ಬಂಡಾಯಕ್ಕೆ ಉಚ್ಚಾಟನೆ ಶಿಕ್ಷೆ: NCP ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶರದ್ ಪವಾರ್ ಘೋಷಣೆ
Team Udayavani, Jul 7, 2023, 7:29 AM IST
ಮುಂಬಯಿ/ಹೊಸದಿಲ್ಲಿ: ಶಾಸಕರ ಬೆಂಬಲದ ವಿಚಾರದಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಕೈ ಮೇಲಾಗಿದ್ದರೂ, ಪಕ್ಷದ ವರಿಷ್ಠ ಶರದ್ ಪವಾರ್ ಅವರು ಹಠ ಬಿಡದೇ, ಗುರುವಾರ ದಿಲ್ಲಿಯ ತಮ್ಮ ನಿವಾಸದಲ್ಲಿ ಎನ್‌ಸಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಯನ್ನು ನಡೆಸಿದ್ದಾರೆ.
ಪ್ರಫುಲ್ ಪಟೇಲ್, ಸುನೀಲ್ ತತ್ಕರೆ ಮತ್ತು ಬಂಡಾ ಯವೆದ್ದು ಹೊರನಡೆದಿರುವ ಎಲ್ಲ 9 ಶಾಸಕರನ್ನು ಉಚ್ಚಾಟನೆ ಮಾಡುವಂಥ ಮಹತ್ವದ ನಿರ್ಧಾರವನ್ನು ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿದೆ. ಜತೆಗೆ ಇತರ 8 ನಿರ್ಣಯಗಳನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ. “ಎಲ್ಲ 27 ರಾಜ್ಯ ಘಟಕಗಳು ಕೂಡ ಶರದ್ ಬೆಂಬ ಲ ಕ್ಕಿದ್ದು, ಮಹಾರಾಷ್ಟ್ರದ ರಾಜ್ಯ ಘಟಕವೂ ಅವರ ಬೆನ್ನಿಗೆ ನಿಂತಿದೆ’ ಎಂದು ಸಭೆಯ ಬಳಿಕ ನಾಯಕರು ಹೇಳಿ ದ್ದಾರೆ. ಇದೇ ವೇಳೆ ಈ ಕಾರ್ಯಕಾರಿಣಿಯನ್ನು ಅಜಿತ್ ಅವರು “ಕಾನೂನುಬಾಹಿರ ನಡೆ’ ಎಂದು ದೂಷಿಸಿದ್ದಾರೆ.
ಶರದ್ ಗರ್ಜನೆ: ಸಭೆ ಬಳಿಕ ಪತ್ರಕರ್ತರ ಜತೆ ಮಾತನಾಡುತ್ತಾ ಅಜಿತ್ ವಿರುದ್ಧ ಗರ್ಜಿಸಿದ ಶರದ್, “ಎನ್‌ಸಿಪಿ ಅಧ್ಯಕ್ಷ ನಾನು. ಯಾರೋ ಏನೋ ಹೇಳಿದರೆ ಅದಕ್ಕೆ ಮಹತ್ವ ಕೊಡಬೇಕಾಗಿಲ್ಲ. ನನ್ನ ವಯಸ್ಸು 82 ಆಗಿರಲೀ, 92 ಆಗಿರಲೀ, ನಾನು ಇನ್ನೂ ಬಲಿಷ್ಠನಾಗಿದ್ದೇನೆ, ಪರಿಣಾಮಕಾರಿಯಾ ಗಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ. ಬುಧವಾ ರವಷ್ಟೇ ಅಜಿತ್ ಅವರು, “ಎಲ್ಲ ಪಕ್ಷಗಳಲ್ಲೂ ಒಂದು ವಯೋಮಿತಿ ಕಳೆದ ಮೇಲೆ ಎಲ್ಲರೂ ನಿವೃತ್ತರಾಗು ತ್ತಾರೆ. ಬಿಜೆಪಿಯಲ್ಲಿ ನಾಯಕರು 75 ತುಂಬುತ್ತಲೇ ನಿವೃತ್ತಿ ಪಡೆಯುತ್ತಾರೆ. ಆದರೆ ನೀವು ಯಾವಾಗ ಇದನ್ನೆಲ್ಲ ನಿಲ್ಲಿಸುವುದು’ ಎಂದು ಪ್ರಶ್ನಿಸಿದ್ದರು. ಇದೇ ವೇಳೆ, “ಪಕ್ಷಕ್ಕೆ ನೋವಾಗಿದೆ. ಆದರೆ ಎಲ್ಲ ಕಾಮ್ರೇಡ್‌ಗಳೂ ಒಂದಾಗಿ ಪಕ್ಷ ಬಲಪಡಿಸೋಣ ಎಂದು ಹೇಳಿದ್ದಾರೆ. ಯಾರಿಗಾದರೂ ಸಿಎಂ ಆಗಬೇಕೆಂದಿದ್ದರೆ ಆಗಲಿ. ನಾವು ಏನು ಹೇಳಬೇಕೋ ಅದನ್ನು ಚುನಾವಣ ಆಯೋಗದ ಮುಂದೆ ಹೇಳುತ್ತೇವೆ’ ಎಂದಿದ್ದಾರೆ ಶರದ್ ಪವಾರ್.
