ಕಲಬುರಗಿ: 5 ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿದ್ದ ಬಿಜೆಪಿಗೆ ಹಿನ್ನಡೆ
ಹಳೆಯ ಮೀಸಲಾತಿಯಂತೆ ಮೇಯರ್ ಚುನಾವಣೆ: ಹೈಕೋರ್ಟ್ ಆದೇಶ
Team Udayavani, Feb 4, 2022, 7:04 PM IST
ಕಲಬುರಗಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ಇಲ್ಲಿನ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಹಳೆಯ ಮೀಸಲಾತಿ ಹಾಗೂ ಹಿಂದಿನ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ.
ಕಳೆದ ನ.20ರಂದು ನಿಗದಿಯಾಗಿದ್ದ ಚುನಾವಣೆಯು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.ಆದರೆ ಮುಂದೂಡಲ್ಪಟ್ಟ ಚುನಾವಣೆಯನ್ನು ಇದೇ ಫೆ. 5ರಂದು ನಿಗದಿ ಮಾಡಲಾಗಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದರು. ಆದರೆ ಈ ಮುಂಚೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ್ ಹಿಂದುಳಿದ ವರ್ಗ ಬ ಗೆ ಮೀಸಲಾಗಿತ್ತು. ಅದೇ ರೀತಿ 55 ಪಾಲಿಕೆ ಸದಸ್ಯರು ಹಾಗೂ ಸಂಸದರು, ಶಾಸಕರು ಒಳಗೊಂಡ 63 ಸದಸ್ಯ ಮತದಾರರ ಪಟ್ಟಿ ಅಂತೀಮಗೊಳಿಸಲಾಗಿತ್ತು. ಆದರೆ ಶನಿವಾರ ನಿಗದಿಗೊಳಿಸಲಾಗಿದ್ದ ಚುನಾವಣಾ ಅಧಿಸೂಚನೆಯಲ್ಲಿ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲುಗೊಳಿಸಲಾಗಿತ್ತು.
ಅದೇ ರೀತಿ ಬಿಜೆಪಿಯು ಐವರು ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿತ್ತು. ಹೀಗಾಗಿ ಮತದಾರರ ಸಂಖ್ಯೆ 68 ಆಗಿತ್ತು. ಆದರೆ ಮೀಸಲಾತಿ ಬದಲಾಗಿದ್ದನ್ನು ಹಾಗೂ ಮತದಾರರ ಪಟ್ಟಿಗೆ ಹೊಸದಾಗಿ ಐವರ ಹೆಸರು ಸೇರಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಇಬ್ಬರು ಪ್ರತ್ಯೇಕ ವಾಗಿ ಎರಡು ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ಇಲ್ಲಿನ ಕರ್ನಾಟಕ ಹೈಕೋರ್ಟ್ ನ ಏಕ ಸದಸ್ಯತ್ವ ಪೀಠವು ಈ ಹಿಂದಿನ ಮೀಸಲಾತಿಯಂತೆ ಅಂದರೆ ಮೇಯರ್ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಹಿಂದುಳಿದ ವರ್ಗ ಹಾಗೂ ಹಿಂದಿನ 63 ಮತದಾರರ ಪಟ್ಟಿಯಂತೆ ಚುನಾವಣೆ ಯನ್ನು ತಿಂಗಳೊಳಗೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಪಾಲಿಕೆ ಸದಸ್ಯ ಯಲ್ಲಪ್ಪ ನಾಯಿಕೊಡಿ ಹಾಗೂ ಹುಲಿಗೆಪ್ಪ ಕನಕಗಿರಿ ರಿಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನ್ಯಾ. ಇ.ಎಸ್. ಇಂದ್ರೀಶ ಅವರು ಶುಕ್ರವಾರ ಹಾಗೂ ಶನಿವಾರ ವಾದ ವಿವಾದ ಆಲಿಸಿ ವಿಚಾರಣೆ ನಡೆಸಿ ಶನಿವಾರ ಮಧ್ಯಾಹ್ನ ನಂತರ ಆದೇಶ ನೀಡಿದರು.
ಅರ್ಜಿದಾರರ ಪರವಾಗಿ ವಕೀಲರಾದ ಮಹಾದೇವ ಪಾಟೀಲ್, ಎಂ. ಎನ್. ನಾಗರಾಳ ಮತ್ತು ಸರ್ಕಾರದ ಪರವಾಗಿ ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ, ಗೌರೀಶ ಖಾಶಂಪೂರ ಮತ್ತು ಇತರರು ವಾದಿಸಿದರು.
ಹೇಗಾದರೂ ಮಾಡಿ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಬಿಜೆಪಿ ಪಕ್ಷದ ಪ್ರಯತ್ನಕ್ಕೆ ಹಿನ್ನೆಡೆಯಾದಂತಾಗಿದೆ. ಹೀಗಾಗಿ ಮೇಲ್ಮನನವಿ ಸಲ್ಲಿಸಲು ಮುಂದಾಗಿದೆ.
ಮತ್ತೊಂದೆಡೆ ಹೈಕೋರ್ಟ್ ತೀರ್ಪು ಆದೇಶ ತಮ್ಮ ಪರವಾಗಿ ಬರುವುದೆಂದು ತಿಳಿದುಕೊಂಡು ನಗರದಲ್ಲಿ ಬಿಜೆಪಿ ಪಕ್ಷ ತನ್ನ ನಾಯಕರ ದೊಡ್ಡದಾದ ಕಟೌಟ್ ಗಳನ್ನು ಹಾಕಲಾಗಿದ್ದರೆ, ಕೋಟ್೯ ಆದೇಶ ಹೊರ ಬೀಳುತ್ತಿದ್ದಂತೆ ಅದನ್ನು ತೆರವುಗೊಳಿಸಿರುವ ಅಪರೂಪದ ಸಂಗತಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ
MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.