Shameful:ಗುರುಗ್ರಾಮ್-ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೇಲೆ ಅತ್ಯಾಚಾರ
ಸುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.
Team Udayavani, Oct 29, 2020, 12:09 PM IST
Representative Image
ಗುರುಗ್ರಾಮ್(ಹರ್ಯಾಣ): ಉಸಿರಾಟ, ಟಿಬಿ ಕಾಯಿಲೆಯಿಂದ ನರಳುತ್ತಿದ್ದ 21 ವರ್ಷದ ಯುವತಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಮೇಲೆ ಆಸ್ಪತ್ರೆಯ ಸಿಬ್ಬಂದಿ ಅತ್ಯಾಚಾರ ಎಸಗಿರುವ ಘಟನೆ ಹರ್ಯಾಣದ ಗುರುಗ್ರಾಮ್ ನಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯುವತಿ ಅಕ್ಟೋಬರ್ 21ರಿಂದ 27ರವರೆಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅರೆಪ್ರಜ್ಞಾವಸ್ಥೆಯಿಂದ ಹೊರಬಂದ ನಂತರ ಸಂತ್ರಸ್ತೆ ತಂದೆಗೆ ವಿಷಯ ತಿಳಿಸಿದ್ದು, ಅಕ್ಟೋಬರ್ 27ರಂದು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ.
ಆಸ್ಪತ್ರೆಯ ಸಿಬ್ಬಂದಿ ವಿಕಾಸ್ ಎಂಬಾತ ಅರೆಪ್ರಜ್ಞಾವಸ್ಥೆಯಲ್ಲಿದ್ದ ತನ್ನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಗ್ಗೆ ತಂದೆಯ ಬಳಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ. ಈ ಕುರಿತು ಸುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆಯಲು ಆಸ್ಪತ್ರೆಗೆ ತೆರಳಿದ್ದರು, ಆದರೆ ವೈದ್ಯರು ಯುವತಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಚೆನ್ನೈ ವಿಮಾನ ನಿಲ್ದಾಣದಲ್ಲಿ 23ಕೆಜಿ ಶಾರ್ಕ್ ರೆಕ್ಕೆ ವಶ: ಇದರಿಂದ ಏನು ತಯಾರಿಸುತ್ತಾರೆ?
ಐಎಎನ್ ಎಸ್ ನ್ಯೂಸ್ ಏಜೆನ್ಸಿಗೆ ಡೆಪ್ಯುಟಿ ಪೊಲೀಸ್ ಕಮಿಷನರ್ ಮಕ್ ಸೂದ್ ಅಹ್ಮದ್ ನೀಡಿರುವ ಮಾಹಿತಿ ಪ್ರಕಾರ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.