ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,700 ಅಂಕ ಜಿಗಿತ: ಮತ್ತೆ 58 ಸಾವಿರ ಅಂಕಗಳಿಗೆ ಏರಿಕೆ
ಎಲ್ ಆ್ಯಂಡ್ ಟಿ, ಟೈಟಾನ್ ಷೇರುಗಳ ಮೌಲ್ಯ ಶೇ.5.13ರಷ್ಟು ಲಾಭಗಳಿಸಿದೆ.
Team Udayavani, Feb 15, 2022, 5:19 PM IST
ಮುಂಬಯಿ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ ಎಂಬ ಭೀತಿಯಲ್ಲಿ ಮಹಾಪತನ ಕಂಡಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ (ಫೆ.15) ಬರೋಬ್ಬರಿ 1,700 ಅಂಕಗಳಷ್ಟು ಭರ್ಜರಿ ಜಿಗಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಹಿಜಾಬ್ ವಿವಾದ : ವಿಚಾರಣೆ ಮತ್ತೆ ಮುಂದೂಡಿದ ಹೈ ಕೋರ್ಟ್ ತ್ರಿ ಸದಸ್ಯ ಪೀಠ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,736.21 ಅಂಕಗಳಷ್ಟು ಭಾರೀ ಏರಿಕೆಯೊಂದಿಗೆ, 58,142.05 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 509.65 ಅಂಕ ಏರಿಕೆಯಾಗಿದ್ದು, 17,352.42 ಅಂಕಗಳ ಮಟ್ಟ ತಲುಪಿದೆ.
ಬಜಾಜ್ ಫೈನಾನ್ಸ್, ಎಸ್ ಬಿಐ, ಬಜಾಜ್ ಫಿನ್ ಸರ್ವ್, ಎಲ್ ಆ್ಯಂಡ್ ಟಿ, ಟೈಟಾನ್ ಷೇರುಗಳ ಮೌಲ್ಯ ಶೇ.5.13ರಷ್ಟು ಲಾಭಗಳಿಸಿದೆ. ಕಳೆದ ಹತ್ತು ತಿಂಗಳಲ್ಲಿ ಮೊದಲ ಬಾರಿಗೆ ಎಂಬಂತೆ ಸೋಮವಾರ 1,700ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿತ್ತು.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 315.60 ಅಂಕ ಏರಿಕೆ ಕಂಡಿದ್ದು, 56,721.44 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 85.75 ಅಂಕಗಳಷ್ಟು ಏರಿಕೆಯೊಂದಿಗೆ 16,928.55 ಅಂಕಗಳಲ್ಲಿ ವಹಿವಾಟು ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.