Karnataka: ನೂತನ ಶಾಸಕರಿಗೆ ಸಿದ್ದರಾಮಯ್ಯ ಪಾಠ

-ಹೊಸದಾಗಿ ಆಯ್ಕೆಯಾದ ಶಾಸಕರ ತರಬೇತಿ ಶಿಬಿರ ಉದ್ಘಾಟಿಸಿದ ಮುಖ್ಯಮಂತ್ರಿಗಳಿಂದ ಕಿವಿಮಾತು

Team Udayavani, Jun 27, 2023, 7:11 AM IST

thumb-5

ಬೆಂಗಳೂರು: ಸದನದಲ್ಲಿ ಸದಾ ಹಾಜರಿ, ಪೂರ್ವತಯಾರಿ, ಭಾಷೆ ಮೇಲೆ ಹಿಡಿತ, ಜನಪರ ವಿಷಯದ ಮಂಡನೆ, ವಿಷಯ ತಜ್ಞರ ಜತೆ ಚರ್ಚೆ, ಅಧ್ಯಯನಶೀಲತೆ, ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಕಾಳಜಿ, ಜನರ ಬಗ್ಗೆ ಗೌರವ, ಸಂವಿಧಾನದ 51ನೇ ವಿಧಿವರೆಗಿನ ಅರಿವು, ಸದನದ ನಿಯಮಗಳ ಮಾಹಿತಿ ಮತ್ತು ಸಂವಿಧಾನಕ್ಕೆ ಬದ್ಧತೆ ಮುಂತಾದ ಅಂಶಗಳನ್ನು ರೂಡಿಸಿಕೊಂಡು ಉತ್ತಮ ಸಂಸದೀಯ ಪಟುಗಳಾಗಿ ಬೆಳೆಯಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಯಯ್ಯ ಅವರು ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಕಿವಿ ಮಾತು ಹೇಳಿದರು.

ನೆಲಮಂಗಲದ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸಸ್‌ ಕ್ಷೇಮವನದಲ್ಲಿ ಆಯೋಜಿಸಲಾಗಿರುವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸದನ ನಡೆಸುವ ನಿಯಮಾವಳಿಗಳನ್ನು ಓದಬೇಕು. ಇಲ್ಲವಾದರೆ ಏನು ಪ್ರಶ್ನೆ ಕೇಳಬೇಕು, ಯಾವ ನಿಯಮದಡಿ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ನಾವು ಏನೇ ಕಾನೂನು, ತಿದ್ದುಪಡಿ ಮಾಡಿದರೂ ಅದು ಸಂವಿಧಾನದ ಆಶಯಕ್ಕೆ ಬದ್ಧವಾಗಿರಲೇಬೇಕು. ಆದ್ದರಿಂದ ಸಂವಿಧಾನದ ಅರಿವು ಇರಬೇಕು. ಜನರಿಗೆ ಪೂರಕವಾದ ಕಾನೂನು ರೂಪಿಸುವ ಸಿದ್ಧತೆ ಮತ್ತು ಬದ್ಧತೆ ಹೊಂದಿರಬೇಕು. ಬಜೆಟ್‌ ಅನ್ನು ಅರ್ಥಮಾಡಿಕೊಳ್ಳುವ ಶಕ್ತಿ ರೂಡಿಸಿಕೊಳ್ಳಿ. ಗ್ರಂಥಾಲಯ ಬಳಸಿಕೊಳ್ಳಿ. ಕಲಾಪ ನಡೆಯುವ ದಿನಗಳಲ್ಲಿ ಬೇರೆ ಯಾವುದೇ ಕಾರ್ಯಕ್ರಮ, ಭೇಟಿಗಳನ್ನು ಇಟ್ಟುಕೊಳ್ಳಬೇಡಿ. ಕೋರ್ಟ್‌ ನಿಮ್ಮನ್ನು ಪ್ರಶ್ನೆ ಮಾಡದಿರಬಹುದು. ಆದರೆ ಜನತಾ ಕೋರ್ಟ್‌ ಪ್ರಶ್ನೆ ಮಾಡುತ್ತದೆ ಎಂದರು.
ಮತದಾರ ಕೈಬಿಡಲ್ಲ

