ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನವನ್ನು ಪಾಕಿಸ್ಥಾನದ ನಕ್ಷೆಯಿಂದ ಕೈ ಬಿಟ್ಟ ಸೌದಿ ಅರೇಬಿಯಾ
Team Udayavani, Oct 28, 2020, 7:15 PM IST
ಮಣಿಪಾಲ: ಸೌದಿ ಅರೇಬಿಯಾ ಪಾಕಿಸ್ಥಾನಕ್ಕೆ ದೊಡ್ಡ ಹೊಡೆತ ನೀಡಿದೆ. ಮುಂದಿನ ತಿಂಗಳು ನಡೆಯಲಿರುವ ಜಿ 20 ಶೃಂಗಸಭೆಗೆ ಸೌದಿ ಸರಕಾರ ವಿಶೇಷ ನೋಟನ್ನು ಬಿಡುಗಡೆ ಮಾಡಿದೆ. ತನ್ನ ನೋಟಿನ ಹಿಂಭಾಗದಲ್ಲಿ ಜಿ -20 ದೇಶಗಳ ನಕ್ಷೆಗಳನ್ನು ಅದು ಮುದ್ರಿಸಿದೆ. ವಿಶೇಷವೆಂದರೆ ಅದು ಕಾಶ್ಮೀರ, ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನವನ್ನು ಪಾಕಿಸ್ಥಾನದ ಭಾಗವಾಗಿ ತೋರಿಸುವುದಿಲ್ಲ. ಅವುಗಳನ್ನು ಸ್ವತಂತ್ರ ದೇಶಗಳಾಗಿ ತೋರಿಸಲಾಗಿದೆ. ಈ ಬಗ್ಗೆ ಪಾಕಿಸ್ಥಾನ ಸರಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜಿ 20 ಶೃಂಗಸಭೆ 21 ಮತ್ತು 22ರಂದು ರಿಯಾದ್‌ನಲ್ಲಿ ನಡೆಯಲಿದೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ಸೌದಿ ಅರೇಬಿಯಾ ಸರಕಾರದ ಪರವಾಗಿ ರಾಜಕುಮಾರ ಸಲ್ಮಾನ್ ವಹಿಸಲಿದ್ದಾರೆ. ಈ ಸಂದರ್ಭದ ನೆನಪಿಗಾಗಿ ಅಕ್ಟೋಬರ್ 24ರಂದು ಸೌದಿ ಸರಕಾರ 20 ರಿಯಾಲ್‌ಗಳ ನೋಟು ಬಿಡುಗಡೆ ಮಾಡಿದೆ. ಇದರ ಮುಂಭಾಗದಲ್ಲಿ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರ ಫೋಟೋ ಮತ್ತು ಅವರ ಮಾತುಗಳಿವೆ. ಎರಡನೆಯದಾಗಿ ಹಿಂದಿನ ಭಾಗದಲ್ಲಿನ ಜಾಗತಿಕ ನಕ್ಷೆ ಇದೆ. ಇದರಲ್ಲಿ ಜಿ -20 ದೇಶಗಳನ್ನು ವಿವಿಧ ಬಣ್ಣಗಳಲ್ಲಿ ತೋರಿಸಲಾಗಿದೆ. ಕಾಶ್ಮೀರವನ್ನು ಹೊರತುಪಡಿಸಿ ಗಿಲಿYಟ್ ಮತ್ತು ಬಾಲ್ಟಿಸ್ಥಾನ್ ಅನ್ನು ಪಾಕಿಸ್ಥಾನದ ಭಾಗವೆಂದು ತೋರಿಸಲಾಗಿಲ್ಲ.
ಇದನ್ನೂ ಓದಿ :ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ
“ಯುರೇಷಿಯನ್ ಟೈಮ್ಸ್’ ಈ ನಿಟ್ಟಿನಲ್ಲಿ ವರದಿಯನ್ನು ಬಿಡುಗಡೆ ಮಾಡಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಖ್ಯಸ್ಥ ಯೋಸಿ ಕೊಹೆನ್, ಸೌದಿ ಅರೇಬಿಯಾ ಮತ್ತು ಉಳಿದ ಅರಬ್ ರಾಷ್ಟ್ರಗಳೊಂದಿಗೆ ಇಸ್ರೇಲ್‌ನ ರಾಜತಾಂತ್ರಿಕ ಸಂಬಂಧಗಳು ಅಮೆರಿಕ ಚುನಾವಣೆಯ ಬಳಿಕ ಬಲಿಷ್ಠವಾಗಲಿದೆ ಎಂದು ಸೂಚಿಸಿದೆ. ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಈಗಾಗಲೇ ತಮ್ಮ ದೇಶ ಇಸ್ರೇಲ್ ಜತೆ ಗುರುತಿಸಿಕೊಳ್ಳುವುದಿಲ್ಲ. ಮಾತ್ರವಲ್ಲದೇ ರಾಜತಾಂತ್ರಿಕ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ಥಾನ ವರದಿಯ ಪ್ರಕಾರ, ಪ್ಯಾಲೆಸೆôನ್ ಮತ್ತು ಕಾಶ್ಮೀರದ ಬಗ್ಗೆ ಪಾಕಿಸ್ಥಾನದ ನೀತಿ ಸರಿ ಸಮವಾಗಿದೆ. ಆದರೆ ಸೌದಿ ಅರೇಬಿಯಾ ಮತ್ತು ಇಸ್ರೇಲ್ ಭಾರತದೊಂದಿಗೆ ಬಹಳ ಉತ್ತಮವಾಗಿ ನಿಕಟ ಸಂಬಂಧವನ್ನು ಹೊಂದಿವೆ. ರಾಜಕುಮಾರ ಸಲ್ಮಾನ್ ವಿದೇಶಾಂಗ ನೀತಿಯನ್ನು ಬದಲಾಯಿಸಿದ್ದಾರೆ. ಅವರು ಈಗ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿ¨ªಾರೆ. ಪಾಕಿಸ್ಥಾನ ದಿವಾಳಿಯ ಅಂಚಿನಲ್ಲಿದ್ದಾಗ ಸಾಲವನ್ನು ತತ್‌ಕ್ಷಣ ಮರುಪಾವತಿಸುವಂತೆ ಸೌದಿ ಸರಕಾರ ಪಾಕಿಸ್ಥಾನಕ್ಕೆ ಸೂಚಿಸಿತ್ತು. ಕಾಶ್ಮೀರ ವಿಚಾರದಲ್ಲೂ ಸೌದಿ ಸರಕಾರ ಭಾರತದ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.