ಶರದ್-ರಾಹುಲ್ ಭೇಟಿ: ಶರದ್ ಪವಾರ್‌ಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪವಾರ್ ಅವರ ದಿಲ್ಲಿಯ ನಿವಾಸಕ್ಕೆ ಭೇಟಿ ನೀಡಿ, ಕೆಲವು ಹೊತ್ತು ಸಮಾಲೋಚನೆ ನಡೆಸಿದರು. ನಿಮ್ಮ ಬೆಂಬಲಕ್ಕೆ ನಾವಿ ದ್ದೇವೆ ಎಂಬ ಸಂದೇಶವನ್ನೂ ಅವರು ರವಾನಿಸಿದರು.
ಹಗರಣದ ಉರುಳು: ಈ ನಡುವೆ, ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಕ್ಕರೆ ಸಹಕಾರಿಗಳ ಆಸ್ತಿಪಾಸ್ತಿಗಳನ್ನು ಡಿಸಿಎಂ ಅಜಿತ್ ಪವಾರ್ ಅವರ ಆಪ್ತರು ಅತ್ಯಂತ ಕಡಿಮೆ ಬೆಲೆಗೆ ಸ್ವಾಧೀನಪಡಿ ಸಿ ಕೊಂಡಿ ದ್ದಾರೆ ಎಂಬ ಆರೋಪವು ಮೇಲ್ನೋಟಕ್ಕೆ ದೃಢ ಪಟ್ಟಿದೆ ಎಂದು ಮಹಾರಾಷ್ಟ್ರದ ವಿಶೇಷ ಕೋರ್ಟ್ ಹೇಳಿದೆ. ಹೀಗಾಗಿ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡುತ್ತಿದ್ದು, ಜು.19ರೊಳಗೆ ಹಾಜರಾಗುವಂತೆ ಸೂಚಿಸುತ್ತಿದ್ದೇನೆ ಎಂದಿದೆ.
ಸಿಎಂ ಏಕನಾಥ ಶಿಂಧೆ ಬಣದೊಳಗೆ ಢವ ಢವ!
ಅತ್ತ ಅಜಿತ್ ಪವಾರ್ ಬಣ ಸರಕಾರದೊಳಗೆ ಸೇರುತ್ತಲೇ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರಲ್ಲಿ ಆತಂಕ ಮನೆ ಮಾಡಿದೆ. ಬುಧವಾರವೇ ಶಾಸಕರಲ್ಲಿನ ತಳಮಳವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಶಿಂಧೆ ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಯಾರೂ ಭೀತಿಗೊಳಗಾಗಬೇಕಿಲ್ಲ ಎಂದು ಭರವಸೆ ನೀಡಿದ್ದರು. ಆದರೂ ಕೆಲವು ಶಾಸಕರು ತಾವು “ಮಾತೋಶ್ರೀ’ಯ ಕ್ಷಮೆ ಯಾಚಿಸುತ್ತೇವೆ, ಉದ್ಧವ್ ಬಣ ನಮ್ಮನ್ನು ಸಂಪರ್ಕಿಸಿದರೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂಬ ಸಂದೇಶಗಳನ್ನು ರವಾನಿಸಿದ್ದಾರೆ ಎಂದು ಶಿವಸೇನೆ ಸಂಸದ ವಿನಾಯಕ ರಾವತ್ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಗುರುವಾರ ಪ್ರತಿಕ್ರಿಯಿಸಿರುವ ಸಿಎಂ ಶಿಂಧೆ, “ನಾವು ರಾಜೀನಾಮೆ ಪಡೆಯುವವರೇ ಹೊರತು, ರಾಜೀನಾಮೆ ನೀಡುವವರಲ್ಲ. ನಮ್ಮ ಬಣದೊಳಗೆ ಯಾವುದೇ ಬಂಡಾಯ ಆರಂಭವಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಕಟ್ಟಪ್ಪ ಪೋಸ್ಟರ್‌ಗಳು ಪ್ರತ್ಯಕ್ಷ!
ಎನ್‌ಸಿಪಿಯ ಎರಡು ಬಣಗಳ ನಡುವೆ ಕದನ ಏರ್ಪಟ್ಟಿರುವ ನಡುವೆಯೇ, ಪಕ್ಷದ ವಿದ್ಯಾರ್ಥಿ ಘಟಕವು ಗುರುವಾರ ದಿಲ್ಲಿಯಲ್ಲಿ ಬಾಹುಬಲಿ ಸಿನೆಮಾದ ಪೋಸ್ಟರ್ ಅನ್ನು ಅಂಟಿಸಿ ಗಮನ ಸೆಳೆಯಿತು. ಕಟ್ಟಪ್ಪನು ಅಮರೇಂದ್ರ ಬಾಹುಬಲಿಯ ಬೆನ್ನ ಹಿಂದಿನಿಂದ ಬಂದು ಚೂರಿ ಇರಿಯುವ ಫೋಟೋವನ್ನು ಮುದ್ರಿಸಿ, “ದ್ರೋಹಿ’ ಎಂಬ ಶೀರ್ಷಿಕೆ ನೀಡಿ ಎಲ್ಲ ಕಡೆ ಅಂಟಿಸಲಾಗಿದೆ. ಜತೆಗೆ ಇದರಲ್ಲಿ ಅಜಿತ್‌ರನ್ನು “ಕಟ್ಟಪ್ಪ’ನೆಂದೂ, ಶರದ್‌ರನ್ನು ಬಾಹುಬಲಿ ಎಂದೂ ಚಿತ್ರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.