ಜನರ ಧ್ವನಿಯಾಗಿ ಕೆಲಸ ಮಾಡಿದರೆ ಮಾತ್ರ ರಾಜಕಾರಣದಲ್ಲಿ ಉಳಿದು ಮುಂದಿನ ಚುನಾವಣೆಯನ್ನು ಗೆಲ್ಲಲು ಸಾಧ್ಯ. ಜನಪರ ಕಾಳಜಿ ಇಲ್ಲದವರು ಒಂದು ಚುನಾವಣೆ ಮಾತ್ರ ಗೆಲ್ಲಬಹುದು. ಬೆವರಿನ ಶ್ರಮ, ಸಂಸ್ಕೃತಿಗೆ ಅಸಹ್ಯ ಪಡದವರನ್ನು, ಜನರ ಜತೆ ಬೆರೆತು ಗೌರವ ವಿಶ್ವಾಸದಿಂದ ನಡೆದುಕೊಳ್ಳುವವರನ್ನು, ಜನಸೇವೆಗಾಗಿ ರಾಜಕಾರಣ ಮಾಡುವವರನ್ನು ಮತದಾರರು ಕೈ ಬಿಡುವುದಿಲ್ಲ ಎಂದು ಹೇಳಿದರು.

ಸದನದಲ್ಲಿ ಇರಬೇಕು
ಬಹಳ ಜನ ಒಮ್ಮೆಯಾದರೂ ವಿಧಾನಸಭೆ ಮೆಟ್ಟಿಲು ಹತ್ತಬೇಕೆಂದು ಬಯಸುತ್ತಾರೆ. ಮೆಟ್ಟಿಲು ಹತ್ತಿದ ಬಳಿಕ ಸದನದ ಒಳಗಡೆ ಬರಲ್ಲ. ಈ ಧೋರಣೆಯನ್ನು ಬಿಡಬೇಕು. ಶಾಸಕರು ಎಲ್ಲ ಸಮಯದಲ್ಲೂ ವಿಧಾನಸಭೆಯಲ್ಲಿ ಇರಬೇಕು. ಬಹಳ ಜನ ಮಂತ್ರಿಗಳೇ ವಿಧಾನಸಭೆಗೆ ಬರುವುದಿಲ್ಲ. ವಿಧಾನಸಭೆಗೆ ಬರುವುದರಿಂದ ಹಿರಿಯರು ಏನು ಮಾತನಾಡುತ್ತಾರೆ, ಸಂಸದೀಯ ಮಾತುಗಳು ಏನು ಎಂಬುದು ಅರ್ಥ ಆಗುತ್ತದೆ ಎಂದು ಸಲಹೆ ನೀಡಿದರು.

ವರ್ಗಾವಣೆ ಕಡತ ಇಟ್ಟುಕೊಂಡು ಕಾರ್ಯದರ್ಶಿ ಬಳಿ ಹೋಗಬೇಡಿ
ಕಾನೂನು ಮತ್ತು ಸಂಸದೀಯ ಸಚಿವ ಎಚ್‌. ಕೆ. ಪಾಟೀಲ್‌ ಮಾತನಾಡಿ, ಶಾಸಕರು ಗೌರವಯುತ ಮತ್ತು ಗಂಭೀರ ನಡವಳಿಕೆ ರೂಡಿಸಿಕೊಂಡಾಗ ಜನರು ಮತ್ತು ಅಧಿಕಾರಿಗಳು ಗೌರವಿಸುತ್ತಾರೆ. ಸದನ ಎಂಬುದು ಸಂತೆಯಲ್ಲ ಎಂಬುದನ್ನು ಅರಿತು ಗೌರವಯುತವಾಗಿ ವರ್ತಿಸಿ. ನೀವು ವರ್ಗಾವಣೆ ಕಡತ ಹಿಡಿದುಕೊಂಡು ಕಾರ್ಯದರ್ಶಿ ಹತ್ತಿರ ಹೋದರೆ ನಿಮ್ಮ ಗಂಭೀರತೆ ಕಡಿಮೆ ಆಗುತ್ತದೆ ಎಂದು ಕಿವಿಮಾತು ಹೇಳಿದರು. ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿದರು.

