ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿಗೆ 1500 ಕೋಟಿಗೂ ಮಿಕ್ಕಿದ ವ್ಯವಹಾರ, 5.39 ಕೋಟಿ ನಿವ್ವಳ ಲಾಭ
Team Udayavani, Nov 26, 2021, 6:20 PM IST
ಶಿರಸಿ: 116 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕಾದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕು ಈ ಬಾರಿ 1500 ಕೋ.ರೂಪಾಯಿಗೂ ಅಧೀಕ ವ್ಯವಹಾರ ನಡೆಸಿ 5.39 ಕೋ.ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಜಯದೇವ ನೀಲೇಕಣಿ ತಿಳಿಸಿದ್ದಾರೆ.
2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬ್ಯಾಂಕು ತನ್ನ ಒಟ್ಟೂ ವ್ಯವಹಾರವನ್ನು 1599.07 ಕೋಟಿಗೆ ದಾಖಲಿಸಿಕೊಂಡಿರುತ್ತದೆ. ಒಟ್ಟೂ ಠೇವಣಿಯನ್ನು 1008.29 ಕೋಟಿಗಳಿಗೆ, ಸಾಲ ಮತ್ತು ಮುಂಗಡಗಳನ್ನು 590.78 ಕೋಟಿಗಳಿಗೆ ಹಾಗೂ ದುಡಿಯುವ ಬಂಡವಾಳವನ್ನು 1127.41 ಕೋಟಿಗಳಿಗೆ ಹೆಚ್ಚಿಸುವುದರೊಂದಿಗೆ, 8.40 ಕೋಟಿಗಳ ನಿರ್ವಹಣಾ ಲಾಭವನ್ನು ಹಾಗೂ ೫.೩೯ ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ ಎಂದರು.
ಬ್ಯಾಂಕಿನ ಸದಸ್ಯರ ಸಂಖ್ಯೆ ೪೪,೫೩೬ ದಾಟಿದ್ದು, ಸಂದಾಯಿತ ಶೇರು ಬಂಡವಾಳ ೨೨.೮೮ ಕೋಟಿ ತಲುಪಿದೆ. ಬ್ಯಾಂಕು ಕಳೆದ ವರ್ಷದ 73.44 ಕೋಟಿ ಆದಾಯವನ್ನು ೮೫.೮೩ ಕೋಟಿಗಳಿಗೆ ಹೆಚ್ಚಿಸಿರುತ್ತದೆ. ಈ ಆರ್ಥಿಕ ವರ್ಷದಲ್ಲಿಯೂ ಕೂಡ ಬ್ಯಾಂಕಿನ ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವು ಸೊನ್ನೆ ಪ್ರತಿಶತ ಇದೆ. ಬ್ಯಾಂಕಿನ ಒಟ್ಟೂ ವ್ಯವಹಾರವು 1360.37 ಕೋಟಿಗಳಿಂದ 1599.07 ಕೋಟಿಗಳನ್ನು ದಾಟಿದ್ದು,1125 ಕೋಟಿಗಿಂತಲೂ ಹೆಚ್ಚಿನ ದುಡಿಯುವ ಬಂಡವಾಳವನ್ನು ಹೊಂದಿ, ರಾಜ್ಯದ 264 ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಅಗ್ರ ಹತ್ತರಲ್ಲಿ ಒಂದು ಸ್ಥಾನವನ್ನು ಭದ್ರಪಡಿಸಿಕೊಂಡು ಬಂದಿದೆ ಎಂದೂ ತಿಳಿಸಿದ್ದಾರೆ.
