![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Oct 22, 2021, 7:55 PM IST
ಬೆಂಗಳೂರು :ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ ಎಂದು ರಾಜ್ಯ ಬಿಜೆಪಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ ಶುಕ್ರವಾರ ಟ್ವೀಟ್ ಮಾಡಿದೆ.
ನೂರು ಕೋಟಿ ಲಸಿಕೆ ಪೂರ್ಣಗೊಳಿಸಿದ ಬಳಿಕ ಟೀಕಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿದೆ.
”ವಿವಿಧ ದೇಶಗಳು ವಿತರಿಸಿದ ಲಸಿಕೆ ಪ್ರಮಾಣ
ಅಮೆರಿಕಾ – 41.01ಕೋಟಿ
ಜಪಾನ್ – 18.21ಕೋಟಿ
ಜರ್ಮನಿ – 11.12ಕೋಟಿ
ರಷ್ಯಾ – 9.98ಕೋಟಿ
ಬ್ರಿಟನ್ – 9.53ಕೋಟಿ
ಇದೇ ಅವಧಿಯಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ವಿತರಿಸಿದೆ. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಮಾಡಿದ ಕೆಲಸಕ್ಕಾಗಿ ಸಂಭ್ರಮಿಸುವುದು ತಪ್ಪೇ ಸಿದ್ದರಾಮಯ್ಯ?” ಎಂದು ಪ್ರಶ್ನಿಸಿದೆ.
”ರಾಜ್ಯದಲ್ಲಿ ಇದುವರೆಗೆ 6.21 ಕೋಟಿಗೂ ಅಧಿಕ ಲಸಿಕೆ ವಿತರಿಸಲಾಗಿದೆ.4.15 ಕೋಟಿಗೂ ಅಧಿಕ ಜನರಿಗೆ ಮೊದಲ ಡೋಸ್ ಹಾಗೂ 2.06 ಕೋಟಿಗೂ ಅಧಿಕ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನವರಿಗೆ 2.31 ಕೋಟಿಗೂ ಅಧಿಕ ಮೊದಲ ಡೋಸ್ ನೀಡಲಾಗಿದೆ.ಸಿದ್ದರಾಮಯ್ಯ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ?” ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.
”ಕೋವಿಡ್ ದುರಿತ ಕಾಲದಲ್ಲಿ ಮಾನವೀಯ ನೆಲೆಯಲ್ಲಿ 95 ಕ್ಕೂ ಅಧಿಕ ದೇಶಗಳಿಗೆ ಭಾರತ ಲಸಿಕೆ ಪೂರೈಸಿದೆ.ವಿಶ್ವಸಂಸ್ಥೆಯೂ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಈ ನಡೆಯನ್ನು ಶ್ಲಾಘಿಸಿವೆ. ಇದನ್ನೂ ನೀವು ವೈಫಲ್ಯ ಎಂದು ಪರಿಗಣಿಸುವಿರಾ? ಇದು ದೃಷ್ಟಿದೋಷವೋ, ಹೃದಯದ ದೋಷವೋ?” ಎಂದು ಬಿಜೆಪಿ ಪ್ರಶ್ನಿಸಿದೆ.
ರಾಹುಲ್ ಗಾಂಧಿ & ಡಿಕೆಶಿ ಅವರೇ,
ಲಸಿಕೆ ವಿತರಣೆಯಲ್ಲಿ ಭಾರತ ಸಾಧಿಸಿದ ಪ್ರಗತಿಗೆ ವಿಶ್ವವೇ ಬೆರಗಾಗಿದೆ. ಜಾಗತಿಕ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಕಾಂಗ್ರೆಸ್ಸಿಗರು ಕೊಂಕು ನುಡಿಯುವುದರಲ್ಲಿ ತಲ್ಲೀನರಾಗಿದ್ದಾರೆ.
ನೀವು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದೀರಾ?#VaccineCentury https://t.co/trKzsWrAbs
— BJP Karnataka (@BJP4Karnataka) October 22, 2021
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.