ಅಯೋಧ್ಯೆಗಾಗಿ ಜೀವನವನ್ನೇ ಮುಡಿಪಾಗಿಟ್ಟ 93 ವರ್ಷದ ಪರಾಶರನ್‌


Team Udayavani, Aug 4, 2020, 4:06 PM IST

parasaran

ಮಣಿಪಾಲ: ಸುದೀರ್ಘ‌ ಸಮಯದಿಂದ ಇತ್ಯರ್ಥಗೊಳ್ಳದೇ ಉಳಿದಿದ್ದ ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಇದ್ದ ಎಲ್ಲ ವ್ಯಾಜ್ಯ ಇತ್ಯರ್ಥಗೊಂಡು ನಾಳೆ (ಬುಧವಾರ) ಭೂಮಿ ಪೂಜೆ ನೆರವೇರಲಿದೆ.

ಇದು ಸಹಸ್ರ ಹಿಂದೂಗಳು ಹಲವು ದಶಕಗಳಿಂದ ಕಾತುರದಿಂದ ಕಾಯುತ್ತಿದ್ದ ಸಂದರ್ಭವಾಗಿದೆ. ಈ ಪುಣ್ಯ ಭೂಮಿಯಾಗಿ ಹೋರಾಡಿದ ಅನೇಕರು ನಿಟ್ಟುಸಿರು ಬಿಡುವ ದಿನವೂ ಹೌದು.

ಅದರ ಜತೆಗೆ ಈ ಪ್ರಕರಣದಲ್ಲಿ ಸುದೀರ್ಘವಾಗಿ ಕೋರ್ಟ್‌ ನಲ್ಲಿ ಅನೇಕರು ಬದಲಾದ ಸಂದರ್ಭದಲ್ಲಿ ವಾದ-ಪ್ರತಿವಾದಗಳನ್ನು ಮಾಡಿದ್ದರು.

ಈ ಪ್ರಕರಣದಲ್ಲಿ ರಾಮ್‌ ಲಲ್ಲಾ ವಿರಾಜಮಾನ್‌ ಸಹಿತ ಹಿಂದೂ ಕಕ್ಷಿದಾರರ ಪರ ವಾದ ಮಾಡಿದ್ದ 93 ವರ್ಷದ ಹಿರಿಯ ವಕೀಲ ಕೆ. ಪರಾಶರನ್‌‌ ಅವರೂ ಒಬ್ಬರು. ಈ ಇಳಿವಯಸ್ಸಿನಲ್ಲೂ ಅವರು ವಿಶ್ರಾಂತಿರಹಿತರಾಗಿ ಅಯೋಧ್ಯೆ ಪ್ರಕರಣದ ತೀರ್ಪು ತನ್ನ ಕಕ್ಷಿದಾರರ ಪರವಾಗಿ ಬರುವಂತೆ ಮಾಡುವಲ್ಲಿ ಪರಾಶರನ್‌ ಅವರು ನ್ಯಾಯಾಲಯದಲ್ಲಿ ಮಾಡಿದ ವಾದ ಸರಣಿ ಮತ್ತು ಅವರ ಕಾರ್ಯದಕ್ಷತೆಗೆ ಇದೀಗ ಫ‌ಲ ಲಭಿಸಿದೆ. ಬುಧವಾರ ಭವ್ಯ ಮಂದಿರಕ್ಕೆ ಭೂಮಿ ಪೂಜೆಯಾಗುವ ಮೂಲಕ ಹಲವು ದಶಕಗಳ ಹೋರಾಟಕ್ಕೆ ಜಯ ದೊರೆತಂದಾಗಿದೆ.

1927ರ ಅ.27ರಂದು ಜನಿಸಿದ ಪರಾಶರನ್‌ ಅವರು ಕಾನೂ ನಿನ ಮೇಲೆ ವಿಶೇಷ ಆಸಕ್ತಿ ಹೊಂದಿದ್ದರು. ದೀರ್ಘ‌ ಸಮಯ ಕಾನೂನಿನ ಹೋರಾಟದಲ್ಲಿ ಭಾಗಿಯಾದ ದೇಶದ ಮೊದಲ ವಕೀಲರೂ ಹೌದು. ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳಲೇಬೇಕು ಎಂಬ ಉದ್ದೇಶದಿಂದ ಹಗಲಿರುಳು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದವರಲ್ಲಿ ಪರಾಶರನ್‌ ಅವರೂ ಒಬ್ಬರು. ಕೋರ್ಟ್‌ ಕಲಾಪಗಳಿಗೆ ಒಂದು ದಿನ ಮುಂಚಿತವಾಗಿಯೇ ಸಿದ್ಧಗೊಳ್ಳುವ ಪರಿಪಾಠವನ್ನು ಪರಾಶರನ್‌ ರೂಢಿಸಿಕೊಂಡಿದ್ದರು.

