ಹಿಜಾಬ್ ವಿವಾದ: ಕಂಗನಾಗೆ ಹಿರಿಯ ನಟಿ ಶಬಾನಾ ಅಜ್ಮಿ ತಿರುಗೇಟು
ನಾನು ಎಂದಿಗೂ ಹಿಜಾಬ್ ಅಥವಾ ಬುರ್ಖಾದ ಪರವಾಗಿಲ್ಲ ಎಂದ ಜಾವೇದ್ ಅಖ್ತರ್
Team Udayavani, Feb 11, 2022, 4:37 PM IST
ನವದೆಹಲಿ: ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ ಕಂಗನಾ ರಣಾವತ್ ಅವರಿಗೆ ಮಾಜಿ ರಾಜ್ಯಸಭಾ ಸಂಸದೆ ಮತ್ತು ಹಿರಿಯ ನಟಿ ಶಬಾನಾ ಅಜ್ಮಿ ತಿರುಗೇಟು ನೀಡಿದ್ದಾರೆ.
ಕಂಗನಾ ಗುರುವಾರ ರಾತ್ರಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ,ಭುಗಿಲೆದ್ದಿವಿವಾದದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದು,ಲೇಖಕ ಆನಂದ್ ರಂಗನಾಥನ್ ಅವರ ಪೋಸ್ಟ್ ಅನ್ನು ಹಂಚಿಕೊಂಡು “ನೀವು ಧೈರ್ಯವನ್ನು ತೋರಿಸಲು ಬಯಸಿದರೆ, ಅಫ್ಘಾನಿಸ್ಥಾನದಲ್ಲಿ ಬುರ್ಖಾವನ್ನು ಧರಿಸದೆ ಅದನ್ನು ಪ್ರದರ್ಶಿಸಿ. ಮುಕ್ತವಾಗಲು ಕಲಿಯಿರಿ,, ನಿಮ್ಮನ್ನು ಪಂಜರದಲ್ಲಿ ಹಿಡಿದುಕೊಳ್ಳಬೇಡಿ” ಎಂದು ಬರೆದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಶಬಾನಾ ಅಜ್ಮಿ, “ನಾನು ತಪ್ಪಾಗಿದ್ದರೆ ನನ್ನನ್ನು ಸರಿಪಡಿಸಿ ಆದರೆ ಅಫ್ಘಾನಿಸ್ಥಾನವು ಥಿಯೋಕ್ರೆಟಿಕ್ (ದೇವರು ಅಥವಾ ಧರ್ಮದ ) ಹೆಸರಿನಲ್ಲಿ ಆಡಳಿತ ರಾಜ್ಯವಾಗಿದೆ ಮತ್ತು ನಾನು ಕೊನೆಯದಾಗಿ ಭಾರತವನ್ನು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಪರಿಶೀಲಿಸಿದಾಗ?!!” ಎಂದು ಬರೆದಿದ್ದಾರೆ.
ಶಬಾನಾ ಅವರ ಪತಿ, ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಭಾರತದಲ್ಲಿ ಹಿಜಾಬ್ ಪದ್ದತಿಯನ್ನು ಖಂಡಿಸಿದ್ದರು. “ನಾನು ಎಂದಿಗೂ ಹಿಜಾಬ್ ಅಥವಾ ಬುರ್ಖಾದ ಪರವಾಗಿಲ್ಲ. ನಾನು ಈಗಲೂ ಅದಕ್ಕೆ ವಿರುದ್ಧವಾಗಿ ನಿಂತಿದ್ದೇನೆ, ಆದರೆ ಅದೇ ಸಮಯದಲ್ಲಿ, ನಾನು ಹುಡುಗಿಯರ ಸಣ್ಣ ಗುಂಪನ್ನು ಬೆದರಿಸಲು ಪ್ರಯತ್ನಿಸಿ,ವಿಫಲವಾದ ಪುಂಡ ಪೋಕರಿಗಳ ಬಗ್ಗೆ ಆಳವಾದ ತಿರಸ್ಕಾರವಲ್ಲದೆ ಮತ್ತೇನೂ ಇಲ್ಲ. ಇದು ಅವರ `ನಿರ್ಭಯದ` ಕಲ್ಪನೆಯೇ. ಏನು ಕರುಣೆ ಇಲ್ಲವೇ ಎಂದು ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.