ಬದುಕಿನಲ್ಲಿ ಎತ್ತರಕ್ಕೇರಲು ಸರಳ ಸಲಹೆಗಳು


Team Udayavani, Apr 4, 2021, 6:40 AM IST

ಬದುಕಿನಲ್ಲಿ ಎತ್ತರಕ್ಕೇರಲು ಸರಳ ಸಲಹೆಗಳು

ಮನುಷ್ಯನಿಗೆ ಪ್ಲ್ರಾನ್‌ ಬಿ ಎನ್ನುವುದು ಇರಬೇಕು. ಆದರೆ ಪ್ಲ್ರಾನ್‌ ಸಿ, ಪ್ಲ್ರಾನ್‌ ಡಿ, ಪ್ಲ್ರಾನ್‌ ಇ ಇದೆ ಅಂದರೆ ಅತಿಯಾದ ಬ್ಯಾಕ್‌ ಅಪ್‌ ಪ್ಲ್ರಾನ್‌ಗಳು ಇವೆಯೆಂದರೆ ಆತನ ಮುಖ್ಯ ಪ್ಲ್ರಾನ್‌ ಗೆ ಬ್ಯಾಕ್‌ ಬೋನ್‌ ಇಲ್ಲ ಎಂದರ್ಥ. ಹೀಗೇ ಆಗುತ್ತಾ ಹೋದರೆ ಆತನ ಬದುಕು ಗೊಂದಲದ ಗೂಡಾಗುತ್ತದೆ ಎನ್ನುವ ಹಲವಾರು ಉದಾಹರಣೆಗಳನ್ನು ನಾನು ನೋಡಿದ್ದೇನೆ.

ನನ್ನನ್ನು ಭೇಟಿಯಾಗುವ ಅನೇಕ ಯುವಕರು, ಯಾವ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತದೆ ಎಂದು ಸಲಹೆ ಕೇಳುತ್ತಾರೆ. ಅವರು ಹಾಗೆ ಕೇಳಿದ ತತ್‌ಕ್ಷಣ ನಾನು ಅವರಿಗೆ ಹೇಳುವುದಿಷ್ಟೆ- ಮೊದಲು ನಿಮಗೆ ಹೂಡಿಕೆಯಲ್ಲಿ ನಿಜಕ್ಕೂ ಆಸಕ್ತಿಯಿದೆಯೇ ಎನ್ನುವುದು ಖಾತ್ರಿಮಾಡಿಕೊಳ್ಳಿ. ಅನಂತರ ಆ ಬಗ್ಗೆ ಸಾಧ್ಯವಾದಷ್ಟೂ ತಿಳಿದುಕೊಳ್ಳಿ. ಅನಂತರ ಹೂಡಿಕೆ ಮಾಡಿ. ಎಲ್ಲರೂ ಮಾಡುತ್ತಿದ್ದಾರೆ ಎಂದು ನೀವೂ ಮಾಡಲು ಹೋಗಬೇಡಿ.

ಇದು ಕೇವಲ ಸ್ಟಾಕ್‌ಗಳಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವವರ ಬಗ್ಗೆ ನಾನು ಹೇಳುತ್ತಿರುವ ಮಾತಲ್ಲ. ಜೀವನದ ಪ್ರತೀ ಕ್ಷೇತ್ರಕ್ಕೂ ಅನ್ವಯವಾಗುವ ಮಾತಿದು. ನೀವು ಚಿತ್ರಕಲೆಯಲ್ಲಿ ತೊಡಗಲು ಬಯಸುತ್ತಿರಬಹುದು ಅಥವಾ ಸಂಗೀತಗಾರರಾಗಲು ಪ್ರಯತ್ನಿಸುವವರಾಗಿರ ಬಹುದು. ಹಾಗಿದ್ದರೆ ನೀವೇನು ಮಾಡಬೇಕು?

