![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 27, 2023, 6:22 AM IST
ದುಬಾೖ: ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ಗೆಲುವಿನ ಓಟ ಆರಂಭಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಲಕ್ಷ್ಯ ಸೇನ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.
ವನಿತಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಪಿ.ವಿ. ಸಿಂಧು ತೈಪೆಯ ವೆನ್ ಚಿ-ಸು ಅವರನ್ನು 46 ನಿಮಿಷ ಗಳ ಹೋರಾಟದ ಬಳಿಕ 21-15, 22-20 ಅಂತರದಿಂದ ಮಣಿಸು ವಲ್ಲಿ ಯಶಸ್ವಿಯಾದರು. ಸಿಂಧು ಅವರ ಮುಂದಿನ ಎದುರಾಳಿ ಚೀನದ ಹಾನ್ ಯೆ.
ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ಬಹ್ರೈನ್‌ನ ಅದ್ನಾನ್ ಇಬ್ರಾಹಿಂ ಅವರನ್ನು ಕೇವಲ 25 ನಿಮಿಷ ಗಳಲ್ಲಿ 21-13, 21-8 ಅಂತರ ದಿಂದ ಹಿಮ್ಮೆಟ್ಟಿಸಿದರು.
ವನಿತಾ ಡಬಲ್ಸ್, ಮಿಶ್ರ ಡಬಲ್ಸ್
ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿ ಚಂದ್ ಸೇರಿಕೊಂಡು ಇಂಡೋನೇಷ್ಯಾದ ಲ್ಯಾನ್ನಿ ಟ್ರಿಯಾ ಮಾಯಾಸರಿ-ರಿಬ್ಕಾ ಸುಗಿಯಾರ್ಟೊ ಜೋಡಿಯನ್ನು 17-21, 21-17, 21-18ರಿಂದ ಪರಾಭವಗೊಳಿಸಿದರು.
ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್-ಸಿಕ್ಕಿ ರೆಡ್ಡಿ ಜಯ ಸಾಧಿಸಿದ್ದಾರೆ. ಇವರು ಮಲೇಷ್ಯಾದ ಚಾನ್ ಪೆಂಗ್ ಸೂನ್-ಚೆ ಯೀ ಸೀ ವಿರುದ್ಧ 21-12, 21-16ರಿಂದ ಗೆದ್ದರು.
ಕಾಮನ್ವೆಲ್ತ್ ಗೇಮ್ಸ್ ಬಂಗಾರ ಪದಕ ವಿಜೇತ ಲಕ್ಷ್ಯ ಸೇನ್ ಅವರನ್ನು ವಿಶ್ವದ 7ನೇ ನಂಬರ್ ಆಟಗಾರ ಸಿಂಗಾಪುರದ ಲೋಹ್ ಕೀನ್ ವ್ಯೂ 21-7, 23-21 ಅಂತರದಿಂದ ಪರಾಭವಗೊಳಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.