ವಾಟಾಳ್‌ ನಾಗರಾಜ್‌ ಮಾದರಿ ಶಾಸಕ
ವಾಟಾಳ್‌ ನಾಗರಾಜ್‌ ಅವರು ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್‌ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಅವರು ಕಲಾಪದ ಒಂದು ಕ್ಷಣವನ್ನೂತಪ್ಪಿಸಿಕೊಂಡಿರಲಾರರು. ನಾನು ಆ ತರಹದ ವ್ಯಕ್ತಿಯನ್ನು ಈವರೆಗೂ ನೋಡಿಲ್ಲ. ನಾನಾದರೂ ಈವರೆಗೆ ನಾಲ್ಕೈದು ದಿನ ಗೈರು ಹಾಜರಾಗಿರಬಹುದು. ನಾನು 1994ರಲ್ಲಿ ಹಣಕಾಸು ಸಚಿವನಾಗಿದ್ದಾಗ ಆಗ ಶಾಸಕರಾಗಿದ್ದ ಜಯಪ್ರಕಾಶ್‌ ಹೆಗ್ಡೆ, ಮಾಧುಸ್ವಾಮಿ, ಶ್ರೀರಾಮ ರೆಡ್ಡಿ, ರಾಜೇಂದ್ರ ಅವರು ಏನು ಪ್ರಶ್ನೆ ಕೇಳುತ್ತಾರೋ ಎಂಬ ಆತಂಕದಿಂದ ಅಧಿವೇಶನದ ಒಂದು ಕ್ಷಣವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ಪಕ್ಷಾಂತರ ನಿಷೇಧವಾಗಬೇಕು
ನಾನು ರಾಜಕಾರಣ ಆರಂಭಿಸಿದಾಗ ಹಣದ ಪ್ರಭಾವ ಕಡಿಮೆ ಇತ್ತು. ನಾನು 1983ರಲ್ಲಿ ಮೊದಲ ಚುನಾವಣೆ ಗೆದ್ದಾಗ 63 ಸಾವಿರ ರೂ. ಖರ್ಚು ಮಾಡಿದ್ದೆ. ಆಗ ಎರಡೇ ಕಾರು ಬಳಸಿದ್ದೆ. ಆದರೆ ಈಗ ಚುನಾವಣೆ ದುಬಾರಿ ಆಗಿದೆ. ಹಾಗೆಯೇ ಆಗ ಜಾತಿ ಇಷ್ಟೊಂದು ಪ್ರಬಲವಾಗಿರಲಿಲ್ಲ. ಊರಿನ ಮುಖ್ಯಸ್ಥರು ತೀರ್ಮಾನಿಸಿದವರಿಗೆ ಜನ ಮತ ಹಾಕುತ್ತಿದ್ದರು. ಆದರೆ ಈಗ ಯುವಕರು, ಮಹಿಳೆಯರು ತಮಗಿಷ್ಟದಂತೆ ಮತ ಹಾಕುತ್ತಿದ್ದಾರೆ. ಪಕ್ಷಾಂತರ, ಆಪರೇಷನ್‌ ಕಮಲ, ಆಪರೇಷನ್‌ ಹಸ್ತ, ಆಪರೇಷನ್‌ ಜೆಡಿಎಸ್‌ ಹೆಚ್ಚಾಗಿದೆ. ಪಕ್ಷಾಂತರವನ್ನು ನಿರ್ಬಂಧಿಸುವಂತೆ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬಜೆಟ್‌ ಎಂದರೆ ಕಾಯಕ ದಾಸೋಹ
ಶಾಸಕರು, ಸಂಸದರು ಬಜೆಟ್‌ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್‌ ಬಗ್ಗೆ ಹೇಳಿ¨ªಾರೆ. ಕಾಯಕ ಮತ್ತು ದಾಸೋಹ ಬಜೆಟ್‌ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್‌ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್‌ನ ಮೌಲ್ಯ. ಶ್ರೀಮಂತರಿಗೆ ತೆರಿಗೆ ಹಾಕಬೇಕೇ ಹೋರತು ಬಡವರಿಗಲ್ಲ ಎಂದು ವಿವರಿಸಿದರು.

ಟಾಪ್ ನ್ಯೂಸ್

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

15-dk

Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.