ಚಿತ್ರ ಕಲಾವಿದನಾಗಲು ಬಯಸುವವನು ಮೊದಲು ಒಂದು ಹಾಳೆಯ ಮೇಲೆ ಪೆನ್ಸಿಲ್‌ನಿಂದ ಚಿತ್ರ ಬರೆಯಲು ಆರಂಭಿಸಬೇಕು. ಅದನ್ನು ಬಿಟ್ಟು “ಇಲ್ಲ, ನಾನು ಸಾವಿರಾರು ರೂಪಾಯಿ ಖರ್ಚು ಮಾಡಿ ದೊಡ್ಡ ಕ್ಯಾನ್ವಾಸ್‌ಗಳನ್ನು, ಪೇಂಟ್‌ ಗಳನ್ನು ತಂದು ಅಲ್ಲಿಂದಲೇ ಆರಂಭಿಸುತ್ತೇನೆ’ ಎಂದು ಹೂಡಿಕೆ ಮಾಡಿದರೆ, ನಿಮ್ಮ ಹಣ, ಆಸಕ್ತಿ ಎರಡೂ ಬೇಗನೇ ಪೋಲಾಗುವ ಸಾಧ್ಯತೆ ಇರುತ್ತದೆ. ಅತ್ಯಂತ ಅಗ್ಗದ ಬಾಲ್‌ ಪಾಯಿಂಟ್‌ ಪೆನ್‌ ಮತ್ತು ಹಾಳೆಗಳ ಮೇಲೆ ಗೆರೆ ಗೀಚುವುದನ್ನು ಆರಂಭಿಸಿಯೇ ಒಬ್ಬ ವ್ಯಕ್ತಿ ಮಹಾನ್‌ ಕಲಾವಿದನಾಗ ಬಹುದು. ಅದೇ ರೀತಿಯೇ ಒಬ್ಬ ವ್ಯಕ್ತಿ ಗಿಟಾರ್‌ ವಾದಕನಾಗಲು ಬಯಸಿದರೆ, ಆತ ಅತ್ಯಂತ ದುಬಾರಿ ಗಿಟಾರ್‌ ಖರೀದಿಸಿ ಆರಂಭಿಸುವ ಅಗತ್ಯವೇನೂ ಇಲ್ಲ.

ಯಾವುದೇ ಸಂಗತಿಯಲ್ಲಿ ಹೂಡಿಕೆಯಿರಲಿ, ಅದರಲ್ಲಿ ನೀವು ಕಷ್ಟಪಟ್ಟ ಹಣ ಹೂಡುವ ಮುನ್ನ, ನಿಮ್ಮ ಮನಸ್ಸು ಅದು ಎದುರೊಡ್ಡುವ ಸವಾಲುಗಳನ್ನು ಸ್ವೀಕರಿಸಲು ಸಿದ್ಧವಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ. ಈ ವಿಷಯವನ್ನು ಗ್ರಾಸೂÅಟ್‌ನಲ್ಲಿ ಕಲಿಯಲು ಏನು ಮಾಡಬಹುದು ಎಂದು ಪ್ರಶ್ನಿಸಿಕೊಳ್ಳಿ. ನಿಮಗೆ ಹಣ ಹೂಡುವ ಮನಸ್ಸು ಇದೆಯೆಂದಾದರೆ ತರಬೇತಿ ಪಡೆಯಲು, ಪಾಠ ಗಳನ್ನು ಕಲಿಯಲು ಹೂಡಿಕೆ ಮಾಡಿ. ಷೇರು ಮಾರುಕಟ್ಟೆಯಲ್ಲಾಗಲಿ ಅಥವಾ ಇನ್ಯಾವುದೇ ಹೂಡಿಕೆಗಳಲ್ಲಾಗಲಿ ಹಣ ಹೂಡಿಕೆ ಮಾಡುತ್ತೇನೆ ಎಂದು ಬರುವವರಿಗೆ ನಾನು ಹೇಳುವುದು ಇದನ್ನೇ.

ಒಂದೆಡೆ ಇರಲಿ ಗಮನ
ಒಂದು ವಿಷಯದತ್ತ ಗಮನಹರಿಸಿ. ನಮ್ಮಲ್ಲಿ ಎಲ್ಲರಿಗೂ ಹಲವು ರೀತಿಯ ಸೃಜನಶೀಲತೆಗಳು, ಕೌಶಲಗಳು ಇರುತ್ತವೆ. ಆದರೆ ನಾವು ಒಂದು ವಿಷಯದತ್ತ ಹೆಚ್ಚು ಗಮನಹರಿಸಬೇಕು. ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯ ಕ್ರೀಡಾಪಟು ಆಗುವ, ಗಾಯಕ ನಾಗುವ, ಉದ್ಯಮಿಯಾಗುವ ಅಥವಾ ಡ್ಯಾನ್ಸರ್‌ ಆಗುವ ಕೌಶಲಗಳಿರಬಹುದು. ಆದರೆ ಆತ ಯಾವುದಾ ದರೊಂದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಉಳಿದದ್ದನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಎಲ್ಲವನ್ನೂ ಮಾಡುತ್ತೇನೆ ಎಂದು ಹೊರಟರೇ ಯಾವುದೂ ಆಗದೇ ಫಸ್ಟ್ರೇಟ್‌ ಆಗಬೇಕಾಗುತ್ತಷ್ಟೆ!

