ಸರಕಾರದ ವಿರುದ್ಧ ಸಚಿವಾಲಯದ ನೌಕರರ ಸಂಘದ ಮೌನ ಪ್ರತಿಭಟನೆ
Team Udayavani, Feb 23, 2022, 4:31 PM IST
ಬೆಂಗಳೂರು : ಸರ್ಕಾರಿ ಸಚಿವಾಲಯದ ನೌಕರರ ಬಹುದಿನಗಳ ಬೇಡಿಕೆಯನ್ನು ಕಂಡು ಕಾಣದಂತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಸಚಿವಾಲಯದ ನೌಕರರ ಸಂಘ ಗುರುವಾರ ಮೌನ ಪ್ರತಿಭಟನೆ ಹಮ್ಮಿಕೊಂಡಿದೆ.
ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇದೇ ಫೆ.24ರಂದು, ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ಸಂಘ ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿಂದು ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುರುಸ್ವಾಮಿ, ಸಚಿವಾಲಯದವರಿಗೆ ದುರುದ್ದೇಶಪೂರಕವಾಗಿ ತಹಶೀಲ್ದಾರರಾಗುವ ಅವಕಾಶವನ್ನು ಸರ್ಕಾರ ತಪ್ಪಿಸಿದೆ.ಇಲಾಖೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಸಚಿವಾಲಯದ ನೌಕರರಿಗೆ ಇದೀಗ ಅನ್ಯಾಯ ಮಾಡಲು ಹೊರಟಿದೆ.ಕಿರಿಯ ಸಹಾಯಕರ ಹುದ್ದೆಯನ್ನು ರದ್ದುಮಾಡಲು ಹೊರಡುತ್ತಿರುವ ಸರ್ಕಾರದ ಈ ಕ್ರಮ ಖಂಡನೀಯ.ನಮ್ಮ ಮನವಿಯನ್ನು ಸರ್ಕಾರ ಸ್ವೀಕರಿಸಿದರೂ ಇದೂವರೆಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಮ್ಮನ್ನು ಕರೆಯಿಸಿ ಬೇಡಿಕೆಯನ್ನು ಈಡೇರಿಸುವ ಪ್ರಯತ್ನವನ್ನು ಮಾಡಿಲ್ಲ.ಹೀಗಾಗಿ ಅನಿವಾರ್ಯವಾಗಿ ಈಗ ಅಧಿವೇಶನದ ಬಳಿಕ ನಾಳೆಯಿಂದ ಮೌನಪ್ರತಿಭಟನೆಗೆ ಜಾರಿದ್ದೇವೆ.ಎಲ್ಲಾ ಬೇಡಿಕೆಗಳ ಒತ್ತಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆರ್.ಕುಮಾರಸ್ವಾಮಿ,ಹರ್ಷಾ,ಶಾಂತರಾಮ್,ಬಿ.ಎ.ಸತೀಶ್ ಕುಮಾರ್ ,ಮಂಜುಳ,ಮಾರುತಿ,ಜಗದೀಶ್,ವಿದ್ಯಾಶ್ರೀ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.