PM SVANidhi ಯೋಜನೆ: ಸ್ತ್ರೀ ಫಲಾನುಭವಿಗಳದ್ದೇ ಮೇಲುಗೈ
ಕರ್ನಾಟಕದ ಫಲಾನುಭವಿಗಳ ಪೈಕಿ ಮಹಿಳೆಯರ ಪ್ರಮಾಣ ಶೇ.50
Team Udayavani, Jun 13, 2023, 7:43 AM IST
ನವದೆಹಲಿ: ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪ್ರಧಾನಮಂತ್ರಿ ಸ್ವನಿಧಿ(ಪಿಎಂ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ) ಸಾಲ ಯೋಜನೆಯ ಶೇ.41ರಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ವಿಶೇಷವಾಗಿ, ದಕ್ಷಿಣ ರಾಜ್ಯಗಳ ಮಹಿಳೆಯರು ಈ ಯೋಜನೆಯನ್ನು ಹೆಚ್ಚು ಬಳಸಿಕೊಂಡಿದ್ದು, ಕರ್ನಾಟಕದಲ್ಲಿ ಶೇ.50ರಷ್ಟು ಫಲಾನುಭವಿಗಳು ಸ್ತ್ರೀಯರೇ ಆಗಿದ್ದಾರೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ದತ್ತಾಂಶಗಳು ತಿಳಿಸಿವೆ.
ಕೊರೊನಾ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲಿ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಎಂಬ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು 3 ವರ್ಷಗಳ ಹಿಂದೆ ಜಾರಿಗೆ ತಂದಿತ್ತು. ದೇಶಾದ್ಯಂತ 36.33 ಲಕ್ಷ ಮಂದಿ ಈ ಯೋಜನೆಯಡಿ ಸಾಲ ಪಡೆದಿದ್ದಾರೆ. ಈ ಪೈಕಿ 21.31 ಲಕ್ಷ ಪುರುಷರಾದರೆ, 15.02 ಲಕ್ಷ ಮಹಿಳೆಯರು.
ಮಹಿಳೆಯರೇ ಹೆಚ್ಚು:
ಒಟ್ಟು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ(ಈ ಪೈಕಿ ಬಹುತೇಕ ದಕ್ಷಿಣದ ಮತ್ತು ಈಶಾನ್ಯದ ರಾಜ್ಯಗಳು) ಮಹಿಳೆಯರೇ ಯೋಜನೆಯ ಪ್ರಮುಖ ಫಲಾನುಭವಿಗಳಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಶೇ.70, ತೆಲಂಗಾಣದಲ್ಲಿ ಶೇ.66, ತಮಿಳುನಾಡು ಶೇ.64 ಮತ್ತು ಕರ್ನಾಟಕದ ಫಲಾನುಭವಿಗಳ ಪೈಕಿ ಶೇ.50 ಮಂದಿ ಸ್ತ್ರೀಯರೇ ಆಗಿದ್ದಾರೆ. ಇನ್ನು, ಈಶಾನ್ಯ ರಾಜ್ಯಗಳ ಪೈಕಿ ಮಣಿಪುರ (ಶೇ.94), ನಾಗಾಲ್ಯಾಂಡ್(ಶೇ.88), ಮೇಘಾಲಯ (ಶೇ.77), ಅರುಣಾಚಲ ಪ್ರದೇಶ (ಶೇ.75) ಮತ್ತು ಸಿಕ್ಕಿಂನ ಶೇ.58ರಷ್ಟು ಫಲಾನುಭವಿಗಳು ಮಹಿಳೆಯರು ಎಂದೂ ಅಂಕಿಅಂಶ ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.