ಈ ಹಿರಿಯ ಜೀವ ತನ್ನ ಜೀವನದ ಬಹುಪಾಲು ಅವಧಿಯನ್ನು ಕೇವಲ ಕೋರ್ಟ್‌ ಕಲಾಪಗಳಿಗೆ ಮೀಸಲಿರಿಸಿದ್ದರು. ಇನ್ನೂ ವಿಶೇಷವೆಂದರೆ ಅವರು ತಮ್ಮ ಈ ಇಳಿವಯಸ್ಸಿನಲ್ಲೂ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದಿಸಿದ್ದರು.

ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಸುದೀರ್ಘ‌ ವಿಚಾರಣೆಗೊಳಗಾದ ಪ್ರಕರಣಗಳಲ್ಲಿ ಒಂದು ಎಂದೇ ಗುರುತಿಸಿಕೊಳ್ಳುತ್ತಿರುವ ರಾಮ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಶ್ರೀರಾಮಚಂದ್ರನ ವಿಚಾರದಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದ ಕಾರಣಕ್ಕಾಗಿಯೇ ಪರಾಶರನ್‌ ಅವರು ತಮ್ಮ ಯುವ ವಕೀಲರ ತಂಡದ ಸಹಾಯದೊಂದಿಗೆ ಈ ಪ್ರಕರಣದಲ್ಲಿ ವಾದಿಸಿ ತಮ್ಮ ಕಕ್ಷಿದಾರರಿಗೆ ಗೆಲುವನ್ನು ತಂದಿಟ್ಟಿದ್ದರು. ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ಎದುರು ಸತತ 40 ದಿನಗಳ ಕಾಲ ನಡೆದ ಈ ವಾದ ಸರಣಿಯ ಸಂದರ್ಭದಲ್ಲಿ ನ್ಯಾಯವಾದಿ ಪರಾಶರನ್‌ ಅವರು ಈ ಪ್ರಕರಣದ ಪ್ರತೀ ಅಂಶಗಳ ಕುರಿತಾಗಿಯೂ ನ್ಯಾಯಪೀಠದ ಗಮನ ಸೆಳೆಯುತ್ತಿದ್ದರು. ಪ್ರತೀದಿನ 10.30ಕ್ಕೆ ಪ್ರಾರಂಭವಾಗುತ್ತಿದ್ದ ಕೋರ್ಟ್‌ ಕಲಾಪ ಸಾಯಂಕಾಲ 4 ಅಥವಾ 5 ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು.

ಪಿ.ವಿ. ಯೋಗೇಶ್ವರನ್‌, ಅನಿರುದ್‌ ಶರ್ಮಾ, ಶ್ರೀಧರ್‌ ಪೊಟ್ಟರಾಜು ಮತ್ತು ಅದಿತಿ ದಾನಿ ಅವರಿದ್ದ ಯುವ ವಕೀಲ ಪಡೆ ಪರಾಶರನ್‌ ಅವರಿಗೆ ಸಹಾಯ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಈ ಹಿರಿಯ ನ್ಯಾಯವಾದಿಯ ನಾಲಗೆ ತುದಿಯಲ್ಲೇ ಇರುತ್ತಿದ್ದುದು ಅವರ ಕುಂದದ ಜ್ಞಾಪಕ ಶಕ್ತಿಗೊಂದು ಉತ್ತಮ ಉದಾಹರಣೆಯಾಗಿತ್ತು. ಮಾತ್ರವಲ್ಲದೇ ಇದು ನ್ಯಾಯಾಲಯದಲ್ಲಿ ಎಲ್ಲರ ಅಚ್ಚರಿಗೂ ಕಾರಣವಾಗುತ್ತಿತ್ತು.

