್ತು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಕಾರವನ್ನು ಪುನಃಸ್ಥಾಪಿಸಲು ವಾಯು ದಾಳಿಯನ್ನು ಪ್ರಾರಂಭಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಈ ಸಂಘರ್ಷವು ಪ್ರಾದೇಶಿಕ ಯುದ್ಧವಾಗಿ ಮಾರ್ಪಟ್ಟಿದೆ.

ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾದ ಈ ಯುದ್ಧ 14,500 ನಾಗರಿಕರು ಸೇರಿ 150,000 ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Musk changes Twitter profile to ‘Pepe the Frog’ meme

Pepe the Frog: ಟ್ವೀಟರ್‌ ಪ್ರೊಫೈಲ್‌ ಅನ್ನು “ಪೆಪೆ ದಿ ಫ್ರಾಗ್‌’ ಮೀಮ್‌ಗೆ ಬದಲಿಸಿದ ಮಸ್ಕ್

Indian Workers: ಇಸ್ರೇಲ್‌ ನಲ್ಲಿ ಭಾರತೀಯ ಕಟ್ಟಡ ಕಾರ್ಮಿಕರಿಗೆ ಬೇಡಿಕೆ

Indian Workers: ಇಸ್ರೇಲ್‌ ನಲ್ಲಿ ಭಾರತೀಯ ಕಟ್ಟಡ ಕಾರ್ಮಿಕರಿಗೆ ಬೇಡಿಕೆ

South Korea: ವಿಮಾನ ದುರಂತದಲ್ಲಿ ಬದುಕುಳಿದವನಿಗೆ ಮರೆವು!

South Korea: ವಿಮಾನ ದುರಂತದಲ್ಲಿ ಬದುಕುಳಿದವನಿಗೆ ಮರೆವು!

taliban

Taliban; ಅಫ್ಘಾನ್‌ ಮನೆಗಳಿಗಿನ್ನು ಕಿಟಕಿ ಇರಬಾರದು!

Bangladesh: ಅಲ್ಪಸಂಖ್ಯಾಕರ ರಕ್ಷಿಸಿ: ಡೊನಾಲ್ಡ್‌ ಟ್ರಂಪ್‌ಗೆ ಮನವಿ

Bangladesh: ಅಲ್ಪಸಂಖ್ಯಾಕರ ರಕ್ಷಿಸಿ: ಡೊನಾಲ್ಡ್‌ ಟ್ರಂಪ್‌ಗೆ ಮನವಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.