ಈ ವಿಷಯವನ್ನು ಹಣದ ವಿಚಾರಕ್ಕೂ ಅನ್ವಯಿಸ ಬಹುದು. ಹಣವನ್ನು ಡೈವರ್ಸಿಫೈ ಮಾಡಬೇಕು. ಅಂದರೆ ಹತ್ತುಹಲವು ಕಡೆ ಹೂಡಬೇಕು ಎನ್ನುವ ಮಾತಿದೆ. ಆದರೆ ಈ ವಾದದ ಬಗ್ಗೆ ನನಗೆ ಚೂರು ಅಸಮಾಧಾನವಿದೆ. ಆದಾಗ್ಯೂ ನಮ್ಮ ಅಸೆಟ್‌ ಅನ್ನು ಮೂರ್ನಾಲ್ಕು ಕಡೆ ಹೂಡಿಕೆ ಮಾಡುವುದರಲ್ಲಿ ತಪ್ಪೇನೂ ಇಲ್ಲವಾದರೂ ಹಣವನ್ನು ಹತ್ತಾರು ಕಡೆಗಳಲ್ಲಿ ಹೂಡಿಕೆ ಮಾಡುತ್ತಾ ಹೋಗುವುದು ಸರಿಯಲ್ಲ. ಇದರರ್ಥ, ನಿಮಗೆ ನಿಮ್ಮ ಹಣ ಎಲ್ಲಿ ಬೆಳೆಯಬಲ್ಲದು ಎನ್ನುವ ಅರಿವಿಲ್ಲ ಎಂದಷ್ಟೇ ಆಗುತ್ತದೆ.
ಮನುಷ್ಯನಿಗೆ ಪ್ಲ್ರಾನ್‌ ಬಿ ಎನ್ನುವುದು ಇರಬೇಕು. ಆದರೆ ಪ್ಲ್ರಾನ್‌ ಸಿ, ಪ್ಲ್ರಾನ್‌ ಡಿ, ಪ್ಲ್ರಾನ್‌ ಇ ಇದ್ದರೆ, ಅಂದರೆ ಅತಿಯಾದ ಬ್ಯಾಕ್‌ ಅಪ್‌ ಪ್ಲ್ರಾನ್‌ಗಳು ಇವೆಯೆಂದರೆ ಆತನ ಮುಖ್ಯ ಪ್ಲ್ರಾನ್‌ ಗೆ ಬ್ಯಾಕ್‌ ಬೋನ್‌ ಇಲ್ಲ ಎಂದರ್ಥ. ಹೀಗೇ ಆಗುತ್ತಾ ಹೋದರೆ ಆತನ ಬದುಕು ಗೊಂದಲದ ಗೂಡಾಗುತ್ತದೆ ಎನ್ನುವ ಹಲವಾರು ಉದಾಹರಣೆಗಳನ್ನು ನಾನು ನೋಡಿದ್ದೇನೆ.

ರಾತೋರಾತ್ರಿ ಯಶಸ್ಸು
ರಾತೋರಾತ್ರಿ ಯಶಸ್ಸು ಎನ್ನುವುದು ಅತ್ಯಂತ ಬಾಲಿಶ ಪರಿಕಲ್ಪನೆ. ಯಾವ ವ್ಯಕ್ತಿಯೂ ರಾತೋರಾತ್ರಿ ಯಶಸ್ವಿಯಾಗುವುದಿಲ್ಲ. ಯಶಸ್ಸಿಗಾಗಿ ಆತ ನೂರಾರು ರಾತ್ರಿ ನಿದ್ದೆಗೆಟ್ಟಿರುತ್ತಾನೆ. ಒಂದು ವಿಷಯದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ, ಅದರಲ್ಲಿ ಕೌಶಲ ವೃದ್ಧಿಸಿ ಕೊಳ್ಳುತ್ತಾ ಹೋದರೆ ಯಶಸ್ಸು ಖಂಡಿತ ಸಿಗುತ್ತದೆ (ನೀವು ಊಹಿಸಿದಷ್ಟು ದೊಡ್ಡದಾಗಿರಬೇಕು ಎಂದೇನೂ ಅಲ್ಲ). ಆದರೆ ಅದಕ್ಕಾಗಿ ತಾಳ್ಮೆ ಬಹಳ ಮುಖ್ಯ.

ಪುಸ್ತಕಗಳನ್ನು ಓದಿ
ನೀವು ಯಾವುದೇ ಕ್ಷೇತ್ರದಲ್ಲಿರಿ, ನಿತ್ಯವೂ ಪುಸ್ತಕಗಳನ್ನು ಓದಿ. ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಪುಸ್ತಕಗಳಿಗಿರುವ ಶಕ್ತಿ ಟೆಲಿವಿಷನ್‌ಗೂ ಇಲ್ಲ, ಅಂತರ್ಜಾಲಕ್ಕೂ ಇಲ್ಲ. ನಾನು ಜೀವನದಲ್ಲಿ ನೋಡಿದ ಅತ್ಯಂತ ಯಶಸ್ವಿ ವ್ಯಕ್ತಿಗಳೆಲ್ಲರೂ ಓದಿನ ಹುಚ್ಚು ಇರುವವರು. ಅವರು ನಿರಂತರವಾಗಿ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ಶಾರ್ಪ್‌ ಹಾಗೂ ವಿಸ್ತಾರ ಮಾಡಿಕೊಳ್ಳುತ್ತಿರುತ್ತಾರೆ.

