Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಅಲ್ ಜೌಫ್ ಪ್ರದೇಶಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿಯಲಿದೆ...
Team Udayavani, Jan 7, 2025, 1:40 PM IST
ಮೆಕ್ಕಾ(Mecca): ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರದ ಬಹುತೇಕ ಪ್ರದೇಶಗಳು ಭಾರೀ ಗಾಳಿ-ಮಳೆಗೆ ತತ್ತರಿಸಿ ಹೋಗಿರುವುದಾಗಿ ಸೌದಿ ಪ್ರೆಸ್ ಏಜೆನ್ಸಿ (Saudi Press Agency) ವರದಿ ಮಾಡಿದೆ.
ಪ್ರಮುಖ ನಗರಗಳಲ್ಲಿ ದಾಖಲೆಯ ಮಳೆ:
ಪರಿಸರ ಸಚಿವಾಲಯದ ಮಾಹಿತಿ ಪ್ರಕಾರ, ಬರ್ದ್ ಗವರ್ನರೇಟ್ ನ ಅಲ್ ಶಫಿಯಾದಲ್ಲಿ ದಾಖಲೆಯ 49.2 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ಅದೇ ರೀತಿ ಜೆಡ್ಡಾದ ಬಾಸ್ಟೀನ್ ನಲ್ಲಿ 38 ಮಿಲಿ ಮೀಟರ್ ಮಳೆಯಾಗಿತ್ತು. ಅಲ್ಲದೇ ಮದೀನಾದ ಪ್ರವಾದಿ ಮಸೀದಿಯ ಸೆಂಟ್ರಲ್ ಹರಮ್ ಪ್ರದೇಶದಲ್ಲಿ 36.1 ಮಿಲಿ ಮೀಟರ್ ಮಳೆಯಾಗಿದ್ದು, ಕಾಬಾ ಮಸೀದಿ ಸಮೀಪ 28.4 ಮಿಲಿ ಮೀಟರ್ ಮಳೆಯಾಗಿರುವುದಾಗಿ ವಿವರಿಸಿದೆ.
ಮುಂದುವರಿದ ಮಳೆ:
🚨 تنبية للمسافرين لتأخر بعض الرحلات الجوية بسبب الأحوال الجوية ..⛈#جده_الان #مكه_الان pic.twitter.com/saZiXsK3s9
— أخبار عاجلة .. (@newsnow7345) January 6, 2025
ಮೆಕ್ಕಾ, ಮದೀನಾ, ಕ್ವಾಸಿಂ, ಟಬುಕ್, ಉತ್ತರದ ಗಡಿ ಭಾಗಗಳು ಮತ್ತು ಅಲ್ ಜೌಫ್ ಪ್ರದೇಶಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಸಚಿವಾಲಯ ತಿಳಿಸಿದೆ. ಭಾರೀ ಗಾಳಿ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಳೆಯ ಸ್ಥಿತಿಗತಿ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಮಾನ ಪ್ರಯಾಣಿಕರಿಗೆ ಸಲಹೆ:
ಮಳೆಯಿಂದಾಗಿ ಜೆಡ್ಡಾದ ಕಿಂಗ್ ಅಬ್ದುಲಾಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ತಮ್ಮ ವಿಮಾನ ಸಂಚಾರದ ಅಪ್ ಡೇಟ್ಸ್ ಅನ್ನು ಪರಿಶೀಲಿಸುತ್ತಿರಲು ಸಲಹೆ ನೀಡಿದೆ.
مندوب هنقرستيشن والحمد لله على السلامه ..⛈#مكه_الان#جده_الان pic.twitter.com/yB9DlvYP9v
— أخبار عاجلة .. (@newsnow7345) January 6, 2025
ಸೌದಿ ಅರೇಬಿಯಾದ ಜೆಡ್ದಾ ಸೇರಿದಂತೆ ವಿವಿಧ ನಗರಗಳಲ್ಲಿ ಸುರಿದ ಧಾರಾಕಾರ ಮಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಬೈಕ್ ಅನ್ನು ಹಿಡಿದು ನಿಲ್ಲಿಸಲು ಯತ್ನಿಸುತ್ತಿರುವ ಘಟನೆ ವಿಡಿಯೊ ಒಂದರಲ್ಲಿ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.