![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 19, 2022, 5:30 PM IST
ನವದೆಹಲಿ: 1989ರಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದ ತನಿಖೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಒಪ್ಪಿಕೊಳ್ಳಲು ತಾನು ಒಲವು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದ್ದು, ಅರ್ಜಿದಾರರು ಹೈಕೋರ್ಟ್‌ನಿಂದ ಪರಿಹಾರವನ್ನು ಪಡೆಯಬಹುದು ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಇತ್ತೀಚೆಗೆ ಇದೇ ರೀತಿಯ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತ್ತು, ಅರ್ಜಿದಾರರಿಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತ್ತು.
ಇದನ್ನೂ ಓದಿ:ಬಹುಕೋಟಿ ವಂಚನೆ: ಎರಡನೇ ಬಾರಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್ ಫರ್ನಾಂಡಿಸ್
“ನೀವು ಅರ್ಜಿಯನ್ನು ಹಿಂಪಡೆಯಲು ಬಯಸಿದರೆ, ಹಿಂತೆಗೆದುಕೊಳ್ಳಿ, ನಾವು ಎರಡು ಅರ್ಜಿಗಳ ನಡುವೆ ತಾರತಮ್ಯ ಮಾಡಲಾಗುವುದಿಲ್ಲ” ಎಂದು ” ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, ಕಾನೂನಿನಲ್ಲಿ ಲಭ್ಯವಿರುವ ಸೂಕ್ತ ಪರಿಹಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಮನವಿಯನ್ನು ಹಿಂತೆಗೆದುಕೊಂಡರು.
ವಾದದ ಸಮಯದಲ್ಲಿ, ಭಾಟಿಯಾ ಮನವಿಯು “ಅತ್ಯಂತ ಗಂಭೀರ ವಿಷಯ” ಕ್ಕೆ ಸಂಬಂಧಿಸಿದೆ ಎಂದು ಒತ್ತಾಯಿಸಿದರು. ಅರ್ಜಿ 1989 ರಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ನಿಂದ ಕ್ರೂರವಾಗಿ ಹತ್ಯೆಗೀಡಾದ ಟ್ಯಾಪ್ಲೂ ಎಂಬ ವ್ಯಕ್ತಿಯ ಪುತ್ರನಿಂದ ಸಲ್ಲಿಸಲಾಗಿದೆ.ಅಲ್ಲಿನ ವಾತಾವರಣವನ್ನು ಪರಿಗಣಿಸಿ. ನಾನು ಎದುರು ನೋಡುತ್ತಿರುವುದು ನ್ಯಾಯವೇ ಹೊರತು ಬೇರೇನೂ ಅಲ್ಲ” ಎಂದು ಭಾಟಿಯಾ ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.