ಇಲ್ಲ ಎನ್ನುವುದನ್ನು ಕಲಿಯಿರಿ
ಅನೇಕರು ಜೀವನದಲ್ಲಿ ಎಲ್ಲೂ ತಲುಪದಂಥ ಸ್ಥಿತಿಗೆ ತಲುಪಿದ್ದರೆ, ಅದಕ್ಕೆ ಅವರಲ್ಲಿನ ಈ ದೌರ್ಬಲ್ಯವೇ ಕಾರಣ. ಏಕೆಂದರೆ ಅನೇಕರಿಗೆ ಜೀವನದಲ್ಲಿ ಅತ್ಯಂತ ಸವಾಲಿನ ಸಂಗತಿ ಎಂದರೆ ಇಲ್ಲ-ಆಗಲ್ಲ ಎಂದು ಹೇಳುವುದಕ್ಕೆ ಬರದಿರುವುದು. ಎದುರಿನವರು ಏನನ್ನಾದರೂ ಕೇಳಿದಾಗ, ನಿಮ್ಮ ಬಳಿ ಸಮಯ ಇಲ್ಲವೆಂದರೆ, ಸಹಾಯ ಮಾಡಲು ಮನಸ್ಸು ಇಲ್ಲ ಎಂದರೆ ಧೈರ್ಯವಾಗಿ ಇಲ್ಲ ಎಂದು ಹೇಳಿಬಿಡಿ. ಹೂಂ ಎಂದು ಹೇಳಿ ಅನಂತರ ನೀವು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿ ಕೊಳ್ಳಬೇಡಿ. ನೆನಪಿಡಿ, ಎಲ್ಲದಕ್ಕೂ ಹೂಂ ಎನ್ನುವವನು ತನ್ನ ಘನತೆಯನ್ನು ತಗ್ಗಿಸಿಕೊಳ್ಳುತ್ತಾ ಹೋಗುತ್ತಾ¤ನೆ. ನೋ ಎಂದು ಹೇಳುವ ಧೈರ್ಯವಂತನಿಗೆ ಜಗತ್ತಿನಲ್ಲಿ ಗೌರವ ಹೆಚ್ಚುತ್ತದೆ.

ಕೌಶಲವನ್ನು ವೃದ್ಧಿಸಿಕೊಳ್ಳಿ
ಒಬ್ಬ ಮನುಷ್ಯನಿಗೆ ತಿನ್ನಲು ಮೀನು ಕೊಟ್ಟರೆ, ನೀವು ಒಂದೇ ದಿನ ಆತನ ಹೊಟ್ಟೆ ತುಂಬಿಸುತ್ತೀರಷ್ಟೇ. ಅದೇ, ಆತನಿಗೆ ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ, ಜೀವನ ಪರ್ಯಂತ ಆತನ ಹೊಟ್ಟೆ ತುಂಬುತ್ತದೆ ಎನ್ನುವ ಮಾತಿದೆ. ಬದುಕಿನಲ್ಲಿ ಕೌಶಲ ಎನ್ನುವುದು ಎಷ್ಟು ಮುಖ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿರಿ, ದಿನಕ್ಕೆ ಎಷ್ಟು ಹೊತ್ತು ಆ ಕೆಲಸದಲ್ಲಿ ಶ್ರಮ ಹಾಕುತ್ತೀರಿ ಎನ್ನುವುದಕ್ಕಿಂತ ಮುಖ್ಯವಾಗಿ, ನೀವು ನಿತ್ಯವೂ ನಿಮ್ಮ ಕೌಶಲಗಳನ್ನು ಹೇಗೆ ಶಾರ್ಪ್‌ ಮಾಡಿಕೊಳ್ಳುತ್ತಾ ಹೋಗುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಪ್ರತೀ ದಿನ ನಿಮ್ಮ ಕೌಶಲವನ್ನು ವೃದ್ಧಿಸುವಂಥ ಸಾಧ್ಯತೆಗಳನ್ನು ಹುಡುಕಿ, ಆಗ ನವ ಅವಕಾಶಗಳು ನಿಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ. ನಿಂತ ನೀರಾಗಬೇಡಿ.

– ವಾರೆನ್‌ ಬಫೆಟ್‌, ಪ್ರಖ್ಯಾತ ಹೂಡಿಕೆದಾರ

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.