KKR ವಿರುದ್ಧ ಎರಡನೇ ಸುತ್ತಿನ ಪಂದ್ಯ: ಸೇಡಿಗೆ ಕಾದಿದೆ RCB !

Team Udayavani, Apr 26, 2023, 7:48 AM IST

RCB..

ಬೆಂಗಳೂರು: ತವರಲ್ಲೇ ಆಡಲಾದ ಕಳೆದ ಗ್ರೀನ್‌ ಜೆರ್ಸಿ ಮ್ಯಾಚ್‌ನಲ್ಲಿ ರಾಜಸ್ಥಾನವನ್ನು ಕೆಡ ವಿದ ಹುರುಪಿನಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಬುಧ ವಾರ “ಚಿನ್ನಸ್ವಾಮಿ ಸ್ಟೇಡಿಯಂ”ನಲ್ಲಿ ಮತ್ತೂಂದು ಮಹತ್ವದ ಪಂದ್ಯವನ್ನು ಆಡಲಿದೆ. ಬಲಾಡ್ಯವೆಂದು ಭಾವಿಸಲಾಗಿದ್ದ, ಆದರೀಗ ಸೋಲಿನ ಸುಳಿಗೆ ಸಿಲುಕಿ ಉಸಿರುಗಟ್ಟಿದ ಸ್ಥಿತಿಯಲ್ಲಿರುವ ಕೋಲ್ಕತಾ ನೈಟ್‌ರೈಡರ್ ವಿರುದ್ಧ ದ್ವಿತೀಯ ಸುತ್ತಿನ ಮುಖಾಮುಖಿಗೆ ಸಜ್ಜಾಗಿದೆ.

ಆರ್‌ಸಿಬಿ ಪಾಲಿಗೆ ಇದು ಸೇಡಿನ ಪಂದ್ಯ. ಎ. 6ರಂದು “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 81 ರನ್ನುಗಳಿಂದ ಬೆಂಗಳೂರು ತಂಡ ವನ್ನು ಮಗುಚಿತ್ತು. ಇದು ಪ್ರಸಕ್ತ ಋತುವಿನಲ್ಲಿ ಕೋಲ್ಕತಾಕ್ಕೆ ಒಲಿದ ಮೊದಲ ಜಯವೂ ಆಗಿತ್ತು. ಇದಕ್ಕೀಗ ಆರ್‌ಸಿಬಿ ಪ್ರತಿಕಾರ ತೀರಿಸಬೇಕಿದೆ.

ಉಳಿದವರಿಗೂ ಸಿಗಲಿ ಅವಕಾಶ
ಆರ್‌ಸಿಬಿ ಕೇವಲ ಇಬ್ಬರು, ತಪ್ಪಿದರೆ ಮೂವರು ಬ್ಯಾಟರ್‌ಗಳನ್ನು ನೆಚ್ಚಿಕೊಂಡಿರುವ ತಂಡ. ಡು ಪ್ಲೆಸಿಸ್‌, ಕೊಹ್ಲಿ, ಮ್ಯಾಕ್ಸ್‌ವೆಲ್‌ ಬಿಟ್ಟರೆ ಉಳಿದವರೆಲ್ಲ ಲೆಕ್ಕದ ಭರ್ತಿ ಗೆಂಬಂತೆ ಇದ್ದಾರೆ. ಅದರಲ್ಲೂ ರಾಜಸ್ಥಾನ್‌ ವಿರುದ್ಧ ಕೊಹ್ಲಿ ಸೊನ್ನೆ ಸುತ್ತಿ ಹೋಗಿದ್ದರು. ಡು ಪ್ಲೆಸಿಸ್‌- ಮ್ಯಾಕ್ಸ್‌ವೆಲ್‌ ಕ್ರೀಸ್‌ ಆಕ್ರಮಿಸಿಕೊಂಡು ಸ್ಫೋಟಿಸದೆ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಯೋಚಿಸಬೇಕಿದೆ. ಇದಕ್ಕೆ ಪಕ್ಕದಲ್ಲೇ ನಿದರ್ಶನವಿದೆ. ಕೆಕೆಆರ್‌ ವಿರುದ್ಧ 205 ರನ್‌ ಚೇಸಿಂಗ್‌ ವೇಳೆ ಆರ್‌ಸಿಬಿ 17.4 ಓವರ್‌ಗಳಲ್ಲಿ 123ಕ್ಕೆ ಮಗುಚಿತ್ತು. ಕೊಹ್ಲಿ 21, ಡು ಪ್ಲೆಸಿಸ್‌ 23, ಮ್ಯಾಕ್ಸ್‌ವೆಲ್‌ 5 ರನ್ನಿಗೆ ವಿಕೆಟ್‌ ಒಪ್ಪಿಸಿದ್ದರು.

ಕೆಕೆಆರ್‌ಗೆ ಸೋಲಿನೇಟು ನೀಡಬೇಕಾದರೆ ಈ ಮೂವರು ಸಿಡಿದು ನಿಲ್ಲಬೇಕಿದೆ. ಹಾಗೆಯೇ ತಂಡದ ಸಂಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಿಕೊÛಬೇಕಾದ ಅಗತ್ಯವೂ ಇದೆ. ವನಿಂದು ಹಸರಂಗ ಬದಲು ಮೈಕಲ್‌ ಬ್ರೇಸ್‌ವೆಲ್‌ ಸೇವೆ ಬೇಕಿದೆ. ಈ ಕಿವೀಸ್‌ ಸವ್ಯಸಾಚಿಯ ಫಿನಿಶಿಂಗ್‌ ರೋಲ್‌ ಗಮನಾರ್ಹ ಮಟ್ಟದಲ್ಲಿದೆ.

