ಕೊರಟಗೆರೆ: ಕರಡಿ ಕೊಂದು ತಿಂದ 6 ಮಂದಿ ಆರೋಪಿಗಳ ಬಂಧನ
Team Udayavani, Dec 17, 2021, 8:12 PM IST
ಕೊರಟಗೆರೆ: ಮನೆಯಲ್ಲಿ ಕರಡಿ ಮಾಂಸ ಇಟ್ಟುಕೊಂಡಿದ್ದ ಆರೋಪಿ ಸೇರಿದಂತೆ , ಈ ಕೃತ್ಯಕ್ಕೆ ಸಹಕರಿಸಿದ 6 ಮಂದಿಯನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ಲು ಗ್ರಾಮದ ಚಿಕ್ಕ ಬಸವಯ್ಯ ಎಂಬುವರ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿದಾಗ 1 ಕೆ.ಜಿ.50 ಗ್ರಾಂ ನಷ್ಟು ತೂಕದ ಕರಡಿ ಮಾಂಸ ಪತ್ತೆಯಾಗಿದೆ. ಈ ಮಾಂಸ ವನ್ಯಜೀವಿಯದ್ದೇ ಎಂದು ಪತ್ತೆ ಹಚ್ಚಲು ಮನೆ ಸುತ್ತ ಮುತ್ತ ಕೆಲವು ಸ್ಥಳಗಳನ್ನು ಪರಶೀಲಿಸಿದಾಗ, ಅದೇ ಗೌಜಗಲ್ಲು ಗ್ರಾಮದ ಗೋವಿಂದಪ್ಪನವರ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನು ಕತ್ತರಿಸಿ ಮಾಂಸಕ್ಕಾಗಿ ಪರಿವರ್ತಿಸಿರುವ ಸ್ಥಳ ವನ್ನು ಪತ್ತೆ ಮಾಡಿ, ದೇಹದ ಕೆಲವು ಭಾಗಗಳಾದ ಮುಂಗಾಲು, ನಾಲಿಗೆ, ತುಂಡಾಗಿರುವ ಬಾಲ , ಕೃತ್ಯಕ್ಕೆ ಬಳಸಿರುವ ಒಂದು ಮಚ್ಚು ಸ್ಥಳದಲ್ಲಿ ದೊರೆತಿದೆ. ಕಾಡು ಪ್ರಾಣಿಯ ದೇಹಗಳನ್ನು ಪರಶೀಲಿಸಿ ನೋಡಿ ಕರಡಿಯೇಂದು ದೃಢ ಪಡಿಸಿಕೊಂಡ ನಂತರ ಪ್ರಕರಣ ದಾಖಲಿಸಿಕೊಂಡು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯದಲ್ಲಿ ಪಾಲ್ಗೊಂಡ ಆರೋಪಿಗಳಾದ ಗೌಜಗಲ್ಲು ಗ್ರಾಮದ ಯತೀಶ್(19), ನಾಗರಾಜು(55),ಶ್ರೀಧರ್(32), ರಾಮಯ್ಯ( 62), ರಾಜಣ್ಣ(50), ಚಿಕ್ಕಬಸವಯ್ಯ(36), ಇನ್ನೋರ್ವ ಆರೋಪಿ ಚನ್ನಬಸವಯ್ಯ ತಲೆಮರೆಸಿಕೊಂಡು ಬಳಿಕ ನ್ಯಾಯಾಲಯದಲ್ಲಿ ಹಾಜರಾಗಿರುತ್ತಾನೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ಮಾಹಿತಿ ನೀಡಿದ್ದಾರೆ.
ಗ್ರಾಮದ ಚಿಕ್ಕ ಬಸವಯ್ಯ ಎಂಬುವರ ದೂರವಾಣಿ ಮೊಬೈಲ್ ನ್ನು ಸಿಡಿಆರ್ ಮಾಹಿತಿಯನ್ನು ಪಡೆದು ಪ್ರಕರಣಕ್ಕೆ ಸಂಭಂದಿಸಿರುವ ಆರೋಪಿಗಳನ್ನು ಪತ್ತೆ ಮಾಡಿ , ವಿಚಾರಣೆ ನಡೆಸಲಾಗಿದ್ದು ,ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ಕಾರ್ಯಚರಣೆಯಲ್ಲಿ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಎಸ್.ರಮೇಶ್,ಮಧುಗಿರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ವಲಯ ಅರಣ್ಯಾಧಿಕಾರಿ ಸುರೇಶ್, ಹೆಚ್ ನಾಗರಾಜು, ಸಿಬ್ಬಂದಿ ಗಳಾದ ವೆಂಕಟರಾಮು, ಚಾಂದ್ ಪಾಷಾ,ರಘು.ಕೆ.ಆರ್, ಜೀಬಿ ನರಸಿಂಹಯ್ಯ,ನರಸರಾಜು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.