ಸ್ಪೆಲಿಂಗ್ ಬೀ ಸ್ಪರ್ಧೆ : ಅಮೆರಿಕದಲ್ಲಿ ಮಿಂಚಿದ ಕುಂದಾಪುರದ ಅಕ್ಕ-ತಂಗಿ
ಸ್ಕ್ರಿಪ್ಸ್ ಸ್ಪೆಲ್ಲಿಂಗ್ ಬೀ ಫೈನಲ್ಸ್‌ಗೆ ಜೀಯಾ
Team Udayavani, Mar 27, 2021, 7:30 AM IST
ಸಿದ್ದಾಪುರ: ಅಮೆರಿಕದ ಕೊಲಂಬಿಯಾ ಮಿಸೋರಿಯನ್ ರೀಜನಲ್ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಬಾಳೆಬೇರು ಮನೆ ಮೂಲದ ಜೀಯಾ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದು, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ, ಪ್ರಾದೇಶಿಕ ಹಂತದ ಸ್ಪರ್ಧೆಯಲ್ಲಿ ಆಕೆಗೆ ಎದುರಾಳಿಯಾಗಿ ಇದ್ದದ್ದು ಸಹೋದರಿ ಅನ್ಯಾ ಶೆಟ್ಟಿ.
ಇವರಿಬ್ಬರು ಅಮೆರಿಕದಲ್ಲಿರುವ ಬಾಳೆಬೇರು ಮನೆಯ ಡಾ| ಪವನ್ ಕುಮಾರ್ ಶೆಟ್ಟಿ ಮತ್ತು ಚೈತ್ರಾ ಪಿ. ಶೆಟ್ಟಿ ದಂಪತಿಯ ಪುತ್ರಿಯರು. 14 ವರ್ಷದ ಜೀಯಾ ಶೆಟ್ಟಿ ಕಳೆದ ವರ್ಷವೂ ಈ ಸ್ಪರ್ಧೆಯಲ್ಲಿ ರೀಜನಲ್ ಚಾಂಪಿಯನ್ ಆಗಿದ್ದರು. ಆದರೆ ಕಳೆದ ವರ್ಷದ ಸ್ಪರ್ಧೆ ಕೋವಿಡ್ ಕಾರಣ ಮುಂದುವರಿದಿರಲಿಲ್ಲ. ಈ ಬಾರಿ ಆಕೆಯ ಸಹೋದರಿ, 10 ವರ್ಷದ ಅನ್ಯಾ ಶೆಟ್ಟಿ ಅಂತಿಮ ಸುತ್ತಿನಲ್ಲಿ ಅಕ್ಕನಿಗೆ ಸ್ಪರ್ಧಿಯಾಗಿದ್ದರು. ಕಳೆದ ವರ್ಷ ಅನ್ಯಾ ಕೂಡ ಸ್ಪರ್ಧಿಸಿದ್ದರೂ ಅಂತಿಮ ಹಂತದಲ್ಲಿ ವಿಫಲರಾಗಿದ್ದರು.
ನಾವು ವಯಸ್ಸಿನಲ್ಲಿ ಹೆಚ್ಚು ಅಂತರ ಹೊಂದಿಲ್ಲ. ಜತೆಗೆ ಅನೇಕ ಸಮಾನ ಆಸಕ್ತಿಗಳನ್ನು ಹೊಂದಿದ್ದೇವೆ. ಯಾರು ಉತ್ತಮ ಎನ್ನುವ ಸ್ಪರ್ಧೆ ನಮ್ಮೊಳಗೆ!
– ಅನ್ಯಾ ಶೆಟ್ಟಿ
ಓದಿನ ಮೂಲಕ ನಾನು ಅನೇಕ ಪದಗಳ ಸ್ಪೆಲ್ಲಿಂಗ್ ಪರಿಚಯಿಸಿಕೊಳ್ಳುತ್ತೇನೆ. ಜತೆಗೆ ಹೊಸ ಪದಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪರಿಚಯ ಮಾಡಿಕೊಳ್ಳುತ್ತೇನೆ.
– ಜೀಯಾ ಶೆಟ್ಟಿ
ಸ್ಪರ್ಧೆ ಅಕ್ಕ-ತಂಗಿಯ ನಡುವೆ ಅಲ್ಲ; ಇಬ್ಬರೂ ತಮ್ಮ ಎದುರಾಗಿ ತಾವೇ ಸ್ಪರ್ಧಿಸಿಕೊಳ್ಳುತ್ತಾರೆ.
– ಚೈತ್ರಾ ಶೆಟ್ಟಿ, ಜೀಯಾ-ಅನ್ಯಾ ಅವರ ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.