ಶಾಂಘಾಯ್ ಸಹಕಾರ ಸಮಾವೇಶ: ಜೈಶಂಕರ್-ಬಿಲಾವಲ್ ಮಾತುಕತೆಯಿಲ್ಲ?
ಪಾಕ್ ಉಗ್ರಕೃತ್ಯಗಳ ವಿರುದ್ಧ ಜೈಶಂಕರ್ ಕಿಡಿಕಾರಿದ್ದೇ ಕಾರಣ?
Team Udayavani, Apr 27, 2023, 8:01 AM IST
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಭಾರತದ ಸ್ನೇಹಕ್ಕೆ ಹವಣಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಮಣೆ ಹಾಕುವ ಸಾಧ್ಯತೆಗಳು ಇಲ್ಲ. ಮುಂದಿನ ತಿಂಗಳು ನಡೆಯಲಿರುವ ಶಾಂಘಾಯ್ ಸಹಕಾರ ಸಮಾವೇಶದಲ್ಲೂ ಉಭಯ ವಿದೇಶಾಂಗ ಸಚಿವರ ಔಪಚಾರಿಕ ಸಭೆ ನಡೆಯುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಪಾಕ್ನ ಭಯೋತ್ಪಾದನೆ ಕುತಂತ್ರದ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುಡುಗಿದ್ದರ ಬೆನ್ನಲ್ಲೇ ಹೀಗೊಂದು ಅನುಮಾನಗಳು ಶುರುವಾಗಿವೆ.
ಮೇ 4-5ರಂದು ಗೋವಾದಲ್ಲಿ ಶಾಂಘೈ ಸಹಕಾರ ಸಮಾವೇಶದ ಅಂಗವಾಗಿ ವಿದೇಶಾಂಗ ಸಚಿವರ ಸಭೆ ನಡೆಯಲಿದೆ. ಇದರಲ್ಲಿ ತನ್ನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾಗವಹಿಸಲಿದ್ದಾರೆ ಎಂದು ಪಾಕ್ ಘೋಷಿಸಿತ್ತು. ಆಗ ಜೈಶಂಕರ್-ಬಿಲಾವಲ್ ನಡುವೆ ಮಾತುಕತೆ ನಡೆಯಬಹುದು ಎಂಬ ಆಶಾಭಾವ ಹುಟ್ಟಿಕೊಂಡಿತ್ತು. ಇತ್ತೀಚೆಗಷ್ಟೇ ಜೈಶಂಕರ್ ಪಾಕ್ ಉಗ್ರಗಾಮಿ ಕೃತ್ಯಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿರುವುದರಿಂದ ಮಾತುಕಕತೆ ಕಷ್ಟ ಎಂಬ ವದಂತಿಗಳು ಶುರುವಾಗಿವೆ. ಈ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಿc ಅವರಿಗೆ ಪಾಕ್ ಜತೆಗೆ ದ್ವಿಪಕ್ಷೀಯ ಸಭೆ ಏನಾದರೂ ನಡೆಯಲಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾವು ಒಟ್ಟಾರೆ ಸಭೆಯನ್ನು ಯಶಸ್ವಿಗೊಳಿಸುವುದರ ಬಗ್ಗೆ ಗಮನಹರಿಸುತ್ತಿದ್ದೇವೆ. ಯಾವುದೇ ನಿರ್ದಿಷ್ಟ ರಾಷ್ಟ್ರಗಳ ಬಗ್ಗೆ ಕೇಂದ್ರೀಕರಿಸಿಲ್ಲ ಎಂದಿದ್ದಾರೆ. ಈ ಹೇಳಿಕೆಯಿಂದಲೂ ಗೊಂದಲವುಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.