US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
ನಿಫ್ಟಿ ಕೂಡಾ 24,000 ಅಂಕಗಳಿಗಿಂತ ಕೆಳಕ್ಕೆ ಕುಸಿದಿದೆ.
Team Udayavani, Nov 4, 2024, 11:34 AM IST
ಮುಂಬೈ: ನವೆಂಬರ್ 5ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ(US Presidential Election) ಚುನಾವಣೆ ಹಾಗೂ ಫೆಡರಲ್ ರಿಸರ್ವ್ ಬಡ್ಡಿ ದರ ನಿರ್ಧಾರದ ಕುರಿತ ನಿರ್ಣಯದ ಕಳವಳ ಬಾಂಬೆ ಷೇರುಪೇಟೆ(Stock Market) ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಸೋಮವಾರ (ನ.04) ಷೇರುಪೇಟೆ ಸಂವೇದಿ ಸೂಚ್ಯಂಕ 1,000ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್ ಬರೋಬ್ಬರಿ 1,308.48 ಅಂಕಗಳಷ್ಟು ಕುಸಿತ ಕಂಡಿದ್ದು, 78,392.48 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ ಕೂಡಾ 24,000 ಅಂಕಗಳಿಗಿಂತ ಕೆಳಕ್ಕೆ ಕುಸಿದಿದೆ.
1,308 ಅಂಕಗಳ ಕುಸಿತದಿಂದಾಗಿ ಕೇವಲ 15 ನಿಮಿಷಗಳಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂಪಾಯಿ ಲಾಭಾಂಶ ಕಳೆದುಕೊಳ್ಳುವಂತಾಗಿದೆ. ಎನ್ ಎಸ್ ಇ ನಿಫ್ಟಿ 454 ಅಂಕಗಳಷ್ಟು ಇಳಿಕೆ ಕಂಡಿದ್ದು, 23,850 ಅಂಕಗಳ ಮಟ್ಟಕ್ಕೆ ಕುಸಿದಿದೆ.
ಸೂಚ್ಯಂಕ, ನಿಫ್ಟಿ ಕುಸಿತದ ಪರಿಣಾಮ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಸನ್ ಫಾರ್ಮಾ ಷೇರುಗಳು ನಷ್ಟ ಕಂಡಿದೆ. ಅದೇ ರೀತಿ ಎಲ್ ಆಂಡ್ ಟಿ, ಆಕ್ಸಿಸ್ ಬ್ಯಾಂಕ್, ಟಿಸಿಎಸ್, ಟಾಟಾ ಮೋಟಾರ್ಸ್ ಷೇರುಗಳು ಕುಸಿತ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.