ಆರು ವರ್ಷಗಳ ಬಳಿಕ “ಇಂಡೋ – ಪಾಕ್ ಎಕ್ಸ್‌ಪ್ರೆಸ್’ ಜತೆಯಾಟ
Team Udayavani, Mar 2, 2021, 11:40 PM IST
ಹೊಸದಿಲ್ಲಿ: “ಇಂಡೋ-ಪಾಕ್ ಎಕ್ಸ್‌ಪ್ರೆಸ್’ ಖ್ಯಾತಿಯ ರೋಹನ್ ಬೋಪಣ್ಣ ಮತ್ತು ಐಸಮ್ ಉಲ್ ಹಕ್ ಖುರೇಶಿ 6 ವರ್ಷಗಳ ಬಳಿಕ ಜತೆಯಾಗಿ ಟೆನಿಸ್ ಅಂಕಣಕ್ಕೆ ಇಳಿಯಲಿದ್ದಾರೆ. ಮಾ. 15ರಿಂದ ಮೆಕ್ಸಿಕೋದಲ್ಲಿ ಆರಂಭವಾಗಲಿರುವ “ಅಕಪೊಲ್ಕೊ ಎಟಿಪಿ 500 ಟೆನಿಸ್ ಟೂರ್ನಿ’ಯಲ್ಲಿ ಇವರು ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
2014ರಷ್ಟು ಹಿಂದೆ ಶೆಂಜೆನ್‌ನಲ್ಲಿ ನಡೆದ ಎಟಿಪಿ 250 ಪಂದ್ಯಾವಳಿಯಲ್ಲಿ ಬೋಪಣ್ಣ-ಖುರೇಶಿ ಕೊನೆಯ ಸಲ ಒಟ್ಟಿಗೇ ಆಡಿದ್ದರು. 2010ರ ಯುಎಸ್ ಓಪನ್ ಫೈನಲ್ ತಲುಪಿದ್ದು ಈ ಜೋಡಿಯ ಅಮೋಘ ಸಾಧನೆಯಾಗಿದೆ. ಅಂದು ಇವರು ಗ್ರೇಟ್ ಬ್ರಿಯಾನ್ ಬ್ರದರ್ಗೆ ಶರಣಾಗಿದ್ದರು. ಅದೇ ವರ್ಷ ಬೋಪಣ್ಣ ಡಬಲ್ಸ್‌ನಲ್ಲಿ ವಿಶ್ವದ ನಂ.3 ಟೆನಿಸಿಗನಾಗಿ ಬಹಳ ಎತ್ತರ ಏರಿದ್ದರು.
ಒಲಿಂಪಿಕ್ಸ್‌ಗಾಗಿ ಬೇರ್ಪಟ್ಟರು
2012ರಲ್ಲಿ ಬೋಪಣ್ಣ-ಖುರೇಶಿ ಜೋಡಿ ಬೇರ್ಪಟ್ಟಿತು. ಅಂದು ಬೋಪಣ್ಣ ಅವರ ಜತೆಗಾರನಾಗಿ ಕಾಣಿಸಿಕೊಂಡವರು ಭಾರತದವರೇ ಆದ ಮಹೇಶ್ ಭೂಪತಿ. ಲಂಡನ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವುದು ಇವರ ಉದ್ದೇಶವಾಗಿತ್ತು. 2014ರಲ್ಲಿ ಮತ್ತೆ ಬೋಪಣ್ಣ-ಖುರೇಶಿ ಜತೆಯಾದರು.
ಈಗ ಇಬ್ಬರಿಗೂ 40 ವರ್ಷ. ಸದ್ಯ ಮೆಕ್ಸಿಕೊ ಪಂದ್ಯಾವಳಿಯಲ್ಲಿ ಮಾತ್ರ ಇವರು ಜತೆಯಾಗಿ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.