ಹಿಮಾಂಶು ಶರ್ಮ ಎಂಬ ಲೆಗ್‌ಸ್ಪಿನ್ನರ್‌ ಒಬ್ಬರಿದ್ದಾರೆ ಎಂಬುದು ತಂಡದ ಆಡಳಿತ ಮಂಡಳಿಗೆ ನೆನಪಾಗ ಬೇಕಿದೆ. ಸಿದ್ಧಾರ್ಥ್ ಕೌಲ್‌, ರಂಜನ್‌ ಕುಮಾರ್‌, ಮನೋಜ್‌ ಭಾಂಡಗೆ, ಅವಿನಾಶ್‌ ಸಿಂಗ್‌ ಅವರನ್ನು ರೊಟೇ ಶನ್‌ ಪ್ರಕಾರ ಆಡಿಸಲು ಇದು ಸೂಕ್ತ ಸಮಯ. ಮಹಿಪಾಲ್‌ ಲೊನ್ರೋರ್‌, ವಿಜಯ್‌ಕುಮಾರ್‌ ವೈಶಾಖ್‌ಗೆ ಕೊಟ್ಟ ಅವಕಾಶ ಸದ್ಯಕ್ಕೆ ಸಾಕು.
ಆಸೀಸ್‌ ವೇಗಿ ಜೋಶ್‌ ಹೇಝಲ್‌ವುಡ್‌ ಈ ಪಂದ್ಯದ ಮೂಲಕ 2023ರ ಐಪಿಎಲ್‌ಗೆ ರಂಗಪ್ರವೇಶ ಮಾಡುವ ಸಾಧ್ಯತೆ ಇದೆ. ಆಗ ಡೇವಿಡ್‌ ವಿಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಏನೇ ಆದರೂ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆ ಬಗೆಹರಿದೀತೇ ಎಂಬುದು ಪ್ರಶ್ನೆಯಾ ಗಿಯೇ ಉಳಿಯುತ್ತದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ್‌ 189 ರನ್‌ ಬೆನ್ನಟ್ಟಲಿಳಿದಾಗ ಆರ್‌ಸಿಬಿ ಬೌಲಿಂಗ್‌ ತಕ್ಕಮಟ್ಟಿಗೆ ನಿಯಂತ್ರಣ ಸಾಧಿಸಿತ್ತು. ಕೆಕೆಆರ್‌ ವಿರುದ್ಧ ಇದಕ್ಕೂ ಮೇಲ್ಮಟ್ಟದ ಪ್ರದರ್ಶನ ನೀಡಬೇಕಿದೆ.

ಸತತ 4 ಸೋಲು!
ಕೆಕೆಆರ್‌ ಸಾಕಷ್ಟು ಬಿಗ್‌ ಹಿಟ್ಟರ್, ಆಲ್‌ರೌಂಡರ್‌ಗಳನ್ನು ಹೊಂದಿರುವ ತಂಡ. ಸ್ಪಿನ್‌ ಬೌಲಿಂಗ್‌ ಅಪಾಯಕಾರಿ ಅಸ್ತ್ರವಾಗಿದೆ. ರೆಹಮಾನುಲ್ಲ ಗುರ್ಬಜ್‌, ವೆಂಕಟೇಶ್‌ ಅಯ್ಯರ್‌, ನಿತೀಶ್‌ ರಾಣಾ, ರಿಂಕು ಸಿಂಗ್‌, ಆ್ಯಂಡ್ರೆ ರಸೆಲ್‌, ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಕಾಡಿದ ಶಾದೂìಲ್‌ ಠಾಕೂರ್‌, ಸುಯಶ್‌ ಶರ್ಮ ಅವರೆಲ್ಲ ಕೋಲ್ಕತಾ ತಂಡದ ಬೆನ್ನೆಲುಬಾಗಿದ್ದಾರೆ.

ಆದರೂ ಈ ತಂಡ ಕಳೆದ ಸತತ 4 ಪಂದ್ಯಗಳಲ್ಲಿ ಮುಗ್ಗರಿಸಿ ಏಟು ಮಾಡಿಕೊಂಡಿದ್ದನ್ನು ನಂಬಲಾಗುತ್ತಿಲ್ಲ. ಹೈದರಾಬಾದ್‌ ವಿರುದ್ಧ 23 ರನ್‌, ಮುಂಬೈ ವಿರುದ್ಧ 5 ವಿಕೆಟ್‌, ಡೆಲ್ಲಿ ವಿರುದ್ಧ 4 ವಿಕೆಟ್‌, ಚೆನ್ನೈ ವಿರುದ್ಧ 49 ರನ್ನುಗಳಿಂದ ಎಡವಿತ್ತು. ನಾಯಕ ಶ್ರೇಯಸ್‌ ಅಯ್ಯರ್‌, ಬಾಂಗ್ಲಾದ ಅನುಭವಿ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರ ಗೈರು ಕೆಕೆಆರ್‌ಗೆ ಘಾಸಿ ಮಾಡಿದ್ದನ್ನು ಒಪ್ಪಲೇಬೇಕು

ಟಾಪ್ ನ್ಯೂಸ್

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

29

Kabaddi: ಇಂದು ಸೀನಿಯರ್‌ ಕಬಡ್ಡಿ ತಂಡದ ಆಯ್ಕೆ

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.