ಆನ್‌ಲೈನ್ ಬೋಧನೆ ಆರಂಭಿಸಿದ ಶಾಲೆಗಳು
ಪೋಷಕರಿಗೆ ಕರೆ, ನಿಯಮಿತ ತರಗತಿಗಳಲ್ಲಿ ಭಾಗಿಯಾ ಗಲು ಮನವಿ
Team Udayavani, Jun 30, 2020, 6:30 AM IST
ಬೆಂಗಳೂರು: ಒಂದರಿಂದ 10ನೇ ತರಗತಿಯ ವರೆಗೆ ನಿಯಮಿತ ಆನ್‌ಲೈನ್ ತರಗತಿಗೆ ಸರಕಾರ ಅವಕಾಶ ಕಲ್ಪಿಸಿದ್ದರಿಂದ ರಾಜ್ಯದ ಬಹುತೇಕ ಶಿಕ್ಷಣ ಸಂಸ್ಥೆಗಳು ಸೋಮವಾರದಿಂದ ಆನ್‌ಲೈನ್ ಮತ್ತು ಆಫ್ ಲೈನ್ ತರಗತಿ ಆರಂಭಿಸಿವೆ.
ಪಾಲಕರು ಕೂಡ ಮಕ್ಕಳನ್ನು ಆನ್‌ಲೈನ್ ತರಗತಿಗೆ ಸಜ್ಜು ಗೊಳಿಸುತ್ತಿದ್ದಾರೆ. ಆನ್‌ಲೈನ್ ತರ ಗತಿಯಲ್ಲಿ ಭಾಗವಹಿಸಲು ಕಷ್ಟವಾಗುವ ವಿದ್ಯಾರ್ಥಿಗಳಿಗೆ ಆಫ್ಲೈನ್ ವೀಡಿಯೋ ಮತ್ತು ಯೂ ಟ್ಯೂಬ್ ಚಾನೆಲ್ ತರಗತಿ ಆರಂಭವಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ವಂಚಿತರಾಗಬಾರದು ಎಂಬುದಕ್ಕಾಗಿ ಟಿವಿ ಸಹಿತ ಸಮೂಹ ಮಾಧ್ಯಮ ಮೂಲಕ ಶಿಕ್ಷಣ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಬೇಕಾದ ಸಿದ್ಧತೆಯನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಣ ಚಾನೆಲ್ ಆರಂಭಿಸಲು ಈಗಾಗಲೇ
ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಆನ್‌ಲೈನ್ ಶಿಕ್ಷಣ ಹೇಗೆ ನೀಡಬೇಕು ಮತ್ತು ಅದಕ್ಕಿರುವ ಪರ್ಯಾಯ ಮಾರ್ಗಗಳು, ತಂತ್ರಜ್ಞಾನ ಉಪಯೋಗದೊಂದಿಗೆ ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿಯು ವರದಿ ನೀಡಲಿದೆ. ಇದನ್ನು ಆಧರಿಸಿ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ದೂರು ನೀಡಬಹುದು
ಆನ್‌ಲೈನ್ ಶಿಕ್ಷಣಕ್ಕಾಗಿ ಹೆಚ್ಚುವರಿ ಶುಲ್ಕ ಪಡೆಯಬಾರದು ಎಂದು ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಇಷ್ಟಾದರೂ ಕೆಲವು ಶಾಲಾಡಳಿತ ಮಂಡಳಿಗಳು ಹೆಚ್ಚುವರಿ ಶುಲ್ಕ ಪಾವತಿಸುವಂತೆ ಮೊಬೈಲ್ ಸಂದೇಶ ರವಾನಿಸುತ್ತಿವೆ ಎಂದು ಪಾಲಕರು ಆರೋಪಿಸಿದ್ದಾರೆ. ಶುಲ್ಕ ಹೆಚ್ಚುವರಿ ಯಾಗಿ ಪಡೆದಲ್ಲಿ ಹೆತ್ತವರು ಶಿಕ್ಷಣ ಇಲಾಖೆಗೆ ದೂರನ್ನು ನೀಡ ಬಹು ದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ತರಗತಿಗೆ ಸಂಬಂಧಿಸಿದಂತೆ ಸರಕಾರ ಈಗ ಹೊರಡಿ ಸಿರುವ ಆದೇಶವು ತಜ್ಞರ ಸಮಿತಿ ವರದಿ ನೀಡುವ ತನಕ ಇರಲಿದೆ. ಕೇಂದ್ರದ ಮಾರ್ಗಸೂಚಿಯಂತೆ ಈ ಆದೇಶ ಹೊರಡಿಸಲಾಗಿದೆ. ಸಮಿತಿ ವರದಿ ಬಂದ ಅನಂತರ ಸರಕಾರ ಈ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ.
– ಎಸ್. ಸುರೇಶ್ ಕುಮಾರ್,
ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.