ಕಾನ್ಪುರ್:ಸ್ವಯಂಘೋಷಿತ ಬಾಬಾನ ಆರನೇ ವಿವಾಹ ಸಂಚನ್ನು ವಿಫಲಗೊಳಿಸಿದ ಐದನೇ ಪತ್ನಿ!
ಆರನೇ ಬಾರಿ ವಿವಾಹವಾಗಲು ಸಿದ್ಧತೆ ನಡೆಸಿದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Team Udayavani, Jun 19, 2021, 11:53 AM IST
ನವದೆಹಲಿ: ಸ್ವಯಂಘೋಷಿತ ಬಾಬಾ ಆರನೇ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾಗಲೇ ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದ ಕಾನ್ಪುರ್ ನಲ್ಲಿ ನಡೆದಿದೆ. ಷಹಜಹಾನ್ ಪುರ್ ನಿವಾಸಿ ಅಂಜು ಕಥೇರಿಯಾ ಪೊಲೀಸರ ಅತಿಥಿಯಾದ ಸ್ವಯಂಘೋಷಿತ ಬಾಬಾ!
ಇದನ್ನೂ ಓದಿ:ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡದೆ ಮುಂಬಯಿ ಲಾಕ್ ಡೌನ್ ತೆರವು ಬೇಡ: ಸಮಿತಿ
ಈ ಸ್ವಯಂ ಘೋಷಿತ ಬಾಬಾ ಅಂಜು ಈಗಾಗಲೇ ಐದು ಮದುವೆಯಾಗಿದ್ದು, ಕಾನೂನುಬದ್ಧವಾಗಿ ತನ್ನ ಮೊದಲಿನ ಪತ್ನಿಯರಿಗೆ ವಿವಾಹ ವಿಚ್ಛೇದನ ನೀಡದೆ ಆರನೇ ಬಾರಿ ಮದುವೆಯಾಗಲು ಸಿದ್ಧತೆ ನೀಡಿದ್ದ. ಈ ಸಂದರ್ಭದಲ್ಲಿ ಐದನೇ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಬಾಬಾನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಜು ಬಾಬಾ ಈಗಾಗಲೇ ಐದು ಮದುವೆಯಾಗಿದ್ದು, ನಮಗೆಲ್ಲಾ ವಂಚಿಸಿದಂತೆ, ಈತ ಇದೀಗ ಆರನೇ ಮದುವೆಯಾಗಲು ಹೊರಟಿರುವುದಾಗಿ ಐದನೇ ಪತ್ನಿ ದೂರು ನೀಡಿರುವುದಾಗಿ ದಕ್ಷಿಣ ಕಾನ್ಪುರ್ ಡಿಸಿಪಿ ರವೀನಾ ತ್ಯಾಗಿ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಐವರು ಪತ್ನಿಯರು!
ಪ್ರಾಥಮಿಕ ತನಿಖೆ ಪ್ರಕಾರ, ಅಂಜು ಕಥೇರಿಯಾ 2005ರಲ್ಲಿ ಮೊದಲ ಬಾರಿಗೆ ಮಣಿಪುರಿ ಜಿಲ್ಲೆಯ ನಿವಾಸಿಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಇವರಿಬ್ಬರ ವಿವಾಹ ವಿಚ್ಛೇದನ ಪ್ರಕರಣ ಕೋರ್ಟ್ ನಲ್ಲಿದೆ. 2010ರಲ್ಲಿ ಅಂಜು ಬರೇಲಿ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದು, ಆಕೆ ಕೂಡಾ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ನಾಲ್ಕು ವರ್ಷಗಳ ನಂತರ ಸ್ವಯಂಘೋಷಿತ ಬಾಬಾ ಆಯುರೈಯಾ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಈತನ ಹಿಂದಿನ ವಿವಾಹದ ರಹಸ್ಯ ತಿಳಿದ ನಂತರ ಮೂರನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಬಳಿಕ ಅಂಜು ಮೂರನೇ ಹೆಂಡತಿಯ ಸಂಬಂಧಿಯೊಬ್ಬಳನ್ನು ವಿವಾಹವಾಗಿದ್ದ. 2019ರಲ್ಲಿ ಐದನೇ ವಿವಾಹವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದನೇ ಪತ್ನಿಯ ಬಳಿಯೂ ಈತ ತನ್ನ ಹಿಂದಿನ ವಿವಾಹದ ಗುಟ್ಟು ರಟ್ಟು ಮಾಡಿರಲಿಲ್ಲವಾಗಿತ್ತು. ಕೆಲವು ದಿನಗಳ ನಂತರ ಆಕೆಗೆ ಕಿರುಕುಳ ನೀಡಲಾರಂಭಿಸಿದ್ದ. ಇದರಿಂದ ರೋಸಿ ಹೋದ ಆಕೆ ಕಳೆದ ವರ್ಷ ಚಾಕೇರಿ ಪೊಲೀಸ್ ಠಾಣೆಯಲ್ಲಿ ಅಂಜು ವಿರುದ್ಧ ದೂರು ದಾಖಲಿಸಿದ್ದಳು. ಬಳಿಕ ಅಂಜು ಕಿದ್ವಾಯಿ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ವಾಸವಾಗಿದ್ದು, ಆರನೇ ಬಾರಿ ವಿವಾಹವಾಗಲು ಸಿದ್ಧತೆ ನಡೆಸಿದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.