ಪರಾಶರನ್‌ ಅವರಿಗೆ ಪ್ರತಿವಾದಿಯಾಗಿದ್ದವರು ಮುಸ್ಲಿಂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ರಾಜೀವ್‌ ಧವನ್‌ ಅವರು. ಧವನ್‌ ಅವರು ಉತ್ತಮ ಪ್ರತಿವಾದಿಯಾಗಿದ್ದರು. ಎದುರಾಲಿ ಕಕ್ಷಿದಾರರಿಗೆ ಪ್ರಖರ ಪ್ರಶ್ನೆಗಳನ್ನು ಕೇಳುವುದು, ಪಾಯಿಂಟ್‌ಗಳನ್ನು ಹಾಕುವುದರಲ್ಲಿ ಧವನ್‌ ಇಂದಿಗೂ ಸುಪ್ರೀಂ ಕೋರ್ಟ್‌ನಲ್ಲಿ ಹೆಸರುವಾಸಿ. ಆದರೆ ಇಳಿ ವಯಸ್ಸಿನ 40 ದಿನಗಳ ವಿಚಾರಣೆಯ ಸಂದರ್ಭದಲ್ಲಿ ಪರಾಶರನ್‌ ಅವರು ತಾಳ್ಮೆ ಕಳೆದುಕೊಳ್ಳದೇ ಇದ್ದು ಪ್ರತಿವಾದಗಳನ್ನು ಆಳಿಸುತ್ತಿದ್ದರು. ಕೆಲವು ಹಂತದಲ್ಲಂತೂ ಕೋಪಗೊಳ್ಳುತ್ತಿದ್ದ ರಾಜೀವ್‌ ಧವನ್‌ ಅವರು ಕೆಲವೊಂದು ಕಾಗದ ಪತ್ರಗಳನ್ನು ಹರಿದು ಹಾಕುತ್ತಿದ್ದರು. ಒಂದೆರೆಡು ಉದಾಹರಣೆಗಳಲ್ಲಿ ಹೇಳುವುದಾದರೆ ಹಿಂದೂ ಕಡೆಯ ವಕೀಲವರ ವಾದ ಮೂರ್ಖತನದ್ದಾಗಿದೆ ಎಂದು ಹೇಳಿದಾಗಲೂ ಪರಾಶರನ್‌ ಅವರು ಅದಕ್ಕೆ ಯಾವುದೇ ಎದುರುತ್ತರ ನೀಡದೇ ಶಾಂತ ಚಿತ್ತರಾಗುತ್ತಿದ್ದರು. ಇದು ಪರಾಶರನ್‌ ಅವರ ಹೆಚ್ಚುಗಾರಿಕೆ.

ಅಕ್ಟೋಬರ್‌ 16ರಂದು ಜನ್ಮಭೂಮಿ ಪ್ರಕರಣದ ವಾದವೆಲ್ಲ ಮುಕ್ತಾಯಗೊಂಡ ಬಳಿಕ ಪರಾಶರನ್‌ ಅವರು ನ್ಯಾಯಾಲಯದ ಹೊರಭಾಗದಲ್ಲಿ 15 ನಿಮಿಷಗಳ ಕಾಲ ರಾಜೀವ್‌ ಧವನ್‌ ಅವರಿಗಾಗಿ ಕಾದು ಕುಳಿತಿದ್ದರು. ಈ ವಿಚಾರ ತಿಳಿದ ರಾಜೀವ್‌ ಧವನ್‌ ಅವರು ಹೊರಗೆ ಬಂದು ಪರಾಶರನ್‌ ಅವರನ್ನು ಭೇಟಿಯಾಗಿ ಅವರೊಂದಿಗೆ ಫೊಟೋ ಕ್ಲಿಕ್ಕಿಸಿಕೊಂಡಿದ್ದರು.

ಇದು ಇವರಿಬ್ಬರ ವೃತ್ತಿಪರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು. ಹೀಗೆ ದೇಶದ ಇತಿಹಾಸದಲ್ಲೇ ಸುದೀರ್ಘ‌ ಪ್ರಕರಣವೊಂದನ್ನು ಇಬ್ಬರು ಹಿರಿಯ ನ್ಯಾಯವಾದಿಗಳು ವಾದಿಸಿ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಒದಗಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದು ಒಂದು ವಿಶೇಷವೇ ಸರಿ. ನಾಳೆ ಇದೆಲ್ಲದರ ಫ‌ಲವಾಗಿ ರಾಮಜನ್ಮ ಭೂಮಿಗೆ ಭೂಮಿ ಪೂಜೆಯಾಗಲಿದ್ದು, ಇಡೀ ಜಗತ್ತೇ ಸಾಕ್ಷಿಯಾಗಲಿದೆ.

ಟಾಪ್ ನ್ಯೂಸ್

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.