ಬ್ಯಾಂಕು ಈ ಆರ್ಥಿಕ ವರ್ಷಾಂತ್ಯಕ್ಕೆ 590.78 ಕೋಟಿಗಳಷ್ಟು ಸಾಲವನ್ನು ವಿತರಿಸಿದ್ದು, ಆಧ್ಯತಾ ರಂಗಕ್ಕೆ ಒಟ್ಟೂ 294.70 ಕೋಟಿ ಮತ್ತು ದುರ್ಬಲ ವರ್ಗದವರಿಗೆ 48.43 ಕೋಟಿ ಸಾಲವನ್ನು ವಿತರಿಸಿದೆ. ಬ್ಯಾಂಕು ಗ್ರಾಹಕರ ಮತ್ತು ಸದಸ್ಯರ ಅಭಿವೃದ್ಧಿಗಾಗಿ ಸ್ಪರ್ಧಾತ್ಮಕ ದರಗಳಲ್ಲಿ ಹಲವಾರು ವ್ಯಾಪಾರೋದ್ಯಮ ವಲಯ, ವಾಣಿಜ್ಯ ಚಟುವಟಿಕೆಗಳಿಗೆ ವಿವಿಧ ಸಾಲ ಯೋಜನೆಗಳನ್ನು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ರೂಪಿಸಿ ವಿತರಿಸಿದೆ. ಬ್ಯಾಂಕಿನ ಎಲ್ಲಾ ಶಾಖೆಗಳು ಕೋರ ಬ್ಯಾಂಕಿಂಗ್ ಸೊಲ್ಯೂಶನ್ ಅಡಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ತಂತ್ರಜ್ಞಾನಪೂರಿತ ಮೌಲ್ಯವರ್ಧಿತ ಸೇವೆಗಳ ಉಪಯೋಗವನ್ನು ನಮ್ಮ ಗ್ರಾಹಕರು ಪಡೆಯುವಂತಾಗಿದೆ. ಬ್ಯಾಂಕು 2021-22 ನೇ ಸಾಲಿನಲ್ಲಿ ಗ್ರಾಹಕರಿಗೆ ಮೌಲ್ಯವರ್ಧಿತ ಸೇವಾ ಉತ್ಪನ್ನವಾದ ಯುನಿಫೈಡ್ ಪೇಮೆಂಟ್ಸ ಇಂಟರಫೇಸ್ ಸೌಲಭ್ಯವನ್ನು ನೀಡುವ ಕಾರ್ಯಯೋಜನೆಯನ್ನು ಹೊಂದಿದೆ. ಅದೇ ರೀತಿ ತಂತ್ರಜ್ಞಾನ ಪೂರಿತ ಹಲವಾರು ಡಿಜಿಟಲ್ ಪೇಮೆಂಟ್ ಸೇವೆಗಳನ್ನು ಬ್ಯಾಂಕು ಈಗಾಗಲೇ ನೀಡುತ್ತಿದ್ದು, ಗ್ರಾಹಕರು ಬ್ಯಾಂಕಿಂಗ್ ವ್ಯವಹಾರವನ್ನು ಸುರಕ್ಷತಾ ಪೂರ್ವಕ ನಡೆಸಲು ಅನುಕೂಲವಾಗುವಂತೆ ಭಾರತೀಯ ರಿಸರ್ವ ಬ್ಯಾಂಕಿನ ನಿರ್ದೇಶನಗಳನ್ವಯ ಸೈಬರ್ ಭದ್ರತಾ ನೀತಿ ನಿಯಮಾವಳಿಗಳನ್ನು ಬ್ಯಾಂಕು ರಚಿಸಿದ್ದು, ಪ್ರಸಕ್ತ ಸಾಲಿನಲ್ಲಿ ಇನ್ನೂ ಹೆಚ್ಚಿನ ಸೈಬರ್ ಭದ್ರತಾ ಕ್ರಮಗಳನ್ನು ಅಳವಡಿಸುವ ಕಾರ್ಯಯೋಜನೆಗಳನ್ನು ಹೊಂದಿರುತ್ತದೆ ಎಂದು ನಿಲೇಕಣಿ ತಿಳಿಸಿದ್ದಾರೆ.
ಬ್ಯಾಂಕು ಗ್ರಾಹಕರ ಅನುಕೂಲಕ್ಕಾಗಿ ಶಿರಸಿ ಪ್ರಧಾನ, ಶಿರಸಿ ಉಪನಗರ, ಮುಂಡಗೋಡ, ದಾಂಡೇಲಿ, ಶಿರಾಲಿ, ಹೊನ್ನಾವರ, ಅಂಕೋಲಾ, ಕುಮಟಾ, ಹುಬ್ಬಳ್ಳಿ ಹಾಗೂ ವೆಸ್ಟ್ ಆಫ್ ಕಾರ್ಡ ರೋಡ ಶಾಖೆಗಳಲ್ಲಿ ಈಗಾಗಲೇ ಶಾಖಾಸ್ಥಿತ ಎಟಿಎಮ್‌ಗಳನ್ನು ಅಳವಡಿಸಿದ್ದು, ಒಟ್ಟೂ ೧೦ ಎಟಿಮ್‌ಗಳು ಗ್ರಾಹಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಇಂತಹ ಸೇವೆಗಳನ್ನು ಗ್ರಾಹಕರ ಅವಶ್ಯಕತೆಗಳಿಗನುಸಾರವಾಗಿ ಬ್ಯಾಂಕು ಮುಂದೆಯೂ ಒದಗಿಸಲಿದೆ ಎಂದು ಎಂದು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್ ತಿಳಿಸಿದ್ದಾರೆ.
ಬ್ಯಾಂಕಿನ ಎಲ್ಲ ಸಾಧನೆಗಳಿಗೆ ಗೌರವಾನ್ವಿತ ಸದಸ್ಯರ, ಗ್ರಾಹಕರ ವಿಶ್ವಾಸ, ನಿರಂತರ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ನಿಷ್ಠಾಪೂರ್ಣ ಕರ್ತವ್ಯ ನಿರ್ವಹಣೆಯೇ ಕಾರಣ. ನ. 27 ರ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಬ್ಯಾಂಕಿನ ೧೧೬ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪ್ರತಿಭಾ ಪುರಸ್ಕಾರ, ಹಿರಿಯ ಸದಸ್ಯರಿಗೆ ಸಮ್ಮಾನ ಕೂಡ ನಡೆಯಲಿದೆ.
– ಜಯದೇವ ನಿಲೇಕಣಿ, ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.